ಬಿಗ್ಬಾಸ್ ಮನೆಗೆ ಹೋಗುತ್ತಿರುವ ಖ್ಯಾತ ಯೂಟ್ಯೂಬರ್ಸ್ ಇವರೇ, ನಿಮ್ಮ ಫೇವರಿಟ್ ಯಾರು

 | 
Bi
 ಕಿರುತೆರೆ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಆರಂಭ ದಿನಾಂಕದ ಕುರಿತು ಅಪ್‌ಡೇಟ್‌ ಬಂದಿದೆ. ಇದೇ ಸೆಪ್ಟೆಂಬರ್‌ 28ರಿಂದ ದೊಡ್ಮನೆ ಆಟ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಕಲರ್ಸ್‌ ಕನ್ನಡದಲ್ಲಿ ಈ ಬಾರಿಯ ಬಿಗ್‌ಬಾಸ್‌ ಸೀಸನ್‌ 11 ಸೆಪ್ಟೆಂಬರ್‌ 28ರಿಂದ ಆರಂಭವಾಗಲಿದ್ದು, ಈ ಬಾರಿ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ ಸ್ಟಾರ್‌ಗಳ ಜತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ದಂಡೇ ಇರಲಿದೆ.
 ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಬಿಬಿಕೆ 11 ಈ ಬಾರಿ ನಡೆಯಲಿದೆ. ಈ ಮೂಲಕ ಕಿಚ್ಚ ಸುದೀಪ್‌ ಈ ಬಾರಿ ಹೋಸ್ಟ್‌ ಮಾಡೋದಿಲ್ಲ ಎಂಬ ವದಂತಿಗೆ ತೆರೆಬಿದ್ದಿದೆ. ಇದೇ ಸಮಮಯದಲ್ಲಿ ಬಿಗ್‌ಬಾಸ್‌ ಪ್ರಮೋ ಶೂಟಿಂಗ್‌ ಮುಗಿದಿದೆ. ಸೆಪ್ಟೆಂಬರ್‌ 23ರಂದು ಬಿಗ್‌ಬಾಸ್‌ ಕನ್ನಡ ಪ್ರಮೋ ಪ್ರಸಾರಗೊಳ್ಳಲಿದೆ. 
ಅದೇ ದಿನ ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯೂ ನಡೆಯಲಿದೆ. ಈ ಬಾರಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಯಾವೆಲ್ಲ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬ ಕುತೂಹಲವೂ ಪ್ರೇಕ್ಷಕರಲ್ಲಿದೆ. ಈಗಾಗಲೇ ಹಲವು ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆ.
ಕಿರುತೆರೆ ನಟ ತ್ರಿವಿಕ್ರಮ್ 11ನೇ ಬಿಗ್‌ಬಾಸ್‌ ಕನ್ನಡದಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಇನ್ನು ಯೂಟ್ಯೂಬ್ ನಲ್ಲಿ ಶೈನ್ ಆಗಿರುವ ಮಧುಗೌಡ, ಮಾದ್ಯಮ ಕುಟಂಬದ ಯೂಟ್ಯೂಬ್ ರ್ ಪ್ರಿಯಾ ಹಾಗೂ ಟೆಕ್ ಇನ್ ಕನ್ನಡ ದ ಸಂದೀಪ್ ಅವರು ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ಮತ್ತೊಮ್ಮೆ ಯೂಟ್ಯೂಬ್ ಅವರೇ ಕಾಣಸಿಕ್ಕರೂ ಸಿಗಬಹುದು ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್‌ ನಲ್ಲಿ ಅನುಬಂಧ ಅವಾರ್ಡ್ ಬಳಿಕ ಬಿಗ್‌ ಬಾಸ್‌ ಕನ್ನಡ ಸೀಸನ್ 11‌ ಆರಂಭವಾಗಲಿದೆ. ಈ ನಡುವೆ ಬಿಗ್‌ ಬಾಸ್‌ಮನೆಗೆ ಹೋಗಲಿರುವ ಸಂಭಾವ್ಯ ಸ್ಪರ್ಧಿಗಳ ಹೆಸರು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನು ತುಕಾಲಿ ಸಂತು ಪತ್ನಿ ಮಾನಸ, ಕಾಮಿಡಿ ನಟ ಚಂದ್ರಪ್ರಭ, ರೀಲ್ಸ್ ಮೂಲಕ ಖ್ಯಾತರಾದ ಭೂಮಿಕಾ ಬಸವರಾಜ್, ಎಸ್ ನಾರಾಯಣ ಪುತ್ರ ಪಂಕಜ್ ನಾರಾಯಣ್ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.