ತುಮಕೂರು ಚೈತನ್ಯ ಸಾ ವಿಗೆ ಕಾರಣವಾಯಿತು ಈ ಒಂದೇ ಒಂದು ರೀಲ್ಸ್, ಇದರಲ್ಲಿ ಯುವಕ ಜೊತೆ
Jun 29, 2025, 20:39 IST
|

ಚೈತನ್ಯ ತುಮಕೂರಿನ ಎಸ್.ಎಸ್.ಐ.ಟಿ ಕಾಲೇಜಿನಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಳು. ಜೊತೆಗೆ, ಆಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮೇಕಪ್ ಆರ್ಟಿಸ್ಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಳು. ಚೈತನ್ಯ ತನ್ನ ತಾಯಿ ಸೌಭಾಗ್ಯಮ್ಮ ಅವರೊಂದಿಗೆ ಡಿ.ಹೊಸಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಆಕೆ, ಪಕ್ಕದ ಊರಿನ ವಿಜಯ್ ಕುಮಾರ್ ಎಂಬಾತನೊಂದಿಗೆ ಕಳೆದ ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಳು. ವಿಜಯ್ ಕುಮಾರ್ ವೃತ್ತಿಯಲ್ಲಿ ಕಾರು ಚಾಲಕ. ಆದರೆ, ಅವರಿಬ್ಬರ ಪ್ರೀತಿಗೆ ಯುವತಿಯ ಮಾವ ವಿರೋಧ ವ್ಯಕ್ತಪಡಿಸಿ, ಈ ಹಿಂದೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದರು ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ, ಚೈತನ್ಯ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರೀಲ್ಸ್ ವಿಡಿಯೊವೊಂದನ್ನು ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿದ್ದಳು. ತಮ್ಮಿಬ್ಬರ ಸಂಬಂಧಕ್ಕೆ ಹಿರಿಯ ವಿರೋಧವಿದ್ದರೂ ರೀಲ್ಸ್ ಅಪ್ಲೋಡ್ ಮಾಡಿದ್ದನ್ನು ಪ್ರಶ್ನಿಸಲು ವಿಜಯ್ ಕುಮಾರ್ ರಾತ್ರಿ 10 ಗಂಟೆ ಸುಮಾರಿಗೆ ಚೈತನ್ಯ ಅವರ ಮನೆಗೆ ಆಗಮಿಸಿದ್ದ. ಆ ಸಂದರ್ಭದಲ್ಲಿ ಚೈತನ್ಯ ಅವರ ತಾಯಿ ಸೌಭಾಗ್ಯಮ್ಮ ರೂಮಿನಲ್ಲಿದ್ದು, ಮಗಳೊಂದಿಗೆ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದರು. ಚೈತನ್ಯ ಹಾಗೂ ವಿಜಯ್ ನನ್ನು ಭೇಟಿ ಮಾಡಿಸಬಾರದೆಂಬ ಉದ್ದೇಶ ಆಕೆಗಿತ್ತು.
ಇತ್ತೀಚೆಗೆ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ಚೈತನ್ಯ ಫೋಟೋ ತೆಗೆದಿದ್ದ. ಹೀಗೆ ತೆಗೆದಿದ್ದ ಫೋಟೋಗಳ ರೀಲ್ಸ್ ಅನ್ನು ಚೈತನ್ಯ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಳಂತೆ. ಈ ರೀಲ್ಸ್ ಸ್ಟೇಟಸ್ ಹಾಕಿದ್ದಕ್ಕೆ ಲವರ್ ವಿಜಯ್ ಕುಮಾರ್ ಕೋಪಗೊಂಡಿದ್ದಾನೆ. ಇದೇ ವಿಚಾರ ಪ್ರಶ್ನಿಸಲು ನಿನ್ನೆ ರಾತ್ರಿ ಚೈತನ್ಯ ಮನೆ ಬಳಿ ವಿಜಯ್ ಬಂದಿದ್ದನಂತೆ. ಆಗ ರೂಂನಲ್ಲಿದ್ದರೂ ಬಾಗಿಲು ಚಿಲಕ ಹಾಕಿ, ಕಿಟಕಿ ಬಳಿ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಅಲ್ಲದೇ ವಿಜಯ್ ಈ ವಿಚಾರ ಚೈತನ್ಯ ಸಂಬಂಧಿಗೆ ಕರೆ ಮಾಡಿ ವಿಚಾರ ತಿಳಿಸಿದ್ದನಂತೆ.ಚೈತನ್ಯ ಸಾವಿಗೆ ವಿಜಯ್ ಕುಮಾರ್ ಕಾರಣ ಎಂದು ದೂರು ದಾಖಲಾಗಿದೆ. ಸದ್ಯ ವಿಜಯ್ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,8 Jul 2025
ಹರಿಪ್ರಿಯಾ ಮದುವೆಯಾದ ಬಳಿಕ ಆಕೆಯ ಜೀವನವೇ ಹಾಳಾಯಿತು, ಭಾವನ ರಾಮನ್ನ
Mon,7 Jul 2025