'ಈತ ಫೇಕ್ ಡ್ರೋನ್ ಪ್ರತಾಪ್' ರಾಜ್ಯದ ಜನತೆಗೆ ಚಳ್ಳೆ ಹಣ್ಣು ತಿನ್ನಿಸಿ ಇಲ್ಲಿ ಬಂದಿದ್ದಾನೆ, ನಮ್ರತಾ ಗೌಡ

 | 
ರ್

ಡ್ರೋನ್ ಪ್ರತಾಪ್ ಅವರು ಮೈಂಡ್ ಗೇಮ್ ಆಡ್ತಿದ್ದಾರೆ, ಸಿಂಪಥಿ ರಾಜಕೀಯ ಮಾಡ್ತಿದ್ದಾರೆ, ಅವರ ಮುಗ್ಧತೆ ಮುಗಿದು ಹೋಯ್ತು ಎಂಬ ಮಾತು ಕೇಳಿ ಬಂದಿತ್ತು. ಆದರೆ ಈಗ ಅವರು ಹಳ್ಳಿ ಭಾಷೆ ಮಾತನಾಡುತ್ತ, ಹೊಸ ಗೇಮ್ ಶುರು ಮಾಡಿದ್ದಾರೆ ಎಂಬ ಆರೋಪ ಶುರು ಆಗಿದೆ. ಬ್ರೇಕಿಂಗ್ ನ್ಯೂಸ್ ಟಾಸ್ಕ್ ವೇಳೆ ಪ್ರತಾಪ್ ವಿರುದ್ಧ ನಮ್ರತಾ ಗೌಡ, ವಿನಯ್ ಅವರು ಹೇಳಿದ್ದಾರೆ.

ಪ್ಲೈಟ್‌ಗಳ ಬಗ್ಗೆ ಮಾಹಿತಿ ಕೊಡುತ್ತಿದ್ದವರು ಈಗ ನಮ್ಮ ಹಳ್ಳಿಯಲ್ಲಿ ನಾವು ಹೀಗೆ ಮುದ್ದೆ ಕೊಟ್ಟೋದು ಅಂತ ಹೇಳೋದು, ಅಪ್ಪ-ಅವ್ವ ಎನ್ನೋದು ಯಾರಿಗೂ ಕಾಣಿಸುತ್ತಿಲ್ಲ ಅಂತ ಅಂದುಕೊಳ್ಳಬೇಡಿ ಎಂದು ವಿನಯ್ ಗೌಡ ಅವರು ಹೇಳಿದರೆ ಗ್ರಾಮೀಣ ಜನರಿಗೆ ಮಾಟ ಮಾಡೋಕೆ, ನಾಗವಲ್ಲಿ ಥರ ಆಗಾಗ ನಿಮ್ಮ ಮಂಡ್ಯ ಭಾಷೆ ಬದಲಾಗತ್ತೆ ಎಂದು ನಮ್ರತಾ ಗೌಡ ಹೇಳಿದ್ದಾರೆ.

ನಾನು ಹಳ್ಳಿ ಥರವೂ ಮಾತನಾಡ್ತೀನಿ, ಸಿಟಿ ಭಾಷೆಯಲ್ಲಿಯೂ ಮಾತನಾಡ್ತೀನಿ. ಹಳ್ಳಿ ಟಾಸ್ಕ್‌ನಲ್ಲಿ ಭಾಗ್ಯಶ್ರೀ ಮೇಡಂ ಅವರು ಕೂಡ ಈ ಮಾತು ಹೇಳಿದ್ರು. ಸೌಟು ಮುಂತಾದ ಪದಗಳನ್ನು ಬಳಸ್ತಾ ಮಾತಾಡ್ತೀನಿ. ಅದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಪ್ರತಾಪ್ ಹೇಳಿದ್ದಾರೆ. ನಂಗೆ ಹಾಗೆ ನೋಡೋದಾದ್ರೆ ಹಳ್ಳಿಯೇ ಇಷ್ಟ ಎಂದಿದ್ದಾರೆ.

ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಇತ್ತೀಚೆಗೆ ಪ್ರತಾಪ್ ಅವರು ತುಂಬ ಆಕ್ಟಿವ್ ಆಗಿದ್ದು, ಉಳಿದ ಸ್ಪರ್ಧಿಗಳ ಜೊತೆ ತಮಾಷೆಯಿಂದ ಮಾತನಾಡೋದು, ಹಳ್ಳಿ ಭಾಷೆಯಲ್ಲಿ ಮಾತನಾಡೋದು, ಕಾಲೆಳೆಯೋದು ಕೂಡ ಕ್ಯಾಮರಾದಲ್ಲಿ ಸೆರೆ ಆಗಿದ್ದು, ನಿತ್ಯದ ಎಪಿಸೋಡ್‌ನಲ್ಲಿ ಪ್ರಸಾರ ಆಗಿದೆ. ಸಂಗೀತಾ ಹೊರತಾಗಿ ಉಳಿದೆಲ್ಲರೂ ಪ್ರತಾಪ್ ಮೇಲೆ ಅಸಮಾದಾನ ವ್ಯಕ್ತಪಡಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.