'ದರ್ಶನ್ ಜೊತೆ ಪವಿತ್ರ ಗೌಡ ಇರುವುದು ಯಾವುದೇ ಸಮಸ್ಯೆ ಇಲ್ಲ' ಪತ್ನಿ ವಿಜಯಲಕ್ಷ್ಮಿ

 | 
Gnj

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಸಾರದ ವಿಚಾರ ಮತ್ತೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮತ್ತು ಪವಿತ್ರ ಗೌಡ ನಡುವೆ ಇನ್‌ಸ್ಟಾಗ್ರಾಂ ಪೋಸ್ಟ್‌ ಜಗಳ ಸದ್ಯ ಭಾರಿ ವೈರಲ್ ಆಗಿದೆ. ದರ್ಶನ್ ಜೊತೆಗಿನ ಸಂಬಂಧಕ್ಕೆ 10 ವರ್ಷದ ಸಂಭ್ರಮ ಎಂದು ಪವಿತ್ರ ಗೌಡ ದರ್ಶನ್ ಜೊತೆಗಿನ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ನಂತರ ವಿವಾದ ಶುರುವಾಯಿತು. 

ಪವಿತ್ರ ಗೌಡ ಪೋಸ್ಟ್ ನೋಡಿ ಸಿಟ್ಟಾದ ವಿಜಯಲಕ್ಷ್ಮಿ ದರ್ಶನ್, ಪವಿತ್ರ ಗೌಡ ಅವರ ಗಂಡ ಸಂಜಯ್, ಮಗುವಿನ ಜೊತೆ ಇದ್ದ ಫೋಟೊ ಹಂಚಿಕೊಂಡು, ಬೇರೆಯವರ ಗಂಡನ ಜೊತೆಗಿನ ಫೋಟೊ ಹಂಚಿಕೊಳ್ಳಲು ನಾಚಿಕೆಯಾಗಲ್ವ ಎಂದು ಪ್ರಶ್ನೆ ಮಾಡಿದ್ದರು.ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಪವಿತ್ರಗೌಡ ಇನ್‌ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿದ್ದು, ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ತಮ್ಮ ದರ್ಶನ್ ನಡುವಿನ ಸಂಬಂಧದ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಜೀವನದಲ್ಲಿ ಉಂಟಾದ ಸಮಸ್ಯೆಗಳಿಂದ ನಾನು ಸಂಜಯ್ ಅವರಿಂದ ವಿಚ್ಛೇದನ ಪಡೆದಿದೇನೆ.ಇಲ್ಲಿಯ ವರಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ! ನಾನು ಹಾಗೂ ದರ್ಶನ್ ಶ್ರೀನಿವಾಸ್‌ರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ. 

ಇದನ್ನು ಗಮನಿಸಿ, ನಾನು ಯಾವುದೇ ವೈಯಕ್ತಿಕ ಕೋರಿಕೆಗಳು ಅಥವಾ ಅಜೆಂಡಾಗಾಗಿ ಇಲ್ಲ. ಪವಿತ್ರವಾದ ಪ್ರೀತಿ ಮತ್ತು ಆರೈಕೆಯಿಂದ 10 ವರ್ಷ ಜೊತೆ ಇರುವುದು ಸುಲಭವಲ್ಲ. ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ ಈ ವಿಚಾರವಾಗಿ ವಿಜಯಲಕ್ಷ್ಮಿರವರೆ ನನಗೆ ಹಲವಾರು ಸಾರಿ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ಅದರ ಕೆಲವು ದಾಖಲೆ ಹಾಗೂ ಡೈವೋರ್ಸ್ ದಾಖಲೆಗಳನ್ನು ಸಮಯ ಬಂದಾಗ ಹಂಚಿಕೊಳ್ಳುತ್ತೇನೆ. ವಿಜಯಲಕ್ಷ್ಮಿ ಅವರು ನನ್ನ ವಿರುದ್ಧ ಪೋಸ್ಟ್ ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ಮಗಳಾದ ಖುಷಿ ಗೌಡ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬಹಳ ಜನ ಕೆಟ್ಟ ಭಾಷೆಯಿಂದ ನಿಂದಿಸಿರುವುದು ನನಗೆ ಮಾನಸಿಕ ನೋವುಂಟು ಮಾಡಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.