ಜೀವನದಲ್ಲಿ ಮುಗಿಯಿತ್ತಿಲ್ಲ ಕಷ್ಟಗಳು, ಕಣ್ಣೀರು ಹಾಕಿದ ತವರಿನ ಸಿರಿ ಆಶಿತಾ
Apr 10, 2025, 17:04 IST
|

ಬಾ ಬಾರೋ ರಸಿಕ, ತವರಿನ ಸಿರಿ, ಆಕಾಶ್ ಸೇರಿದಂತೆ ಕನ್ನಡದ ಹಲವು ಹಿಟ್ ಸಿನಿಮಾ ನೀಡಿರುವ ನಟ ಆಶಿತಾ ಮಾರಿಯಾ ಕ್ರಾಸ್ತಾ ಸದ್ಯ ಸಿನಿಮಾರಂಗ ದಿಂದ ದೂರ ಉಳಿದಿದ್ದಾರೆ. ಆದರೂ ಸೋಶಿಯಲ್ ಮೀಡಿಯಾ ಮೂಲಕ ಸಕ್ರಿಯರಾಗಿರುವ ನಟಿ ತನ್ನ ವೈಯಕ್ತಿಕ ವಿಚಾರವನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ದಿಢೀರ್ ಆಗಿ ನಟಿ ಬಿಕ್ಕಿ ಬಿಕ್ಕಿ ಕಣ್ಣೀರಾಕಿದ್ದಾರೆ. ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡು, ತಮ್ಮ ಕಷ್ಟಗಳನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಾಗಿದ್ದಾರೆ. ಇವರ ವಿಡಿಯೊ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ನೋಡಿ ಭಾವುಕರಾಗಿದ್ದಾರೆ.
ನಟಿ ಆಶಿತಾ ಸ್ಯಾಂಡಲ್‌ವುಡ್‌ನಲ್ಲಿ ಹಲವು ಹಿಟ್ ಸಿನಿಮಾ ನೀಡಿ ಜನಪ್ರಿಯರಾಗಿದ್ದಾರೆ. ಕೊನೆಯದಾಗಿ ರೋಡ್ ರೋಮಿಯೋ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಮತ್ಯಾವ ಸಿನಿಮಾಗಳಲ್ಲಿಯೂ ನಟಿ ತೆರೆ ಹಂಚಿಕೊಂಡಿಲ್ಲ. ಇದೀಗ ನಟಿ ಆಶಿತಾ ತಮ್ಮ ಕಷ್ಟಗಳನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಆಶಿತಾ ನನಗೆ ಫುಡ್ ಪಾಯಿಸನ್ ಆಗೋಯ್ತು. ಒಬ್ಬಳೇ ಇದ್ದೆ ನನಗೆ ಏನು ಮಾಡಬೇಕು ಅಂತಲೇ ಗೊತ್ತಾಗಿಲ್ಲ. ಆ ಸಮಯದಲ್ಲಿ ಯಾರಾದರೂ ಸಹಾಯಕ್ಕೆ ಬೇಕಿತ್ತು. ನನ್ನ ಸ್ನೇಹಿತರೊಬ್ಬರಿಗೆ ತಿಳಿಸಿದೆ. ಅವರು ಕೆಲಸ ಬಿಟ್ಟು ನನ್ನ ನೋಡಲು ಬಂದರು ಎಂದು ಆ ದಿನವನ್ನು ನೆನಪಿಸಿಕೊಂಡು ಆಶಿತಾ ಕಣ್ಣೀರು ಹಾಕಿದ್ದಾರೆ.
ದೇವರಲ್ಲಿ ನಾನು ಬಹಳಷ್ಟು ನಂಬಿಕೆ ಇಟ್ಟಿದ್ದೇನೆ. ದೇವರು ನನ್ನ ಯಾವತ್ತು ಕೈ ಬಿಟ್ಟಿಲ್ಲ ಭಗವಂತನಲ್ಲಿ ನಂಬಿಕೆ ಇಲ್ಲದಿದ್ದರೆ ಜೀವನದಲ್ಲಿ ಏನೂ ಸಾಧ್ಯವಿಲ್ಲ. ಈಗ ಅಳುತ್ತಿರುವುದು ದುಃಖದಿಂದ ಅಲ್ಲ, ದೇವರು ನನ್ನ ಕೈಬಿಟ್ಟಿಲ್ಲ ಎನ್ನುವ ಭರವಸೆಯಿಂದ. ಹಾಗಾಗಿ ನಾವು ಕಷ್ಟದಲ್ಲಿ ಇದ್ದಾಗ ದೇವರು ಒಬ್ಬರನ್ನು ಕಳುಹಿಸುತ್ತಾನೆ, ಅದು ಯಾವುದೇ ಸಂದರ್ಭ ಇರಬಹುದು ಎಂದು ವಿಡಿಯೊ ಮಾಡಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೊ ನೋಡಿದ ಹೆಚ್ಚಿನ ಅಭಿಮಾನಿಗಳು ನಟಿಗೆ ದೈರ್ಯ ತುಂಬಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,27 Apr 2025
ಶ್ರೀಧರ್ ಪರಿಸ್ಥಿತಿ ಚಿಂತಾಜನಕ, ಮುದ್ದಾದ ಜೀವನ ಅಂತ್ಯದ ಹಾದಿ
Sun,27 Apr 2025