ಈ ಮುಸ್ಲಿಮ್ ಸ್ನೇಹತ ಅಂದರೆ ಮೋದಿಗೆ ಪಂಚಪ್ರಾಣ; ಪ್ರಧಾನಿಯ ಲೈಫ್ ಸೀಕ್ರೇಟ್ಸ್
ಎಲ್ಲರಿಗೂ ಬಾಲ್ಯದ ಗೆಳೆಯ ಅಂದರೆ ಅಚ್ಚುಮೆಚ್ಚು. ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಆಟ ಪಾಠ ರಗಳೆ, ಕಿತಾಪತಿ ಜಗಳ ಹೀಗೆ ಎಲ್ಲದರಲ್ಲೂ ಜೊತೆ ಜೊತೆಗೆ ಕೈಜೋಡಿಸಿದ್ದ ಬಾಲ್ಯದ ಗೆಳೆಯರು ಎಂದಿಗೂ ನೆನಪಿನಿಂದ ಮರೆಯಲ್ಲ. ಜೀವನದಲ್ಲಿ ಯಾವುದೇ ಹಂತ ತಲುಪಲಿ, ಎಲ್ಲೇ ಹೋಗಲಿ ಬಾಲ್ಯದ ಗೆಳೆಯರನ್ನು ಮರೆಯಲು ಸಾಧ್ಯವೇ ಇಲ್ಲ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದ್ದಾರೆ ಓರ್ವ ಬಾಲ್ಯದ ಗೆಳೆಯ. ಅವರೇ ಅಬ್ಬಾಸ್.
ತಮ್ಮ ಬಾಲ್ಯದ ಗೆಳೆಯನ ಕುರಿತು ಬ್ಲಾಗ್ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ನನ್ನ ತಂದೆಯ ನಿಕಟ ಸ್ನೇಹಿತರು ವಾಸಿಸುತ್ತಿದ್ದ ಹಳ್ಳಿಯೊಂದಿತ್ತು. ಅವರ ಮಗ ಅಬ್ಬಾಸ್. ಅವರ ತಂದೆಯ ಅಕಾಲಿಕ ಮರಣದ ನಂತರ, ನಮ್ಮ ತಂದೆ ಅಬ್ಬಾಸ್ ಅವರನ್ನು ನಮ್ಮ ಮನೆಗೆ ಕರೆತಂದರು. ಅವರು ನಮ್ಮೊಂದಿಗೆ ಉಳಿದುಕೊಂಡು ಅಧ್ಯಯನವನ್ನು ಪೂರ್ಣಗೊಳಿಸಿದರು.
ನಮ್ಮೆಲ್ಲ ಒಡಹುಟ್ಟಿದವರಂತೆಯೇ ನಮ್ಮ ತಾಯಿಯೂ ಅಬ್ಬಾಸ್‌ನ ಬಗ್ಗೆ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಪ್ರತಿ ವರ್ಷ ಈದ್‌ನಲ್ಲಿ ಅವರು ಅವರ ನೆಚ್ಚಿನ ಭಕ್ಷ್ಯಗಳನ್ನು ತಯಾರಿಸುತ್ತಿದ್ದರು. ಹಬ್ಬಗಳಂದು ನೆರೆಹೊರೆಯ ಮಕ್ಕಳು ನಮ್ಮ ಮನೆಗೆ ಬಂದು ನನ್ನ ತಾಯಿ ತಯಾರಿಸುತ್ತಿದ್ದ ವಿಶೇಷ ತಿಂಡಿಗಳನ್ನು ಸವಿಯುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅಬ್ಬಾಸ್ ಅವರು ಗುಜರಾತ್ ಸರ್ಕಾರದ ಕ್ಲಾಸ್ 2 ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ತಿಂಗಳ ಹಿಂದೆ ಸೇವೆಯಿಂದ ನಿವೃತ್ತರಾಗಿದ್ದಾರೆ. ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಅಬ್ಬಾಸ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಖೇರಾಲು ತಹಶೀಲ್‌ನಲ್ಲಿ ವಾಸಿಸುತ್ತಿದ್ದರೆ, ಕಿರಿಯ ಮಗ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ.
ಅಬ್ಬಸ್ ಅವರು ಪ್ರಸ್ತುತ ಸಿಡ್ನಿಯಲ್ಲಿ ತನ್ನ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದಾರೆ. ಇದೀಗ ಹಬ್ಬದ ದಿನ ಪ್ರಧಾನಿ ಮೋದಿ ಅವರನ್ನು ನೆನಪಿಸಿ ಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.