ನಾನು ಮೂರು ಮದುವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ, ನಟಿ ಲಕ್ಷ್ಮೀ ಓಪನ್ ಟಾಕ್
ಕನ್ನಡ ಚಿತ್ರರಂಗದ ಚಂದನದ ಗೊಂಬೆ ಲಕ್ಷ್ಮಿ ಬಹು ಭಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನಹ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಲಕ್ಷ್ಮಿಯವರು ಕನ್ನಡವಲ್ಲದೇ ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳೆಲ್ಲಾ ಸೇರಿ ಸುಮಾರು ನಾಲ್ಕೂನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರಿನ ಮೂಲದವರಾದ ನಟಿ ಲಕ್ಷ್ಮಿ ತಂದೆ ಯರಗುಡಿಪತಿ ವರದರಾವ್ ನಿರ್ದೇಶಕ ಹಾಗೂ ನಟರಾಗಿ ಗುರುತಿಸಿಕೊಂಡಿದ್ದರು. ಲಕ್ಷ್ಮಿ ತಾಯಿ ರುಕ್ಮಿಣಿ ಮತ್ತು ಮುತ್ತಜ್ಜಿ ಎನ್. ಜಾನಕಿ ತಮಿಳು ಸಿನಿಮಾಗಳಲ್ಲಿ ನಟಿಸಿದ್ರು. ಸಿನಿ ಕುಟುಂಬದ ಮೂರನೇ ತಲೆಮಾರಿನ ನಟಿಯಾಗಿ ಲಕ್ಷ್ಮಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ತನ್ನದೇ ಇತಿಹಾಸ ಬರೆದಿದ್ದಾರೆ.
ಕೇವಲ 15 ವರ್ಷವಿರುವಾಗಲೇ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಲಕ್ಷ್ಮಿ 1968 ರಲ್ಲಿ ಜೀವನಾಂಶ ಸಿನಿಮಾ ಮೂಲಕ ಸಿನಿ ಕೆರಿಯರ್ ಆರಂಭಿಸಿದ್ರು. 1975 ರಲ್ಲಿ ಹಿಂದಿಯಲ್ಲಿ ತೆರೆಕಂಡ ಜೂಲಿ ಚಿತ್ರದ ಮೂಲಕ ಲಕ್ಷ್ಮಿ ಅಪಾರ ಜನಪ್ರಿಯತೆ ಪಡೆದ್ರು. 1968ರಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಗೋವಾದಲ್ಲಿ ಸಿ.ಐ.ಡಿ 999 ಚಿತ್ರದ ಮೂಲಕ ಚಂದನವನಕ್ಕೆ ಲಕ್ಷ್ಮಿ ಎಂಟ್ರಿ ಕೊಟ್ರು. ಕನ್ನಡ ಸಿನಿ ಪ್ರೇಮಿಗಳ ಮನಗೆದ್ದರು. ನಾ ನಿನ್ನ ಮರೆಯಲಾರೆ ಮತ್ತು ಒಲವು ಗೆಲವು, ಚಂದನಗೊಂಬೆ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಲಕ್ಷ್ಮಿ ನಟಿಸಿದ್ರು.
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿ ಲಕ್ಷ್ಮಿ ತಮ್ಮ ಅಮೋಘ ಅಭಿನಯದಿಂದಲೇ ಅಭಿಮಾನಿಗಳ ಮನಗೆದ್ದಿದ್ರು. ನಟ ಅನಂತನಾಗ್ ಮತ್ತು ಲಕ್ಷ್ಮೀ ಜೋಡಿ ಸಿನಿಮಾ ಅಂದ್ರೆ ಜನ ಮುಗಿಬಿದ್ದು ನೋಡ್ತಿದ್ರು. ಚಂದನದ ಗೊಂಬೆ ಮೂಲಕ ಆರಂಭವಾದ ಈ ಜೋಡಿ ಸುಮಾರು 25 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಜೊತೆಗೆಯಾಗಿ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದಿದೆ.
ಶಿವಚಂದ್ರನ್ ಅವರನ್ನು ಮದುವೆಯಾದ ಮಗಳಿಕ ಲಕ್ಷ್ಮಿ ಒಂದು ಹೆಣ್ಣು ಮಗುವನ್ನು ದತ್ತು ಪಡೆದ್ರು. ಮೂರನೇ ಪತಿ ಶಿವಚಂದ್ರನ್ ಜೊತೆ ಖುಷಿಯಿಂದ ಬಾಳ್ವೆ ನಡೆಸುತ್ತಿದ್ದೇನೆ ಎಂದು ನಟಿ ಲಕ್ಷ್ಮಿ ಹೇಳಿದ್ರು. ಮೂರು ಮದುವೆಯಾದ ಲಕ್ಷ್ಮಿ ಮೂರನೇ ಪತಿಯ ಜೊತೆ ನೆಮ್ಮದಿಯ ಬದುಕು ಕಂಡು ಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.