ಸಾಕ್ಷಾತ್ ಪರಬ್ರಹ್ಮ ಶ್ರೀರಾಮನ ವಂಶಸ್ಥರು ಎಲ್ಲಿದ್ದಾರೆ ಗೊತ್ತಾ, ಈಗಲೂ ಬದುಕಿದ್ದಾರೆ ಎಂಬ ಕುರುಹುಗಳು ಸಿಕ್ಕಿವೆ

 | 
G

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಉದ್ಘಾಟನೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಮಂದಿರದ ನಿರ್ಮಾಣಕ್ಕಾಗಿ ನೂರಾರು ವರ್ಷಗಳಿಂದ ಸತತವಾಗಿ ‌ಕಾನೂನಾತ್ಮಕ ಹೋರಾಟಗಳು ನಡೆದ ಬಳಿಕ ಈ ದೇಶದ ಪರಮೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟಿನ ತೀರ್ಪಿನ ನಂತರವೇ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾದದ್ದು ಹಿಂದೂಗಳ ಸಹಿಷ್ಣುತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಸಂಧರ್ಭದಲ್ಲಿ ಪ್ರಭು ಶ್ರೀರಾಮನ ವಂಶದ ಜನರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ . 

ಪ್ರಭು ಶ್ರೀರಾಮನ ವಂಶ, ಇಕ್ಷ್ವಾಕು ವಂಶದ ಆರಂಭ ಸ್ವತಃ ಪ್ರಭು ಶ್ರೀರಾಮನಿಂದಲೇ ಆರಂಭವಾಗಿದೆ ಅಂದರೆ ಶ್ರೀ ರಾಮನ ಮೂಲರೂಪ ಶ್ರೀ ಹರಿಯಿಂದಲೇ ಆರಂಭವಾಗಿದೆ.ಶ್ರೀ ಹರಿಯ ಮಗ ಬ್ರಹ್ಮದೇವರು, ಬ್ರಹ್ಮ ದೇವರ ಮಗ ಮರೀಚಿ, ಮರೀಚಿಯ ಮಗ ಕಾಶ್ಯಪ, ಕಾಶ್ಯಪರ ಮಗ ಸೂರ್ಯ, ಸೂರ್ಯನ ಮಗ ಮನು, ಮನುವಿನ ಮಗು ಇಕ್ಷ್ವಾಕು. ಇಕ್ಷ್ವಾಕುವಿನ ಮಗ ಕುಕ್ಷಿ, ಕುಕ್ಷಿಯ ಮಗ ವಿಕುಕ್ಷಿ, ವಿಕುಕ್ಷಿಯ ಮಗ ಬಾಣ, ಬಾಣನ ಮಗ ಅನರಣ್ಯ, ಅನರಣ್ಯನ‌ ಮಗ ಪೃಥು, ಪೃಥುವಿನ‌ ಮಗ ತ್ರಿಶಂಕು, ತ್ರಿಶಂಕುವಿನ ಮಗ ದುಂಧುಮಾರ, ದುಂಧುಮಾರುವಿನ ಮಗ ಮಾಂಧಾತ, ಮಾಂಧಾತುವಿನ ಮಗ ಸುಸಂಧಿ, ಸುಸಂಧಿಯ ಮಗ ಧೃವಸಂಧಿ, ಧೃವಸಂಧಿಯ ಮಗ ಭರತ.

ಭರತನ ಮಗ ಅಶೀತಿ, అಶೀತಿಯ ಮಗ ಸಗರ, ಸಗರನ ಮಗ ಅಸಮಂಜಸ, ಅಸಮಂಜಸನ ಮಗ ಅಂಶುಮಂತ, ಅಂಶುಮಂತನ ಮಗ ದಿಲೀಪ, ದಿಲೀಪನ ಮಗ ಭಗೀರಥ, ಭಗೀರಥನ ಮಗ ಕಕುತ್ಸು. ಕಕುತ್ಸುವಿನ ಮಗ ರಘು, ರಘುವಿನ ಮಗ ಪ್ರವುರ್ಧ, ಪ್ರವುರ್ಧನ ಮಗ ಶಂಖನು, ಶಂಖನುವಿನ ಮಗ ಸುದರ್ಶನ, ಸುದರ್ಶನನ ಮಗ ಅಗ್ನಿವರ್ಣ.ಅಗ್ನಿವರ್ಣನ ಮಗ ಶೀಘ್ರವೇದ, ಶೀಘ್ರವೇದನ ಮಗ ಮರು, ಮರುವಿನ ಮಗ ಪ್ರಶಿಷ್ಯಕ, ಪ್ರಶಿಷ್ಯಕನ ಮಗ ಅಂಬರೀಶ, ಅಂಬರೀಶನ ಮಗ ನಹುಶ, ನಹುಶನ ಮಗ ಯಯಾತಿ, ಯಯಾತಿಯ ಮಗ ನಾಭಾಗ, ನಾಭಾಗನ ಮಗ ಅಜನ, ಅಜನ ಮಗ ದಶರಥ, ದಶರಥನ‌ ಮಗ ಪ್ರಭು ಶ್ರೀರಾಮ. 

