ಇದಪ್ಪ ಧೈರ್ಯ ಅಂದರೆ; ಸ್ಟಾರ್ ನ ಟನ ಚಳಿಬಿಡಿಸಿದ ಶ್ರುತಿ

 | 
Hu

ನಟ ದರ್ಶನ್‌ ಬಂಧನ ವಿಚಾರವಾಗಿ ಮಾತನಾಡಿರುವ ನಟಿ ಶ್ರುತಿ, ಇದನ್ನು ಯಾರು ಕೂಡ ಊಹೆ ಮಾಡಿರಲಿಲ್ಲ. ಈ ಪ್ರಕರಣ 2 ಫ್ಯಾಮಿಲಿ ಸಂಬಂಧಿಸಿದ್ದು ಮಾತ್ರವಲ್ಲ ಇದ್ರಿಂದ ಇಡೀ ಫ್ಯಾಮಿಲಿ ಮಂಕಾಗಿದೆ ಎಂದ್ರು. ಕಾಟೇರ ಸಿನಿಮಾದಲ್ಲಿ ದರ್ಶನ್ ಜೊತೆಗೆ ಕೆಲಸ ಮಾಡೋ ಅವಕಾಶ ಸಿಕ್ತು. ಅದಕ್ಕೂ ಮೊದಲು ಎಲ್ಲರ ಮನೆ ದೋಸೆ ತೂತು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ವಿ. 

ನನ್ನ ಕೊನೆಯ ತಮ್ಮನ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ರು. ದರ್ಶನ್ ಸರಳ ವ್ಯಕ್ತಿತ್ವ ಹೊಂದಿರುವವರು ಎಂದ್ರು. ನಟ ದರ್ಶನ್ ಕಷ್ಟದಿಂದ ಬೆಳೆದವರು. ಸಿನಿಮಾ ದರ್ಶನ್ ಹಾರ್ಡ್ ವರ್ಕ್ ಮಾಡ್ತಾರೆ. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರದು ಎನ್ನುವ ಜವಾಬ್ದಾರಿ ಅವರಿಗೆ ಇದೆ. ಮೈಕಟ್ಟಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಇಂತಹ ಪ್ರಕರಣದಲ್ಲಿ ದರ್ಶನ್  ಸಿಲುಕಿದ ವಿಚಾರ ಕೇಳಿ ಶಾಕ್ ಆಯ್ತು. ಇದಕ್ಕೆಲ್ಲಾ ತಾರ್ಕಿಕ ಅಂತ್ಯ ಸಿಗಬೇಕು ಎಂದ್ರು.

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕೆಟ್ಟದಾಗಿ ಕಮೆಂಟ್ ಮಾಡ್ತಾರೆ. ಕೆಟ್ಟ ಕಮೆಂಟ್ ನೋಡಿ ನೊಂದು ಎಷ್ಟೋ ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಕಮೆಂಟ್ ಮಾಡುವವರು ಬಳಸುವ ಪದಗಳನ್ನ ಜೀರ್ಣಿಸಿಕೊಳ್ಳೋದು ಕಷ್ಟ ಎಂದ್ರು.ನನಗೂ ಕೆಲ ಕಮೆಂಟ್​ ಬಂದಿದೆ. ಅದರಿಂದ ಆಚೆ ಬರೋಕೆ ತುಂಬಾ ಕಷ್ಟ ಆಗುತ್ತೆ. ಫೇಕ್ ಅಕೌಂಟ್ ನಿಂದ ಬರೋ ಕಮೆಂಟ್ ನೋಡಿ ಒಂದು ವಾರಗಳ ನೋವು ಅನುಭವಿಸಿದ ದಿನಗಳು ಇವೆ.

ಸೋಶಿಯಲ್ ಮೀಡಿಯಾಗೆ KYC ಮಾಡಬೇಕು ಅಂತ ನಾವು ಅನೇಕ ಬಾರಿ ಮಾತಾಡಿಕೊಂಡಿದ್ದೇವೆ ಎಂದು ಶ್ರುತಿ ಹೇಳಿದ್ರು.ರೇಣುಕಾಸ್ವಾಮಿ ಪ್ರಕರಣದ ಹಾದಿಯನ್ನು ನೋಡಿದ್ರೆ ದರ್ಶನ್ ದುಡುಕಿದ್ರು ಅನಿಸುತ್ತೆ. ಸದ್ಯ ವಿಚಾರಣೆ ನಡೆಯುತ್ತದೆ. ಏನಾಗುತ್ತೋ ನೋಡೋಣ.  ನೊಂದ ಕುಟುಂಬಕ್ಕೂ ನ್ಯಾಯ ಸಿಗಬೇಕು ಎಂದು ಹಿರಿಯ ನಟಿ ಶ್ರುತಿ ಹೇಳಿದ್ರು.

ಸ್ಯಾಂಡಲ್​ವುಡ್ ನಟಿ ಭಾವನಾ ರಾಮಣ್ಣ ಅವರು ಕೂಡ ದರ್ಶನ್ ಮೇಲೆ ಬಂದಿರುವ ಆರೋಪದ ಬಗ್ಗೆ ಬೇಸರ ಹೊರಹಾಕಿದ್ದಾರೆ. ದರ್ಶನ್ ಜೈಲುಪಾಲಾಗಿದ್ದಾರೆ ಎಂದು ಹೇಳಲು ಬೇಜಾರ್ ಆಗುತ್ತದೆ. ಇದೆಂಥಾ ಸ್ಥಿತಿಯಲ್ಲಿದ್ದಾರೆ. ಈ ಸತ್ಯ ಅರಗಿಸಿಕೊಳ್ಳೋದ್ದಕ್ಕೆ ನಮಗೆ ಸಮಯಬೇಕಾಗಿದೆ. ಈ ರೀತಿ ನಡೆಯಬಾರದಿತ್ತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.