ಇಡೀ ಕರುನಾಡೇ ಖುಷಿಪಡೋ ಸುದ್ದಿ, ವತೂ೯ರ್ ಗೆ ಪ್ರಪೋಸ್ ಮಾಡಿಯೇ ಬಿಟ್ಟ ತನಿಷಾ!

 | 
ಪದ
 ಬಿಗ್ಬಾಸ್ ಪ್ರಿಯರ ಮನಗೆದ್ದ ಬಿಗ್‌ ಬಾಸ್‌ ಕನ್ನಡ ಸೀಜನ್‌ 10ರ ಹಿಟ್‌ ಜೋಡಿ ಅಂದರೆ ಅದು ಹಳ್ಳಿಕಾರ್‌ ವರ್ತೂರು ಸಂತೋಷ್‌ ಹಾಗೂ ಬೆಂಕಿ ತನಿಷಾ ಕುಪ್ಪಂಡ. ಶೋ ಮುಗಿದು ವರ್ಷಗಳದರೂ ಕೂಡ ಈ ಜೋಡಿಯ ಮೇಲೆ ಜನರಿಗೆ ಒಂಥರಾ ಪ್ರೀತಿ. ಹೀಗಾಗಿ ಪದೇ ಪದೇ ಇಬ್ಬರನ್ನು ಜೊತೆಯಾಗಿ ನೋಡಲು ಇಷ್ಟಪಡುತ್ತಾರೆ. ಬಿಗ್‌ ಬಾಸ್‌ ಬಳಿಕ ಕೆಲವು ಕಿರುತೆರೆ ಶೋಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ವರ್ತೂರ್‌ ಸಂತೋಷ್‌ ಹಾಗೂ ತನಿಷಾ ಕುಪ್ಪಂಡ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಿರುತ್ತದೆ. ವರ್ತೂರ್‌ ಸಂತೋಷ್‌ ಹಾಗೂ ತನಿಷಾ ಇತ್ತೀಚಿಗೆ ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಪ್ರೀತಿ ಇದೆ ಎನ್ನುವ ಗುಸು ಗುಸು ಮಾತುಗಳು ಆಗಾಗ ಕೇಳಿ ಬರುತ್ತಿರುತ್ತದೆ. ಈ ಪ್ರಶ್ನೆಗೆ ತನಿಷಾ ಕುಪ್ಪಂಡ ಸಂದರ್ಶನವೊಂದರಲ್ಲಿ ನೇರವಾಗಿ ಉತ್ತರಿಸಿರುವುದಲ್ಲದೇ, ವರ್ತೂರು ಸಂತೋಷ್‌ಗೆ ಐ ಲವ್‌ ಯೂ ಎಂದಿದ್ದಾರೆ.
ಅಷ್ಟಕ್ಕೂ Kannada Filmistry ಯೂಟ್ಯೂಬ್‌ ಚಾನೆಲ್‌ನ ಸಂದರ್ಶನದ ಮಧ್ಯದಲ್ಲಿ ತನಿಷಾ, ವರ್ತೂರು ಸಂತೋಷ್‌ಗೆ ಕರೆ ಮಾಡಿದ್ದಾರೆ. ಮೊದಲು ಉಭಯ ಕುಶಲೋಪರಿ ವಿಚಾರಿಸಿದ ಬಳಿಕ.. ವರ್ತೂ, ನಾನೇದಾರೂ ನಿನಗೆ ಅಲ್ಲಿ ಮನೆ ಹತ್ತಿರ ಬಂದು ಐ ಲವ್‌ ಯೂ ಅಂತಾ ಹೇಳಿದರೆ ಏನು ಮಾಡುತ್ತೀಯಾ ಎಂದು ಪ್ರಶ್ನಿಸಿದ್ದಾರೆ.
ತನಿಷಾ ಪ್ರಶ್ನೆಗೆ ಉತ್ತರಿಸಿದ ವರ್ತೂರು ಸಂತೋಷ್‌, ಅದರಲ್ಲೇನಿದೆ ಫ್ರೆಂಡ್ಸ್‌ ಐ ಲವ್‌ ಯೂ ಹೇಳುತ್ತಿದ್ದಾರೆ ಅಂದುಕೊಳ್ಳುತ್ತೇನೆ ಎಂದಿದ್ದಾರೆ. ವರ್ತೂರು ಸಂತೋಷ್‌ ಉತ್ತರಕ್ಕೆ ಜೋರಾಗಿ ನಕ್ಕ ತನಿಷಾ ಥ್ಯಾಂಕ್ಯೂ ಫ್ರೆಂಡ್ಸ್‌ ಇಲ್ಲೋಬ್ಬರು ನಮ್ಮಿಬ್ಬರ ಬಗ್ಗೆ ಡೌಟ್‌ ಎನ್ನುತ್ತಿದ್ದರು. ಅದಕ್ಕೆ ಕಾಲ್‌ ಮಾಡಿದೆ ಅವರ ಅನುಮಾನಕ್ಕೆ ನೀನೇ ಉತ್ತರ ಕೊಡು ಎಂದಿದ್ದಾರೆ. ವರ್ತೂರು ಸಂತೋಷ್‌ ತಾವಿಬ್ಬರು ಸ್ನೇಹಿತರು ಎನ್ನುವುದನ್ನು ಸಂದರ್ಶಕರಿಗೆ ತಿಳಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.