ಶಾ.ಸಕ ಮುನಿರತ್ನ ಮಾಡಿದ ಆ ಕೆಲಸದ ಬಗ್ಗೆ ಓಪನ್ ಆಗಿ ಹೇಳಿಕೊಂಡ ಯುವತಿ, ಬಯಲಾಯಿತು ಬಂಡವಾಳ

 | 
Bxbs

ಇದೀಗ ಎಲ್ಲೆಡೆ ವೈರಲ್ ಆಗ್ತಿದೆ ಮುನಿರತ್ನ ಪುರಾಣ. ಹೌದು ರಾಜ್ಯ ರಾಜಧಾನಿಯ ಸ್ಥಳೀಯ ಆಡಳಿತ ಸಂಸ್ಥೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಿಂದಿನ ಹಣಕಾಸು ವಿಭಾಗದ ಆಯುಕ್ತೆ ತುಳಸಿ ಮದ್ದಿನೇನಿ ಅವರ ಪತಿ ರವಿಶಂಕರ್‌ ಅವರ ಮೋಸದ ವಿರುದ್ಧ ನಾನು ದೂರು ಕೊಟ್ಟಿದ್ದರಿಂದಲೇ, ಶಾಸಕ ಮುನಿರತ್ನ ಅವರು ನನಗೆ ವಂಚನೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತೆ ವಿದ್ಯಾ ಹಿರೇಮಠ್‌ ಹೇಳಿಕೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮುನಿರತ್ನ ಅವರು ನನಗೆ ಹ್ಯಾನಿಟ್ರ್ಯಾಪ್ ಮಾಡಿಸಿದ್ದಾರೆ. ರಾಜ್ಯದ ಹಿರಿಯ ಐಎಎಸ್‌ ಅಧಿಕಾರಿ ತುಳಸಿ ಮದ್ದಿನೇನಿ ಅವರ ಪತಿ ವಿರುದ್ದ ನಾನು ಕೇಸ್ ದಾಖಲು ಮಾಡಿದ್ದೆನು. ಅವರ ಪತಿ ಐಎಫ್‌ಎಸ್‌ ಅಧಿಕಾರಿ ರವಿಶಂಕರ್ ನನ್ನನ್ನು ಮದುವೆ ಆಗುತ್ತೇನೆಂದು ಮೋಸ ಮಾಡಿದ್ದಾರೆ. 

ರವಿಶಂಕರ್ ಬಹಳ ವರ್ಷಗಳಿಂದ ನನಗೆ ಪರಿಚಯ. ಮದುವೆಯಾಗುತ್ತೇನೆಂದು ನನಗೆ ಮೋಸ ಮಾಡಿದ್ದರು.
ನನ್ನೊಂದಿಗೆ ಹನಿಟ್ರ್ಯಾಪ್‌ ಮಾಡಲಾಗಿದೆ ಎಂದು ಆ ವ್ಯಕ್ತಿ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದನು. ಹನಿಟ್ರ್ಯಾಪ್ ಬಗ್ಗೆ ನನ್ನ ವಿರುದ್ದ ಆ ವ್ಯಕ್ತಿ ದೂರು ನೀಡಿದ್ದನು. 

ಬಳಿಕ ಅನ್ನಪೂರ್ಣೇಶ್ವರಿ ನಗರ ಇನ್ಸ್ಪೆಕ್ಟರ್ ಲೋಹಿತ್ ಅವರು, ನನ್ನನ್ನು ಅರೆಸ್ಟ್ ಮಾಡಿದರು. ನನ್ನನ್ನು ಬಂಧನ ಮಾಡಿದ ಬಳಿಕ ನ್ಯಾಯಲಯಕ್ಕೆ ಹಾಜರುಪಡಿಸದೆ, ಸೀದಾ ಪೊಲೀಸರು ಅಂದಿನ ತೋಟಗಾರಿಕಾ ಸಚಿವ ಮುನಿರತ್ನ ಮನೆಗೆ ಕರೆದುಕೊಂಡು ಹೋದರು.
ಮುನಿರತ್ನ ಅವರ ಮನೆಯಲ್ಲಿ ನಾನು IFS ಅಧಿಕಾರಿ ವಿರುದ್ದ ದಾಖಲು ಮಾಡಿರುವ ಕೇಸ್ ವಾಪಸ್ಸು ಪಡೆಯುವಂತೆ ಆಮಿಷ ಒಡ್ಡಿದರು. ಆಗ ಒಂದು ಫ್ಲ್ಯಾಟ್‌, ಹಣ ಹಾಗೂ ವಿಧಾನ ಪರಿಷತ್‌ ಟಿಕೆಟ್‌ ನೀಡುಬವ ಆಫರ್‌ ನೀಡಿದರು. 

ಆದರೆ, ಇದ್ಯಾವುದಕ್ಕೂ ನಾನು ರಾಜಿಯಾಗಿಲ್ಲ. ಬಳಿಕ ಮುನಿರತ್ನ ಅವರು ವಿಕಾಸಸೌಧದ ತಮ್ಮ ಕಚೇರಿಗೆ ಕರೆಸಿಕೊಂಡರು. ಅಲ್ಲಿ ಚಿನ್ನ, ರನ್ನ, ಸ್ಪೀಟ್ ಹಾರ್ಟ್ ಎಂದು ಹೇಳುತ್ತಾ ಕೇಸ್‌ ವಾಪಸ್‌ ಪಡೆಯಲು ತಿಳಿಸಿದರು. ಆದರೂ ನಾನು, ಈ ಪ್ರಕರಣ ತನಿಖೆ ನಡೆಸುವಂತೆ ಮುನಿರತ್ನ ವಿರುದ್ಧ ಜನಪತ್ರಿನಿಧಿಗಳ ವಿಶೇಷ ಕೋರ್ಟ್‌ಗೆ ದೂರು ಕೊಟ್ಟಿದ್ದೆನು. ಆಗ ಮುನಿರತ್ನ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಬಾರದು ಅಂತ ಮಿಡಿಯಾಕ್ಕೆ ಕೋರ್ಟ್ ಆದೇಶ ಹೊರಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.