ಕುಡಿದು ಕಾರು ಚಲಾಯಿಸಿ ದರೆ ಏನೆಲ್ಲಾ ತೊಂದರೆ ಆಗುತ್ತೆ ಎನ್ನೋದಕ್ಕೆ ಈ ಯುವತಿಯೇ ಉದಾಹರಣೆ, ಇನ್ನಾದರೂ ಯುವಕರು ಎಚ್ಚೆತ್ತುಕೊಳ್ಳಿ

ಸುಮಾರು 10 ವರ್ಷಗಳ ಹಿಂದೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಓರ್ವ ಪೊಲೀಸ್ ಅಧಿಕಾರಿ ಮತ್ತು ಬೈಕ್ ಸವಾರನ ಸಾವಿಗೆ ಕಾರಣವಾಗಿದ್ದ, ನೂರಿಯಾ ಹವೇಲಿವಾಲಾ ಎಂಬಾಕೆ ಕಳೆದ ದಿನ ಖಿನ್ನತೆಗೆ ಬಲಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
2010ನೇ ಇಸವಿಯ ಜನವರಿ ತಿಂಗಳಲ್ಲಿ ಮಧ್ಯರಾತ್ರಿ ದುರ್ಘಟನೆಯೊಂದು ನಡೆದಿತ್ತು. ಮದ್ಯದ ಅಮಲಿನಲ್ಲಿ SUV ಕಾರು ಚಲಾಯಿಸುತ್ತಿದ್ದ ನೂರಿಯಾ ಹವೇಲಿವಾಲಾ ಚೆಕ್ ಪೋಸ್ಟ್ ಬಳಿಯಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ದೀನಾನಾಥ್ ಶಿಂಧೆ ಮತ್ತು ಬೈಕ್ ಸವಾರ ಅಫ್ಜಲ್ ಇಬ್ರಾಹಿಂ ಸೇರಿದಂತೆ ನಾಲ್ವರಿಗೆ ಡಿಕ್ಕಿ ಹೊಡೆದಿದ್ದಳು. ಆಕೆ ಡ್ರೈವಿಂಗ್ ಮಾಡುವಾಗ ಬಿಯರ್ ಕುಡಿಯುತ್ತಿದ್ದಳು ಎಂದು ತಿಳಿದುಬಂದಿತ್ತು. ಈ ಬಳಿಕ ಆಕೆಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.
ಅಮೆರಿಕದಲ್ಲಿ ಬ್ಯೂಟಿಷಿಯನ್ ಆಗಿದ್ದ ನೂರಿಯಾ ಹವೇಲಿವಾಲಾ ಅವರು ತಮ್ಮ ಪೋಷಕರೊಂದಿಗೆ ಭಾರತಕ್ಕೆ ಹಿಂತಿರುಗಿ ದಕ್ಷಿಣ ಮುಂಬೈನಲ್ಲಿ ನೆಲೆಸಿದ್ದರು. ಆದರೆ ಆಕೆ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಮೂಲಗಳು ತಿಳಿದುಬಂದಿದೆ. ಆಕೆ ಮತ್ತೆ ಅಮೇರಿಕಾಕ್ಕೆ ಹೋಗಬೇಕೆಂದು ಬಯಸಿದ್ದಳು ಆದರೆ ಪ್ರಕರಣದ ಕಾರಣ ಹೋಗಲು ಸಾಧ್ಯವಾಗಲಿಲ್ಲ.
ತಾನು ಮಾಡಿದ ತಪ್ಪಿನಿಂದಾಗಿ ಆಕೆಯ ಜೀವನವೇ ನಾಶವಾದ್ದರಿಂದ ಖಿನ್ನತೆಗೆ ಜಾರಿದ್ದಳು ಎಂದು ಆಕೆಯ ಕುಟುಂಬದ ಆಪ್ತ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಅತಿವೇಗವಾಗಿ ಚಾಲನೆ ಮಾಡಿ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಳು. ಇಬ್ಬರ ಅಮಾಯಕರ ಪ್ರಾಣ ಹೋಗಿತ್ತು. ನೀವು ಶ್ರೀಮಂತ ವ್ಯಕ್ತಿಯೇ ಆಗಿರಬಹುದು, ಒಳ್ಳೆಯ ವೃತ್ತಿಪರಳಾಗಿರಬಹುದು ಮತ್ತು ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿರಬಹುದು, ಆದರೆ ನೀವು ನಿಯಮವನ್ನು ಉಲ್ಲಂಘಿಸಿದರೆ, ಶಿಕ್ಷೆಗೆ ಗುರಿಯಾಗುತ್ತೀರಿ ಎಂಬ ಬಲವಾದ ಸಂದೇಶವನ್ನು ಈ ಪ್ರಕರಣ ರವಾನಿಸಿದೆ. ಆದ್ದರಿಂದ ಎಲ್ಲ ನಿಯಮಗಳನ್ನು ಅನುಸರಿಸಿ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ಎಂದು ಮುಂಬೈ ಟ್ರಾಫಿಕ್ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎನ್‌ಆರ್‌ಐ ಬ್ಯೂಟಿಷಿಯನ್ ಆಗಿದ್ದ ನೂರಿಯಾ, ತನ್ನ ತಂದೆ ತಾಯಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದರು ಆದರೆ, ಆಕೆಯ ತಂದೆ ಯೂಸುಫ್ ಭಾರತಕ್ಕೆ ತೆರಳಲು ನಿರ್ಧರಿಸಿ ಮುಂಬೈಗೆ ಬಂದು ಕೊಲಾಬಾದಲ್ಲಿ ವಾಸವಾಗಿದ್ದರು ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ನೂರಿಯಾ ಅಮೆರಿಕದಲ್ಲಿ ಆಸ್ತಿ ಹೊಂದಿದ್ದರು. ಅಲ್ಲದೆ, ಅಮೆರಿಕಕ್ಕೆ ಮರಳುವ ವಿಶ್ವಾಸದಲ್ಲಿ ಇದ್ದಳು. ಆದರೆ, ಡ್ರಿಂಕ್ ಆಂಡ್ ಡ್ರೈವ್ ಪ್ರಕರಣದ ಬಳಿಕ ಕಾನೂನಿ ಪ್ರಕ್ರಿಯೆ ಆಕೆಯನ್ನು ಇಲ್ಲಿಯೇ ಇರುವಂತೆ ಮಾಡಿತು. ಇದರಿಂದ ಅಮೆರಿಕಕ್ಕೆ ಹೋಗಲಾಗದೇ ಖಿನ್ನತೆಗೆ ಜಾರಿದ್ದಳು. ವಿಚಾರಣೆಯ ಆರಂಭಿಕ ದಿನಗಳಲ್ಲಿ ನೂರಿಯಾ ದೇಶವನ್ನು ತೊರೆಯಲು ಅನುಮತಿಸಲಿಲ್ಲ. ಭರವಸೆಯ ಬ್ಯೂಟಿಷಿಯನ್ ಆಗಿದ್ದ ಆಕೆ ತನ್ನ ವೃತ್ತಿಜೀವನದಲ್ಲಿ ಬೆಳೆಯಲು ಬಯಸಿದ್ದಳು. ಖಿನ್ನತೆಗೆ ಜಾರಲು ಇದೂ ಕೂಡ ಒಂದು ಕಾರಣವಾಗಿತ್ತು ಎಂದು ನೂರಿಯಾಳ ಆಪ್ತರು ತಿಳಿಸಿದ್ದಾರೆ.
ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.