ನಿಮ್ಮ ದೇಹ ದೊಡ್ಡ ರೋಗದಲ್ಲಿ ಸಿಲುಕಿದೆ ಅನ್ನೋದಕ್ಕೆ ಈ ಸೂ‍ಚನೆಯೇ ಸಾಕ್ಷಿ, ಪರಿಹಾರ ಏನು ಗೊತ್ತಾ

 | 
Bd

ಜೀವನಶೈಲಿ ಸಂಬಂಧಿ ರೋಗಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಕೊನೆ ಕ್ಷ ಣದ ಆಘಾತದಿಂದ ತತ್ತರಿಸುವ ಬದಲು, ರೋಗಲಕ್ಷ ಣಗಳನ್ನು ಮೊದಲೇ ಪತ್ತೆಹಚ್ಚುವ ಕ್ಷ ಮತೆ ಬೆಳೆಸಿಕೊಳ್ಳುವುದು ಒಳಿತು. ಇದರಿಂದಾಗಿ ನೀವು ಗಂಭೀರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದಷ್ಟೇ ಅಲ್ಲದೆ, ನಿಮ್ಮ ಒಟ್ಟಾರೆ ಜೀವನವನ್ನೂ ಬದಲಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇಂದು ಜಗತ್ತಿನಲ್ಲಿ ಅತಿ ಮಾರಕ, ವ್ಯಾಪಕ ಸಮಸ್ಯೆಯೆಂದರೆ ಹೃದ್ರೋಗಗಳು. ಸಿನೆಮಾಗಳನ್ನು ನೋಡಿ ಬೆಳೆದ ನಮಗೆ, 'ವ್ಯಕ್ತಿಯೊಬ್ಬನಿಗೆ ಹೃದಯ ತೊಂದರೆ ಇದೆ ಎನ್ನುವುದು ಆತ ತನ್ನ ಎದೆಗೆ ಕೈ ಹಿಡಿದು ಹಠಾತ್ತನೆ ಕುಸಿದು ಬಿದ್ದಾಗಲೇ ಗೊತ್ತಾಗುತ್ತದೆ.' ಎಂದೇ ಭಾವಿಸಿರುತ್ತೇವೆ. ಕಾಲ ಮಿಂಚುವ ಮೊದಲೇ ಈ ಸಮಸ್ಯೆಗಳನ್ನು ಪತ್ತೆ ಹಚ್ಚಲು ಸಾಧ್ಯವಿದೆ. 

ಕೆಲವು ಕುಟುಂಬಗಳಲ್ಲಿ ಹೃದಯ ರಕ್ತನಾಳಗಳ ಸಮಸ್ಯೆಯ ಇತಿಹಾಸವಿರುತ್ತದೆ. ಅಂಥವರ ಮಕ್ಕಳಿಗೂ ಅಪಾಯ ಎದುರಾಗಬಲ್ಲದು. ಹೀಗಾಗಿ, ಕಾಲಕಾಲಕ್ಕೆ ಹೃದ್ರೋಗ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು.
ಬೆಳಗ್ಗೆ ಎದ್ದೇಳಲು ಆಯಾಸ-ಅಶಕ್ತತೆಯಾಗುವುದು. ತುಸು ದೈಹಿಕ ಶ್ರಮವಾದರೂ ಉಸಿರಾಡುವುದಕ್ಕೆ ಕಷ್ಟವಾಗುವುದು.

