ಬೆಂಗಳೂರಿನ ಈ ರೆಸ್ಟೋರೆಂಟ್ ಅಲ್ಲಿ ಕೇವಲ 1 ರೂಪಾಯಿಗೆ ಇಷ್ಟೆಲ್ಲಾ ತಿಂಡಿ ಸಿಗುತ್ತದೆ

ಕರ್ನಾಟಕ ರಾಜಧಾನಿ ಬೆಂಗಳೂರಿನ ರೆಸ್ಟೋರೆಂಟ್ವೊಂದು ಬೆಳಗಿನ ಉಪಹಾರಕ್ಕೆ ಮತ್ತು ಸಂಜೆ ಸ್ನ್ಯಾಕ್ಸ್ಗೆ ವಡೆ, ಮಸಾಲಾ ದೋಸೆ ಮತ್ತು ಪೊಂಗಲ್ ಅನ್ನು ಕೇವಲ ಒಂದು ರೂಪಾಯಿಗೆ ಮಾರಾಟ ಮಾಡುತ್ತಿದೆ. ಬೆಂಗಳೂರಿಗರು ಭೇಟಿ ನೀಡಿ ಸವಿಯಬಹುದು. ಕಾಸ್ಟ್ಲಿ ಜಮಾನದಲ್ಲಿ ಏನಪ್ಪಾ ಇದು ವಿಶೇಷ ಅಂತೀರಾ? ಹಾಗಿದ್ರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಬೆಂಗಳೂರಿನ ಎಇಸಿಎಸ್ ಲೇಔಟ್-ಬ್ರೂಕ್ಫೀಲ್ಡ್ ಬ್ರ್ಯಾಂಚ್ ಬಳಿ ಸೆಂಧೂರ್ ಕಾಫಿ ಹೆಸರಿನ ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ಓಪನ್ ಆಗಿದೆ. ಮೊನ್ನೆ ಈ ರೆಸ್ಟೋರೆಂಟ್ ಉದ್ಘಾಟನೆಗೊಂಡಿದೆ. ಈ ಹಿನ್ನೆಲೆ 3 ದಿನಗಳ ಕಾಲ ಕೇವಲ ಒಂದು ರೂಪಾಯಿಗೆ ತಿನಿಸು ನೀಡಲಾಗುತ್ತಿದೆ. ಅಕ್ಟೋಬರ್ 19 ರಂದು ವಡೆ ಹಾಗೂ ಅಕ್ಟೋಬರ್ 20ರಂದು ಮಸಾಲಾ ದೋಸಾ ನೀಡಲಾಗಿದ್ದು, ಅಕ್ಟೋಬರ್ 21 ರಂದು ಪೊಂಗಲ್ ಅನ್ನು ಕೇವಲ ಒಂದು ರೂಪಾಯಿಗೆ ನೀಡಿದ್ದಾರೆ.
ಮೊನ್ನೆಯಿಂದ ಬೆಳಗ್ಗೆ-ಸಂಜೆ ಈ ರೆಸ್ಟೋರೆಂಟ್ ಮುಂದೆ ಭಾರಿ ಪ್ರಮಾಣದಲ್ಲಿ ಜನರು ಕ್ಯೂ ನಿಂತಿದ್ದಾರೆ. 1 ರೂಪಾಯಿ ಫುಡ್ ಆಫರ್ ಕುರಿತು ಮಾತನಾಡಿದ ಮಾಲೀಕರಲ್ಲಿ ಒಬ್ಬರು, ದಕ್ಷಿಣ ಭಾರತದ ಉಪಹಾರ ಅದರಲ್ಲೂ ದೋಸೆ, ವಡಾ ಮತ್ತು ಪೊಂಗಲ್ ಅನ್ನು ದಕ್ಷಿಣ ಭಾರತೀಯರು ಮಾತ್ರವಲ್ಲದೆ ಉತ್ತರ ಭಾರತೀಯರು ಸಹ ಇಷ್ಟಪಡುತ್ತಾರೆ.
ಅದರಲ್ಲೂ ನಗರಕ್ಕೆ ಹೊಸದಾಗಿ ಬಂದಿರುವ ಟೆಕ್ಕಿಗಳಿಗೆ ಈ ಆಹಾರ ಪದಾರ್ಥಗಳ ಮೇಲೆ ಭಾರೀ ಕ್ರೇಜ್ ಇದೆ. ಈ ಆಫರ್ ನಮ್ಮ ಉದ್ಘಾಟನೆಯ ಒಂದು ಭಾಗವಾಗಿದೆ ಮತ್ತು ಜನರು ಈಗಾಗಲೇ ಇದನ್ನು ಇಷ್ಟಪಡುತ್ತಿದ್ದಾರೆ. ಜನಸಂದಣಿಯನ್ನು ನಿರ್ವಹಿಸುವುದು ನಮಗೆ ಈಗ ಒಂದು ಸವಾಲಿನ ಕೆಲಸವಾಗಿದೆ ಎಂದು ಹೇಳಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.