ಇನ್ನೂ ಎತ್ತರಕ್ಕೆ ಸಾಧನೆ ಮಾಡಬೇಕಿದ್ದ ಸೂರ್ಯ ಇನ್ನ್ ಇಲ್ಲ

 | 
Juj

ಇತ್ತೀಚಿನ ದಿನಗಳಲ್ಲಿ ಹಲವಾರು ಕಲಾವಿದರು ತಂತ್ರಜ್ಞರು ಇನ್ನಿಲ್ಲವಾಗಿದ್ದಾರೆ ಕೆಲವರು ಅರೋಗ್ಯ ಸಮಸ್ಯೆಯಿಂದಾಗಿ ಮರಣ ಹೊಂದಿದರೆ ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಖ್ಯಾತ ನಟ ಹಾಗೂ ನಿರ್ದೇಶಕ ಸೂರ್ಯ ಕಿರಣ್  ನಿಧನರಾಗಿದ್ದಾರೆ. ತೆಲುಗು ಚಿತ್ರೋದ್ಯಮದಲ್ಲಿ ಗುರುತಿಸಲ್ಪಟ್ಟ ಸೂರ್ಯ ಕಿರಣ್ ಅವರಿಗೆ ಜಾಂಡೀಸ್ ಆಗಿದೆ. ಆಸ್ಪತ್ರೆಗೆ ಚಿಕಿತ್ಸೆ ಕೂಡ ಪಡೆಯಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.

ಕೇವಲ 48ರ ಹರೆಯದ ಸೂರ್ಯ ಕಿರಣ್ ಸಿನಿಮಾ ಮತ್ತು ಕಿರುತೆರೆ ರಂಗದಲ್ಲೂ ತಾವು ತೊಡಗಿಸಿಕೊಂಡಿದ್ದರು. ರಾಜು ಬೈ ಮತ್ತು ಸತ್ಯಂ, ಬ್ರಹ್ಮಾಸ್ತ್ರ, ಅಧ್ಯಾಯ 6 ಸಿನಿಮಾಗಳನ್ನು ನಿರ್ದೇಶಿಸಿದ್ದರು. ಜೊತೆಗೆ ಬಿಗ್ ಬಾಸ್ ತೆಲುಗು ಸೀಸನ್ ನಲ್ಲೂ ಇವರು ಇದ್ದರು.ಮೂಲತಃ ಕೇರಳದವರಾದ ಸೂರ್ಯ, ಹುಟ್ಟಿ ಬೆಳೆದಿದ್ದೆಲ್ಲ ಚೆನ್ನೈನಲ್ಲಿ. ಸಿನಿಮಾ ನಟರಾಗಿ ನೂರಾರು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 

ಅವರು ಬಾಲ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಹಲವಾರು ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರು 'ಮಾಸ್ಟರ್' ಸುರೇಶ್ ಎಂದು ಮನ್ನಣೆ ಪಡೆದರು. 1981 ರ ಚಲನಚಿತ್ರ ಕಡಲ್ ಮೀಂಗಲ್, 1985 ರ ಚಲನಚಿತ್ರ ಮಂಗಮ್ಮ ಸಬಧಮ್, 1987 ರಲ್ಲಿ ಮನಿಥನ್, 1987 ರಲ್ಲಿ ಸ್ವಯಂ ಕ್ರುಷಿ ಮತ್ತು 1987 ರಲ್ಲಿ ಖೈದಿ ನಂ 786 ಅವರು ನಟಿಸಿದ್ದಾರೆ.

ವೈಯಕ್ತಿಕ ಬದುಕಿನಲ್ಲಿ ಸೋತಿದ್ದರು ಎಂಬ ಮಾಹಿತಿ ಕೂಡ ಇದೆ.ಸೂರ್ಯಕಿರಣ್ ಅವರ ಪಿಆರ್ ಒ ಸುರೇಶ್ ಸೋಮವಾರ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಿರ್ದೇಶಕ ಸೂರ್ಯ ಕಿರಣ್ ಜಾಂಡೀಸ್‌ನಿಂದ ನಿಧನರಾಗಿದ್ದಾರೆ. ಅವರು ತೆಲುಗು ಚಿತ್ರಗಳು, ಸತ್ಯಂ, ರಾಜು ಭಾಯ್ ಮತ್ತು ಇತರ ಕೆಲವು ಚಿತ್ರಗಳನ್ನು ನಿರ್ದೇಶಿಸಿದರು.

ಅವರು ತೆಲುಗು ಬಿಗ್ ಬಾಸ್‌ನಲ್ಲಿ ಮಾಜಿ ಸ್ಪರ್ಧಿ ಕೂಡ ಆಗಿದ್ದರು. ಓಂ ಶಾಂತಿ, ಎಂದು ಬರೆದಿದ್ದಾರೆ. ಇವರ ಸಾವಿಗೆ ಹಲವಾರು ಕಲಾವಿದರು ಕಂಬನಿ ಮಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.