ಎದೆ ನೋವು. ನಿರಂತರ ಅಸ್ವಸ್ಥತೆ, ಬೆವರುವುದು, ಕಿರಿಕಿರಿಯಾಗುವುದು, ದೌರ್ಬಲ್ಯ ಕಾಡುವುದು
ದೇಹದ ಮೇಲ್ಭಾಗದಲ್ಲಿ ನೋವಾಗುತ್ತಿರುವಂತೆ ಭಾಸವಾಗುವುದು.ಲಿವರ್‌ ಸಮಸ್ಯೆ,ಬಾಯಲ್ಲಿ ಹುಣ್ಣು. ಕಣ್ಣ ಕೆಳಗೆ ಕಪ್ಪಾಗುವುದು. ಹೊಟ್ಟೆ ನೋವು, ಗಾಢ ಬಣ್ಣದ ಮೂತ್ರ, ಮೂತ್ರದಲ್ಲಿ ರಕ್ತ ಅತಿಭೇದಿ,ಮುಂದುವರಿದ ಕೇಸುಗಳಲ್ಲಿ, ರೋಗಿಗಳ ಬಣ್ಣ ಹಳದಿಗೆ ತಿರುಗಬಹುದು(ಕಾಮಾಲೆ) ಮತ್ತು ಅವರು ಗೊಂದಲಕ್ಕೀಡಾದವರಂತೆ ಕಂಡುಬರುವುದು.

ಸಾಮಾನ್ಯವಾಗಿ ಇಡೀ ಶ್ವಾಸಕೋಶವನ್ನು ಆವರಿಸುವವರೆಗೂ ಈ ಕ್ಯಾನ್ಸರ್‌ ಯಾವುದೇ ಲಕ್ಷ ಣ ತೋರಿಸುವುದಿಲ್ಲ. ಆದರೆ ಕೆಲ ವ್ಯಕ್ತಿಗಳಲ್ಲಿ ಪೂರ್ವ ಲಕ್ಷ ಣಗಳೂ ಕಾಣಿಸಿಕೊಳ್ಳುತ್ತವೆ. 'ನಿರಂತರ ಕೆಮ್ಮು, ಎದೆ ನೋವು, ತೂಕ ಕಳೆದುಕೊಳ್ಳುವುದು, ಉಸಿರಾಟದ ತೊಂದರೆ ಎದುರಾದರೆ ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ರೋಗವನ್ನು ಆರಂಭದ ಹಂತದಲ್ಲಿಯೇ ಗುರುತಿಸಿದರೆ ಚಿಕಿತ್ಸೆಯ ಯಶಸ್ಸು ಹೆಚ್ಚಾಗುತ್ತದೆ, ಎನ್ನುತ್ತಾರೆ ವೈದ್ಯರು.

ಅಧಿಕ ರಕ್ತದೊತ್ತಡದ ಪೂರ್ವ ಲಕ್ಷ ಣಗಳನ್ನು ಗುರುತಿಸಲು ಇಂದಿಗೂ ಸಾಧ್ಯವಾಗಿಲ್ಲ. ಇದನ್ನು ಸೈಲೆಂಟ್‌ ಕಿಲ್ಲರ್‌ ಎಂದು ಕರೆಯುವುದು ಈ ಕಾರಣಕ್ಕಾಗಿಯೇ. ಹೀಗಾಗಿ ಬಹುತೇಕ ವೈದ್ಯರು ತಮ್ಮ ರೋಗಿಗಳ ಬ್ಲಡ್‌ ಪ್ರೆಶರ್‌ ಪರೀಕ್ಷಿಸುತ್ತಾರೆ. ಅಧಿಕ ರಕ್ತದೊತ್ತಡ ಇದೆಯೋ, ಇಲ್ಲವೋ ಎನ್ನುವುದನ್ನು ಗುರುತಿಸುವುದಕ್ಕೆ, ನಿರಂತರವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು.

ದೇಹದಲ್ಲಿ ವಿಷಕಾರಿ ಅಂಶಗಳ ಹೆಚ್ಚಳದಿಂದಾಗಿ ನಿದ್ರೆ ಮಾಡಲು ತೊಂದರೆ ಮೂತ್ರ ವಿಸರ್ಜನೆಯಲ್ಲಿ ಕಷ್ಟ: ಮೂತ್ರದಲ್ಲಿ ರಕ್ತ, ನಿರಂತರ ಮೂತ್ರ ವಿಸರ್ಜನೆ, ಮೂತ್ರದಲ್ಲಿ ಗುಳ್ಳೆಗಳ (ಬಬಲ್‌) ಹೆಚ್ಚಳವಾಗುತ್ತದೆ ಆಗೆಲ್ಲ ವೈದ್ಯರನ್ನು ಕಾಣುವುದು ಒಳಿತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.