'ಓಂ ಸಿನಿಮಾದಲ್ಲಿ ನಟಿಸಿದ ಈ ಇಬ್ಬರು ಮಕ್ಕಳು ಯಾ.ರದ್ದು ಗೊ ತ್ತಾ' ನ.ಟಿ ಪ್ರೇಮ ಬಿಚ್ಚಿಟ್ಟ ಸತ್ಯ

 | 
ಹ

ಉಪೇಂದ್ರ ನಿರ್ದೇಶನದ, ಶಿವರಾಜ್ ಕುಮಾರ್ ಮತ್ತು ಪ್ರೇಮಾ ಅಭಿನಯದ 'ಓಂ' ಚಿತ್ರ ಅತಿ ಹೆಚ್ಚು ಬಿಡುಗಡೆಯಾದ ಕನ್ನಡದ ಚಿತ್ರ . ಇಡೀ ಭಾರತೀಯ ಚಿತ್ರರಂಗವನ್ನು ಅಚ್ಚರಿಗೆ ದೂಡಿದ ಚಿತ್ರವಿದು. ರೌಡಿಸಂ ಮತ್ತು ಪ್ರೇಮ ಕಥೆಯ ಸಂಘರ್ಷವನ್ನು ಹೀಗೂ ಹೇಳಬಹುದು ಎಂದು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಚಿತ್ರವಿದು.

ಈ ಚಿತ್ರದ ಅಭಿನಯಕ್ಕೆ 'ಸತ್ಯ' ಪಾತ್ರದ ಶಿವರಾಜ್ ಕುಮಾರ್ ಮತ್ತು 'ಮಧು' ಪಾತ್ರದ ಪ್ರೇಮಾ ಇಬ್ಬರೂ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪಡೆದುಕೊಂಡರು. ಒಂದೇ ಚಿತ್ರದ ಅಭಿನಯಕ್ಕೆ ನಾಯಕ-ನಾಯಕಿಯರಿಬ್ಬರೂ ಪ್ರಶಸ್ತಿ ಪಡೆದುಕೊಂಡ ಅಪರೂಪದ ಸಾಧನೆ ಇದು. ಉಪೇಂದ್ರ ಅವರಿಗೆ ಅತ್ಯುತ್ತಮ ಚಿತ್ರಕಥೆ, ಬಿ.ಸಿ. ಗೌರಿಶಂಕರ್ ಅವರಿಗೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಕೂಡ ಲಭಿಸಿತು.

ಓಂ' ಚಿತ್ರದ ತೆಲುಗು ಹಿಂದಿಗೂ ರೀಮೇಕ್ ಆಗಿತ್ತು. ತೆಲುಗಿನಲ್ಲಿ ಕೂಡ ಪ್ರೇಮಾ ನಾಯಕಿಯಾಗಿ ನಟಿಸಿದರು. 'ಓಂಕಾರಂ' ಹೆಸರಿನ ಚಿತ್ರದಲ್ಲಿ ಕೋಟೆ ಪ್ರಭಾಕರ್, ಟೆನ್ನಿಸ್ ಕೃಷ್ಣ ಕೂಡ ನಟಿಸಿದರು. ಹಂಸಲೇಖ ಸಂಗೀತದ ಹಾಡುಗಳನ್ನೇ ಅಲ್ಲಿ ಬಳಸಲಾಗಿತ್ತು. ಆದರೆ ಹೇ ದಿನಕರ ಹಾಡನ್ನು ಬಳಸಲಿಲ್ಲ. ಅದರ ಬದಲು ಅಂಜದ ಗಂಡು ಚಿತ್ರದ ಏಕೆ ಹೀಗಾಯ್ತೋ ಹಾಡನ್ನು ಬಳಸಿಕೊಳ್ಳಲಾಯ್ತು. ಉಪೇಂದ್ರ ಅವರೇ ತೆಲುಗಿನಲ್ಲಿ ನಿರ್ದೇಶಿಸಿದ್ದರು.

ನಿಜ ಜೀವನದಲ್ಲಿ ರೌಡಿಗಳಾಗಿದ್ದವರು ಅನೇಕರು 'ಓಂ' ಚಿತ್ರದಲ್ಲಿ ನಟಿಸಿದ್ದರು. ಇಂತಹ ಪ್ರಯೋಗ ಮಾಡಿದ ಮೊದಲ ಸಿನಿಮಾ ಇದು. ಕಪಾಲಿ ಚಿತ್ರಮಂದಿರದಲ್ಲಿಯೇ ಇದು 30 ಬಾರಿ ಬಿಡುಗಡೆಯಾಗಿದೆ. ಸಿನಿಮಾವೊಂದು ಒಂದೇ ಚಿತ್ರಮಂದಿರದಲ್ಲಿ ಇಷ್ಟು ಬಾರಿ ಬಿಡುಗಡೆಯಾದ ಬೇರೆ ನಿದರ್ಶನವಿಲ್ಲ. ಇನ್ನು ಆ ಚಿತ್ರದಲ್ಲಿ ಗಮನ ಸೆಳೆದ ಪುಟ್ಟ ಬಾಲಕರಬ್ಬರು ಯಾರು ಎಂದು ಈದೀಗ ವೈರಲ್ ಆಗ್ತಿದೆ.

ಆ ಇಬ್ಬರು ಮಕ್ಕಳು ಬೇರಾರು ಅಲ್ಲ, ವರನಟ ಡಾ. ರಾಜ್​ಕುಮಾರ್​ ಅವರ ಮೊಮ್ಮಕ್ಕಳು ಅಂದರೆ ರಾಘವೇಂದ್ರ ರಾಜ್​ಕುಮಾರ್​ ಅವರ ಪ್ರೀತಿಯ ಪುತ್ರರಾದ ವಿನಯ್ ಹಾಗೂ ಯುವ ರಾಜ್​ಕುಮಾರ್​. ಈ ವಿಷಯವನ್ನು ಸ್ವತಃ ವಿನಯ್​ ಅವರೇ ಇತ್ತೀಚಿಗೆ ನಡೆದ ಖಾಸಗಿ ಚಾನೆಲ್​ನ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.