ಶಾಸಕನ ಮುಖಕ್ಕೆ‌ ತಿರುಗಿ ಬಾರಿಸಿದ ಮತದಾರ; ಬೆಚ್ಚಿಬಿ ದ್ದ ಕನ್ನಡಿಗರು

 | 
Hu

ಲೋಕಸಭೆ ಚುನಾವಣೆ 2024ರ ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 175 ಸ್ಥಾನಗಳಿಗೆ ಮತದಾನ ಮೇ 13 ರಂದು ನಡೆಯಿತು. ಈ ವೇಳೆ ಶಾಸಕ ಹಾಗೂ ಮತದಾರನ ನಡುವೆ ಮಾರಾಮರಿ ನಡೆದಿದೆ. ಅದು ಕೂಡ ಮತದಾನ ಕೇಂದ್ರದಲ್ಲಿ ಇಬ್ಬರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅಷ್ಟಕ್ಕೂ ಸಮಾಜಕ್ಕೆ ಮಾದರಿಯಾಗಿರಬೇಕಾಗಿದ್ದ ಜನನಾಯಕನ ಇಂಥಹ ವರ್ತನೆಗೆ ಎಲ್ಲಡೆ ಆಕ್ರೊಶ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಶಾಸಕ ಎ ಶಿವಕುಮಾರ್ ಅವರು ಮತದಾನ ಕೇಂದ್ರದಲ್ಲಿ ಮತದಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಪಕ್ಷದ ಶಾಸಕ ಎ ಶಿವಕುಮಾರ್ ಮತದಾರನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯವಿದೆ. ಮತದಾರನು ಕೂಡ ಶಾಸಕರ ವಿರುದ್ಧ ಪ್ರತಿದಾಳಿ ನಡೆಸಿ ಥಳಿಸಿದ್ದಾನೆ. ವಿಡಿಯೊದಲ್ಲಿ ಶಿವಕುಮಾರ್ ಹಾಗೂ ಮತದಾರ ಇಬ್ಬರೂ ಪರಸ್ಪರ ಹಲ್ಲೆ ಮಾಡುತ್ತಿರುವುದು ಕಂಡು ಬರುತ್ತದೆ.

ಶಾಸಕ ಎ ಶಿವಕುಮಾರ್ ಸಿಟ್ಟಿನಿಂದ ಮತದಾರನತ್ತ ಸಾಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮತದಾರ ಶಿವಕುಮಾರ್‌ಗೆ ಕಪಾಳಮೋಕ್ಷ ಮಾಡುವ ಮೂಲಕ ಪ್ರತಿದಾಳಿ ಮಾಡುವುದಿದೆ. ಇದಾದ ಬಳಿಕ ಶಾಸಕರ ಬೆಂಬಲಿಗರು ಮತದಾರನಿಗೆ ಥಳಿಸಿದ್ದಾರೆ. ಇನ್ನು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಶಾಸಕರ ವರ್ತನೆಯನ್ನು ಅಹಂಕಾರ ಮತ್ತು ಗೂಂಡಾಗಿರಿ ಎಂದು ಕರೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.