ಶ್ರೀ ರಾಮನಿಗೆ ಲವ-ಕುಶರೀರ್ವರು ಮಕ್ಕಳು,ಮಕ್ಕಳಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳಿದರೆ, ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ  ರಾಜ್ಯವಾಳಿದರು. ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ, ಅವನಿಂದ ನಿಷಧ, ನಭ, ಪುಂಡರೀಕ, ಕ್ಷೇಮಧನ್ವಾ, ದೇವಾನೀಕ, ಅನೀಹ, ಪಾರಿಯಾತ್ರ ಬಲಸ್ಥಲ, ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ. ವೃಜನಾಭನ ಮಗ ಖಗಣ, ಖಗಣನ ಮಗ ವಿಧೃತಿ, ಅವನ ಮಗ ಹಿರಣ್ಯನಾಭ, ಹಿರಣ್ಯನಾಭನ ಮಗ ಪುಷ್ಯ, ಪುಷ್ಯನ‌ ಮಗ ಧ್ರುವಸಂಧಿ, ಧ್ರುವಸಂಧಿಯ‌ ಮಗ ಸುದರ್ಶನ, ಅವನ ಮಗ ಅಗ್ನಿವರ್ಣ, ಅಗ್ನಿವರ್ಣನ‌ ಮಗ ಶೀಘ್ರ.

ಶೀಘ್ರನ‌ ಮಗ ಮರು. ಮರುವಿನ ಮಗ ಪ್ರಸುಶ್ರುತ ಸಂಧಿ, ಅವನ‌ ಮಗ ಅಮರ್ಷಣ, ಅವನ‌ ಮಗ ಮಹಸ್ವಂತ, ಮಹಸ್ವಂತನ‌ ಮಗ ವಿಶ್ವಸಾಹ್ವ, ಅವನ‌ ಮಗ ಪ್ರಸೇನಜಿತ್, ಪ್ರಸೇನಜಿತ್‌ನ ಮಗ ತಕ್ಷಕ, ತಕ್ಷಕನ ಮಗ ಬೃಹದ್ಬಲ, ಬೃಹದ್ಬಲನ ಮಗ ಬೃಹದ್ರಣ, ಅವನ‌ ಮಗ ಉರುಕ್ರಿ, ಉರುಕ್ರಿಯ ಮಗ ವತ್ಸವೃದ್ಧ, ಅವನ ‌ಮಗ ಪ್ರತಿವ್ಯೋಮ, ಭಾನು, ಭಾನುವಿನ ಮಗ ದಿವಾಕ, ದಿವಾಕನ ಮಗ ಸಹದೇವ, ಬೃಹದಶ್ವ, ಭಾನುಮಂತ, ಭಾನುಮಂತನ‌ ಮಗ ಪ್ರತೀಕಾಶ್ವ, ಸುಪ್ರತೀಕ, ಮರುದೇವ.

ಮರುದೇವನ‌ ಮಗ ಸುನಕ್ಷತ್ರ, ಅವನ‌ ಮಗ ಪುಷ್ಕರ, ಅಂತರಿಕ್ಷ, ಸುತಪಸ, ಅವನ‌ ಮಗ ಅಮಿತ್ರಜಿತ್, ಬೃಹದ್ರಾಜ, ಬರ್ಹಿ, ಅವನ‌ ಮಗ ಕೃತಂಜಯ. ಕೃತ0ಮಜಯನ ಮಗ ರಣಂಜಯ, ಅವನ‌ ಮಗ ಸಂಜಯ, ಸಂಜಯನ ಮಗ ಶಾಕ್ಯ, ಶುದ್ಧೋದ, ಲಾಂಗಲ, ಪ್ರಸೇನಜಿತ್, ಕ್ಷುದ್ರಕ, ರಣಕ, ಸುರಥ.ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು. ನಂತರದ ಉಲ್ಲೇಖಗಳು ಅಷ್ಟಾಗಿ ಇಲ್ಲ.

ಇನ್ನು ಕೆಲ ದಿನಗಳ ಹಿಂದಷ್ಟೇ ರಾಜಸ್ಥಾನದ ಈ ಹಿಂದಿನ ಜೈಪುರ ರಾಜಮನೆತನದ ಕುಡಿ ಹಾಗೂ ಬಿಜೆಪಿ ಸಂಸದೆ ದಿಯಾ ಕುಮಾರಿ ಅವರು ತಮ್ಮದು ಶ್ರೀರಾಮಚಂದ್ರನ ವಂಶ ಎಂದು ಹೇಳಿದ್ದಾರೆ ಅಲ್ಲದೆ ಶ್ರೀರಾಮ ವಿಶ್ವರೂಪಿ. ಜಗತ್ತಿನ ಎಲ್ಲ ಕಡೆ ಆತನ ವಂಶಸ್ಥರು ಇದ್ದಾರೆ. ನನ್ನದು ರಘುವಂಶ ಕುಟುಂಬ. ಶ್ರೀರಾಮನ ಪುತ್ರ ಕುಶ ನಮ್ಮ ಪೂರ್ವಜ, ಎಂದು ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.