ದಶ೯ನ್ ವಿಗ್ ಬಗ್ಗೆ ಮಾತನಾಡುವ ಅಗತ್ಯ ಇರಲಿಲ್ಲ, ಪ್ರಥಮ್ ವತ೯ನೆ ಗೆ ಧ್ರುವ ಸರ್ಜಾ ಗರಂ
| Aug 1, 2025, 11:43 IST
ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ವಿವಾದಗಳು ಶುರುವಾಗಿವೆ. ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳು ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಥಮ್ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ದರ್ಶನ್ ಬಗ್ಗೆ ಕೆಲವು ಖಾರವಾದ ಮಾತುಗಳನ್ನು ಆಡಿದರು. ‘ದರ್ಶನ್ ಅವರಲ್ಲಿ ಕಿತ್ತುಕೊಳ್ಳೋಕೆ ಏನೂ ಇಲ್ಲ. ಅವರು ಧರಿಸೋದು ವಿಗ್. ಇನ್ನು, ಗಡ್ಡ ಮೀಸೆ ಅವರು ಬಿಡೋದಿಲ್ಲ. ಇನ್ನೇನು ಕಿತ್ತುಕೊಳ್ಳಲಿ’ ಎಂದು ಪ್ರಥಮ್ ಹೇಳಿದ್ದರು. ಆ ಮಾತನ್ನು ಧ್ರುವ ಸರ್ಜಾ ಅವರು ಖಂಡಿಸಿದ್ದಾರೆ. ಇದೆಲ್ಲ ಬೇಕಿರಲಿಲ್ಲ ಎಂದು ಧ್ರುವ ಹೇಳಿದ್ದಾರೆ.
ಪ್ರಥಮ್ ಅವರ ವರ್ತನೆಯಿಂದ ನನಗೆ ಬಹಳ ಬೇಸರ ಆಗಿದೆ. ಈ ವಿಚಾರದಲ್ಲಿ ದರ್ಶನ್ ಪರ ನಿಲ್ಲುವುದು ನಮ್ಮ ಕರ್ತವ್ಯ. ಲಾಯರ್ ಜಗದೀಶ್ ಮಾತನ್ನು ಪ್ರಥಮ್ ಕೇಳಬೇಕಿತ್ತು. ಗೌರವ ಇಲ್ಲದ ರೀತಿಯಲ್ಲಿ, ನಿಂದಿಸುವ ಹಾಗೆ ಚಿಟಿಕೆಯೆಲ್ಲ ಹೊಡೆದು, ವಿಗ್ ಅದು ಇದು ಅಂತ ಮಾತನಾಡುವ ಅವಶ್ಯಕತೆ ಇರಲಿಲ್ಲ ಎನಿಸುತ್ತದೆ’ ಎಂದಿದ್ದಾರೆ ಧ್ರುವ ಸರ್ಜಾ.
ಎಲ್ಲರಿಗೂ ಅವರವರ ಆತ್ಮಗೌರವ ಇರುತ್ತದೆ. ಯಾರೋ ಕುಗ್ಗಿದ್ದಾರೆ ಎಂದಾಗ ಆಳಿಗೊಂದು ಕಲ್ಲು ಹಾಕಬಾರದು. ಈ ವಿಚಾರದಿಂದ ಸುದೀಪ್, ಶಿವಣ್ಣ, ದುನಿಯಾ ವಿಜಯ್, ಧನಂಜಯ ಅವರಿಗೆ ಬೇಜಾರು ಆಗಿರುತ್ತದೆ. ಪುನೀತ್ ಸರ್ ಇದ್ದಿದ್ರೆ ಬೇಜಾರು ಆಗಿರುತ್ತಿತ್ತು. ನಮ್ಮ ಅಣ್ಣನಿಗೂ ಬೇಜಾರು ಆಗಿರುತ್ತಿತ್ತು. ನಮ್ಮ ಹಿರಿಯ ನಟರು ಇಂಥ ಉದಾಹರಣೆ ಸೆಟ್ ಮಾಡಿಲ್ಲ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.