ದಿನ ನಿತ್ಯ ಆಂಟಿ ಮನೆಗೆ ಸುಖದಾಟಕ್ಕೆ‌ ಬರುತ್ತಿದ್ದ ಯುವಕ; ಆಕೆ ಗರ್ಭಿಣಿ ಎಂದ ತಕ್ಷಣ ಈತ ಪರಾರಿ

 | 
Ye

ಮದುವೆಯಾಗುತ್ತೇನೆಂದು ನಂಬಿಸಿ ವಿಚ್ಛೇದಿತ ಮಹಿಳೆಯನ್ನ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಘಟನೆ ಮೈಸೂರಿನ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯಲ್ಲಿ ನಡೆದಿದೆ.ಮೈಸೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ 34 ವರ್ಷದ ಸಂತ್ರಸ್ತೆ. ಕೊಳ್ಳೇಗಾಲದ ತೇರಂಬಳ್ಳಿ ಗ್ರಾಮದ ಹರೀಶ ವಂಚಿಸಿ ನಾಪತ್ತೆಯಾಗಿರುವ ಆರೋಪಿ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಆರೋಪಿ ಹರೀಶ್, ಸಂತ್ರಸ್ತೆಯೊಂದಿಗೆ ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ. 

ನೊಂದ ಮಹಿಳೆ ಗರ್ಭಿಣಿಯಾಗಿರುವುದು ತಿಳಿದು ನಾಪತ್ತೆಯಾಗಿರುವ ಆಸಾಮಿ. ಪ್ರಿಯಕರನ ವಂಚನೆಯಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ. ನ್ಯಾಯ ಕೊಡಿಸುವಂತೆ ಮೈಸೂರಿನ ಸರಸ್ವತಿ ಪುರಂ ಪೋಲಿಸ್ ಠಾಣೆಗೆ ನೀಡಿದ್ದಾರೆ. ಸಂತ್ರಸ್ತೆ ಮಹಿಳೆ ಈಗಾಗಲೇ ಮದುವೆಯಾಗಿದೆ. ಆದರೆ ದಾಂಪತ್ಯ ಕಲಹದಿಂದ 2018ರಲ್ಲಿ ಗಂಡನಿಂದ ವಿಚ್ಛೇದನ ಪಡೆದು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸ್ವತಂತ್ರವಾಗಿ ಜೀವನ ಸಾಗಿಸಿದ್ದಳು.

ಆದರೆ ವಿಚ್ಛೇದಿತ ಮಹಿಳೆ ಬಾಳಲ್ಲಿ  ಆರೋಪಿ ಹರೀಶ್ ಎಂಟ್ರಿ ಆಗಿದ್ದಾನೆ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರವೃತ್ತಿಯಲ್ಲಿ ಉತ್ತಮ ಹಾಡುಗಾರನಾಗಿದ್ದಾನೆ. ಇತ್ತ ಸಂತ್ರಸ್ತೆ ಮಹಿಳೆ ಕೂಡ ಹಾಡುಗಾರ್ತಿ ಆಗಿದ್ದರಿಂದ ಸಿಂಗಿಂಗ್ ಇವೆಂಟ್ಸ್ ಗಳಲ್ಲಿ ಹಾಡು ಹೇಳಲು ಹೋಗುತ್ತಿದ್ದಾಗ ಇಬ್ಬರು ಪರಸ್ಪರ ಪರಿಚಯವಾಗಿದ್ದಾರೆ. ಪರಿಚಯ ಪ್ರೀತಿಗೆ ತಿರುಗಿದೆ.

ಮಹಿಳೆ ವಿಚ್ಛೇದಿತಳಾಗಿದ್ದು ತಿಳಿದು ಆಂಟಿ ಪ್ರೀತ್ಸೆ ಅಂತಾ ದುಂಬಾಲು ಬಿದ್ದಿದ್ದ ಪ್ರಿಯಕರ ಮೊದಲಿಗೆ ನಿರಾಕರಿಸಿರುವ ಸಂತ್ರಸ್ತೆ ಬಳಿಕ ಯುವಕ ಮದುವೆಯಾಗುತ್ತೇನೆಂದು ನಂಬಿಸಿದ್ದರಿಂದ ಬಾಳಲ್ಲಿ ಸಂಗಾತಿಯೊಬ್ಬ ಬೇಕೇಬೇಕು ಅಲ್ಲವೇ ಹೀಗಾಗಿ ಅವನ ಪ್ರಪೋಸ್ ಒಪ್ಪಿಕೊಂಡು ಪರಸ್ಪರ ಪ್ರೀತಿಯಲ್ಲಿ ಬಿದ್ದು ಪ್ರಣಯ ಹಕ್ಕಿಗಳಂತೆ ಎಲ್ಲವೂ ಮಾಡಿಕೊಂಡಿದ್ದಾರೆ.ಅಲ್ಲಿಂದ ಟೀಚರಮ್ಮ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಹರೀಶ್, ಪ್ರಣಯದಾಟ ಆಡಿದ್ದಾನೆ.

 ಆದರೆ ಯಾವಾಗ ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆಂಬುದು ತಿಳಿಯಿತೋ ಅಲ್ಲಿಂದ ಪ್ರಿಯಕರ ನಾಪತ್ತೆಯಾಗಿದ್ದಾನೆ. ಇತ್ತ ಮದುವೆಯಾಗುತ್ತಾನೆಂದು ನಂಬಿ ಸರ್ವಸ್ವ ಒಪ್ಪಿಸಿ ಬಸಿರು ಆದ ಸಂತ್ರಸ್ತೆ ಶಾಕ್‌ ಆಗಿದ್ದಾಳೆ. ಸುತ್ತಮುತ್ತಲೆಲ್ಲ ವಿಚಾರಿಸಿದರೂ ಪ್ರಿಯಕರನ ಮಾಹಿತಿ ಇಲ್ಲ, ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದರಿಂದ ವಂಚನೆಗೊಳಗಾಗಿರುವುದು ತಿಳಿಯುತ್ತಿದ್ದಂತೆ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.