ಮೈಮಾಟ ತೋರಿಸಿ ಮನೆಗೆ ಕರೆಯುತ್ತಾಳೆ ಈ‌‌ ಸುಂದರಿ, ಬೆಚ್ಚಿಬಿದ್ದ ಯುವಕರು

 | 
Vvg

ದುಡಿದು ಕೆಲಸ ಮಾಡಿ ಹಣ ಗಳಿಸುವುದು ಈಗಿನ ಕಾಲದಲ್ಲಿ ಕಷ್ಟದ ಕೆಲಸ ಸುಲಭವಾಗಿ ಹಣ ಕೈಗೆ ಬಂದುಬಿಡಲು ಅವರು ಆರಿಸಿಕೊಂಡ ಮಾರ್ಗವೇ ಹನಿ ಟ್ರಾಪಿಂಗ್ ಹೌದು ಮಾಡೆಲ್ ಕಮ್ ಆರೋಪಿ ನೇಹಾ
ಟೆಲಿಗ್ರಾಮ್ ಮೂಲಕ ಕೆಲವರನ್ನು ಸಂಪರ್ಕ ಮಾಡುತ್ತಿದ್ದಳು. ಬಳಿಕ ಬಣ್ಣದ ಮಾತುಗಳಿಂದ ಮರಳು ಮಾಡುತ್ತಿದ್ದಳು. ನೋಡಲು ಸುಂದರವಾಗಿರುವುದರಿಂದ ಕೆಲವರು ಆಕೆಯ ಬಲೆಗೆ ಬಿದ್ದಿದ್ದಾರೆ. 

ಲೈಂಗಿಕ ಕ್ರಿಯೆಗೆ ಅಂತ ಮನೆಯೊಂದಕ್ಕೆ ಕರೆಸಿಕೊಳ್ಳುತ್ತಿದ್ದಳು. ಆಕೆಯ ಮಾತು ನಂಬಿ ಸಂತ್ರಸ್ತರು ಜೆಪಿ ನಗರದ ಐದನೇ ಹಂತದಲ್ಲಿರುವ ಮನೆಗೆ ಬರುತ್ತಿದ್ದರು. ಮನೆಯ ಬೆಲ್ ಮಾಡುತ್ತಿದ್ದಂತೆ ಈ ಸುಂದರಿ ಬಿಕಿನಿಯಲ್ಲಿ ಸ್ವಾಗತ ಕೋರುತ್ತಿದ್ದಳು.
ಬಿಕಿನಿಯಲ್ಲೇ ಸಂತ್ರಸ್ತರನ್ನು ಒಮ್ಮೆ ತಬ್ಬಿಕೊಂದು ಮನೆಗೆ ಸ್ವಾತಿಸುತ್ತಿದ್ದಳು. ಬಳಿಕ ಆಕೆಯೊಂದಿಗೆ ನಡೆಯುತ್ತಿದ್ದ ರಂಗಿನಾಟದ ಹಸಿ ಬಿಸಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗುತ್ತಿತ್ತು. 

ಸಂತ್ರಸ್ತರು ಎಂಟ್ರಿಯಾದ ಮೂರೆ ನಿಮಿಷಕ್ಕೆ ಉಳಿದ ಆರೋಪಿಗಳು ಅಲ್ಲಿಗೆ ಬರುತ್ತಿದ್ದರು. ಬಳಿಕ ಮೊಬೈಲ್​ನಲ್ಲೂ ರೆಕಾರ್ಡ್​ ಮಾಡಿಕೊಳ್ಳುತ್ತಿದ್ದರು. ಇದೆಲ್ಲ ಮಾಡುವುದಕ್ಕೂ ಮುನ್ನ ಸಂತ್ರಸ್ತರಿಂದ ಮೊಬೈಲ್​ ಕಸಿದುಕೊಳ್ಳುತ್ತಿದ್ದರು. ಮೊಬೈಲ್​ನಲ್ಲಿರುವ ಎಲ್ಲ ನಂಬರ್ ಅನ್ನು ನೋಟ್ ಮಾಡಿಕೊಳ್ತಿದ್ದರು.
ಇಷ್ಟೆಲ್ಲಾ ಆದ ಬಳಿಕ ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ಕೊಡದಿದ್ದರೆ ವಿಡಿಯೋವನ್ನು ಸ್ನೇಹಿತರು, ಸಂಬಂಧಿಕರು ಹಾಗೂ ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. 

ಅಲ್ಲದೇ ಯುವತಿ ಮುಸ್ಲಿಂ ಆಗಿದ್ದಾಳೆ. ಆಕೆಯನ್ನು ಮದುವೆ ಆಗುವಂತೆ ಡ್ರಾಮಾ ಮಾಡುತ್ತಿದ್ದರು. ಮದುವೆ ಆಗಬೇಕಾದರೆ ಕತ್ನಾ ಮಾಡಿಸಬೇಕು ಎಂದು ಧಮ್ಕಿ ಹಾಕಿ, ಮುಸ್ಲಿಂ ಆಗಿ ಕನ್ವರ್ಟ್ ಆಗುವಂತೆ ಬೆದರಿಕೆ ಹಾಕುತ್ತಿದ್ದರು. ಇದರಿಂದ ಹೆದರಿ ಹಣ ವರ್ಗಾವಣೆ ಮಾಡಿದ ಸಂತ್ರಸ್ತ ಬಳಿಕ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಸದ್ಯಕ್ಕೆ ಬಂಧಿಸಲಾಗಿದೆ. 

ಇದೇ ರೀತಿ 12 ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ. ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣ ವರ್ಗಾಯಿಸಿಕೊಂಡಿರುವುದಾಗಿ ತಿಳಿದುಬಂದಿದ್ದು, ಪುಟ್ಟೇನಹಳ್ಳಿ ಪೊಲೀಸರಿಂದ ಮುಂದುವರೆದ ತನಿಖೆ ಮುಂದುವರಿದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.