ಈ‌ ಒಂದು ಕಾರಣಕ್ಕೆ ಇಂಡಿಯಾದಲ್ಲಿ‌ ಶೇಕಡಾ 79 ರಷ್ಟು ಜೋಡಿಗಳು ಡಿವೋರ್ಸ್ ಕೊಡುತ್ತಿದ್ದಾರೆ

 | 
Ja
ನಿದ್ದೆ ಇಲ್ಲದೆ ಇದ್ದರೆ ತಲೆಯೇ ಕೆಲಸ ಮಾಡಲ್ಲ. ಹೌದು ​ಮೋಸ್ಟ್ ಆಲ್​​ ಜನರಿಗೆ ಬೇಕಾಗಿರೋದು ನಿದ್ದೆ. ಈ ನಿದ್ದೆ ಕೆಟ್ಟು ಯಾರ್ ಇರ್ತಾರೆ ಅಂತಾರೆ. ಅದೇ ರೀತಿ ಒಳ್ಳೇ ನಿದ್ದೆ ಮಾಡಬೇಕು ಅಂತಂದ್ರೆ ಕನಿಷ್ಠ 7 ರಿಂದ 8 ಗಂಟೆ ನಿದ್ದೆ ಮಾಡಬೇಕು ಅಂತ ಡಾಕ್ಟರ್​​ಗಳೇ ಹೇಳ್ತಾರೆ. ಇದೇ ನಿದ್ದೆಯ ವಿಚಾರವಾಗಿ ಮಾಡಿರೋ ಒಂದು ಸರ್ವೇಯಿಂದ ಜನರು ತಲೆಕಡೆಸಿಕೊಂಡಿದ್ದಾರೆ. 
ಯಾಕೆಂದ್ರೆ 70 ಪರ್ಸೆಂಟ್​ಗಿಂತ ಹೆಚ್ಚಾಗಿ ಭಾರತದಲ್ಲಿ ವಾಸಿಸುತ್ತಿರೋ ದಂಪತಿಗಳು ನಿದ್ರೆ ಕಾರಣದಿಂದ ವಿಚ್ಛೇದನಕ್ಕೆ ಹೆಜ್ಜೆ ಹಾಕ್ತಿದ್ದಾರಂತೆ. ಶಾಂತಿ ಹಾಗೂ ಒಳ್ಳೆ ನಿದ್ದೆಗೋಸ್ಕರ ಸಪರೇಟಾಗಿ ಮಲಗ್ತಿದ್ದಾರೆ ಅಂತ ಒಂದು ರಿಪೋರ್ಟ್​ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.ರೆಸ್‌ಮೆಡ್‌ನ 2025ರ ಜಾಗತಿಕ ನಿದ್ರೆಯ ಸಮೀಕ್ಷೆಯ ಪ್ರಕಾರ, ಭಾರತ ದೇಶ ನಿದ್ರೆ ವಿಚಾರವಾಗಿ ಡಿವೋರ್ಸ್​ನಲ್ಲಿ ಫಸ್ಟ್ ಇದ್ದು, 78% ದಂಪತಿಗಳು ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಚೀನಾ 67%, ದಕ್ಷಿಣ ಕೊರಿಯಾ 65%ನಲ್ಲಿದೆ. 13 ಮಾರುಕಟ್ಟೆಗಳಲ್ಲಿ 30,000ಕ್ಕೂ ಹೆಚ್ಚು ವ್ಯಕ್ತಿಗಳನ್ನು ಸರ್ವೇ ಮಾಡಲಾಗಿದೆ. 
ಇದ್ರಲ್ಲಿ ವಿಚಾರ ಮಾಡಬೇಕಾಗಿರೋದು ಏನಂದ್ರೆ ಇದೇ ಸರ್ವೇಯಿಂದ ಯುನೈಟೆಡ್ ಕಿಂಗ್‌ಡಮ್ ಹಾಗೂ ಯುನೈಟೆಡ್ ಸ್ಟೇಟ್ಸ್‌ನ ದಂಪತಿಗಳು ನಿದ್ರೆ ವಿಚಾರದಿಂದ 50% ಒಟ್ಟಿಗೆ ಮಲಗ್ತಿದ್ದಾರೆ, ಇನ್ನರ್ಧ ಬೇರೆ ಬೇರೆ ಮಲಗ್ತಿದ್ದಾರೆ.ನಿದ್ರೆಯ ಭಂಗಕ್ಕೆ ಕಾರಣ ಅಂತಂದ್ರೆ ಸಂಗಾತಿಯ ಗೊರಕೆ, ಜೋರಾಗಿ ಉಸಿರಾಡೋದು ಅಥವಾ ಗಾಳಿಗಾಗಿ ಏದುಸಿರು ಬಿಡೋದು 32%, ಚಡಪಡಿಕೆ 12%, ಮಲಗೋ ಟೈಂ ಸರಿಯಿಲ್ಲದೇ ಇರೋದು 10% ಹಾಗೂ 8% ಹಾಸಿಗೆಗೆ ಹಾಕೋ ಪರದೆಯಿಂದ ಸೇರಿವೆ. ಸಪರೇಟ್ ಆಗಿ ಮಲಕ್ಕೊಂಡ್ರೇ, ಒಳ್ಳೇ ಹಾಗೂ ಸೈಲೆನ್ಸ್ ನಿದ್ದೆ ಬರುತ್ತಂತೆ. ಇದ್ರಿಂದ ಗಂಡ ಹೆಂಡ್ತಿ ನಡುವೆ ದಾಂಪತ್ಯ ಜೀವನ ಚೆನ್ನಾಗಿರುತ್ತೆ ಅಂತ ಅಂದಾಜಿಸಲಾಗಿದೆ.
ಒಟ್ಟಿಗೆ ಮಲಗೋದ್ರಿಂದ ಯೂಸ್ ಅಂತಾನೂ ಕೆಲವ್ರು ಹೇಳಿದ್ದಾರೆ. ಆಕ್ಸಿಟೋಸಿನ್ ಅಂದ್ರೆ ಪ್ರೀತಿಯ ಹಾರ್ಮೋನ್​ನಿಂದ ಕಡಿಮೆ ಮಟ್ಟದ ಡಿಪ್ರೆಷನ್, ಆತಂಕ ಹಾಗೂ ಒತ್ತಡಕ್ಕೆ ಕಾರಣವಾಗುತ್ತೆ. ಅಕ್ಯುರೇಟಾಗಿ ಹೇಳಬೇಕು ಅಂತಂದ್ರೆ, ಶೇಕಡಾ 69 ರಷ್ಟು ಭಾರತೀಯರಿಗೆ ಹೆಚ್ಚಿನ ಒತ್ತಡದ ಅಂಶ ಅಂತ ವರದಿಯಾಗಿದೆ. 67% ದಕ್ಷಿಣ ಕೊರಿಯಾ, 65% ಥೈಲ್ಯಾಂಡ್ ಜನರು ಒತ್ತಡನೇ ಅಂತಾನೇ ಹೇಳ್ತಾರೆ. ಶೇ.53 ರಷ್ಟು ಜನರ ಆತಂಕ ಅಂತಂದ್ರೇ ನಿದ್ರೆ ಅಂತಾನೇ ಪ್ರಾಥಮಿಕ ಕಾರಣ ಅಂತ ಮೆನ್ಶನ್ ಮಾಡಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.