ಈಕೆಯ ಸಾವಿನ ರಹಸ್ಯ ಕೇಳಿ ಇಡೀ ಭಾರತವೇ ಕಂಗಾಲಾಗಿತ್ತು, ಸಾಯುವ ಮುನ್ನ ಪತ್ರದಲ್ಲಿ ಏನಿತ್ತು ಗೊತ್ತಾ

 | 
ರಪಪ

ಆಕೆ ಇನ್ನೂ ಬಾಳಿ ಬದುಕಬೇಕಾದ ಬಾಲಕಿ  ಜೀವನದಲ್ಲಿ  ಕಳೆದಿದ್ದು ಕೆಲವೇ ವರ್ಷಗಳು ಮಾತ್ರ. ಇನ್ನು ಬದುಕಬೇಕಾಗಿದ್ದು ತುಂಬಾ ವರುಷ. ಆದರೆ ಅಷ್ಟರಲ್ಲಾಗಲೇ ಆ ಬಾಲಕಿ ದುಡುಕಿನ ನಿರ್ಧಾರ ಕೈಗೊಂಡು ಬಿಟ್ಟಿದ್ದಾಳೆ. ಗಣೇಶ ವಿಸರ್ಜನೆಗಾಗಿ  ನಿರ್ಮಿಸಿದ್ದ ಹೊಂಡದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಷ್ಟು ಚಿಕ್ಕ ಹುಡುಗಿ, ಅದ್ಯಾಕೆ ಬದುಕಿಗೆ ವಿದಾಯ ಹೇಳಿದ್ದಳು ಅಂತ ಊರಿನವರೆಲ್ಲ ಶಾಕ್‌ಗೆ  ಒಳಗಾಗಿದ್ದರು. ಆಕೆಯ ಮನೆಯವರು ಮಗಳನ್ನು ಕಳೆದುಕೊಂಡ ಶೋಕದಲ್ಲಿದ್ದರು. 

ಈ ನಡುವೆಯೇ ಆಕೆ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್‌ ನೋಟ್ ಸಿಕ್ಕಿದೆ. ಆ ಪತ್ರ ನೋಡಿ ಎಲ್ಲರೂ ಮತ್ತೊಮ್ಮೆ ಶಾಕ್‌ಗೆ ಒಳಗಾಗಿದ್ದಾರೆ. ಹೌದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಬಾಲಕಿಯೊಬ್ಬಳು ಆತ್ಮಹ್ಯೆ ಮಾಡಿಕೊಂಡಿದ್ದಾಳೆ. 16 ವರ್ಷ ವಯಸ್ಸಿನ 10ನೇ ತರಗತಿ ಓದುತ್ತಿದ್ದ ಬಾಲಕಿ ಸಾರಿಕಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಣೇಶ ವಿಸರ್ಜನೆಗೆ ಅಂತ ಗ್ರಾಮದಲ್ಲಿ ನಿರ್ಮಿಸಿದ್ದ ಹೊಂಡದಲ್ಲಿ ಜಿಗಿದು ಸೂಸೈಡ್ ಮಾಡಿಕೊಂಡಿದ್ದಾಳೆ. 

ಬಾಲಕಿ ಸಾರಿಕಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 4 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾಳೆ. ತನ್ನ ಶಾಲೆಯ ಗೆಳೆಯ, ಗೆಳತಿಯರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ಈ ಬಾಲಕಿ ಹೇಳಿಕೊಂಡಿದ್ದಾಳೆ. 4 ಪುಟಗಳಿದ್ದರೂ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎನ್ನುವುದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ. ಹೌದು, ಬಾಲಕಿ ಸಾರಿಕಾ ಸಾಯುವ ಮುನ್ನ ವಿಚಿತ್ರ ಡೆತ್‌ ನೋಟ್ ಬರೆದಿಟ್ಟಿದ್ದಾಳೆ. ಅದರಲ್ಲಿ ತನ್ನ ಕೊನೆಯ ಆಸೆ ಏನು ಎನ್ನುವ ಬಗ್ಗೆ ಬರೆದಿದ್ದಾಳೆ. ಆಕೆ ಅದರಲ್ಲಿ ವ್ಯಕ್ತಪಡಿಸಿರುವ ಕೊನೆಯ ಆಸೆಯಂತೂ ವಿಚಿತ್ರವಾಗಿದೆ. 

ನನ್ನದು ಒಂದೇ ಆಸೆ, ನನ್ನ ಶವ ನೋಡೋಕೆ ಎಲ್ಲರೂ ಬನ್ನಿ, ಇಲ್ಲಾ ಅಂದ್ರೆ ನಾನು ದೆವ್ವ ಆಗಿ ಬರ್ತೀನಿ ನೋಡಿ ಎಂಬುದಾಗಿ ತನ್ನ ಡೆತ್​ನೋಟ್​ನ ಕೊನೆಯಲ್ಲಿ ಬರೆದುಕೊಂಡಿದ್ದಾಳೆ. ಈ ಮೂಲಕ ತನ್ನ ಸ್ನೇಹಿತ, ಸ್ನೇಹಿತೆಯರಿಗೆ ವಿಚಿತ್ರ ರೀತಿಯಲ್ಲಿ ಎಚ್ಚರಿಕೆ ನೀಡಿದ್ದಾಳೆ. ಇನ್ನು ವಿದ್ಯಾರ್ಥಿನಿ ಬರೆದಿದ್ದ ಆ ಡೆತ್​​ನೋಟ್ ನ ಮಾಹಿತಿ ಬಹಿರಂಗಗೊಂಡಿದ್ದು, ವಿದ್ಯಾರ್ಥಿನಿ ಅದರಲ್ಲಿ ತನ್ನ ಕೊನೆಯ ಆಸೆಯನ್ನೂ ಹೇಳಿಕೊಂಡಿದ್ದಾಳೆ. 

ಈ ಡೆತ್ ನೋಟ್ ಈಗ ವೈರಲ್ ಆಗಿದೆ. ಇನ್ನು ಈ ಘಟನೆ ಬಗ್ಗೆ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಇಂದಿನ ಮಕ್ಕಳು ಅತಿ ಸೂಕ್ಷ್ಮ ಮನಸ್ಥಿತಿ ಹೊಂದಿದ್ದು ಪ್ರತಿ ಪಾಲಕರು ಕೂಡ ಮಕ್ಕಳನ್ನು ಬೆಳೆಸುವಲ್ಲಿ ಎಡವುತ್ತಿದ್ದಾರೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.