ರಚಿತಾ ರಾಮ್ ಜೊತೆ ಹುಲಿ ಕಾರ್ತಿಕ್‌ ಅಸಹ್ಯ ವರ್ತನೆ, ವೇದಿಕೆ ಮೇಲೆ ಚಳಿಬಿಡಿಸಿದ ರಚ್ಚು

 | 
ಕ್
ಮಜಾಭಾರತದ ಮೂಲಕ ಕಾಮಿಡಿ ಶೋಗೆ ಎಂಟ್ರಿಕೊಟ್ಟವ್ರು ನಟ ಹುಲಿ ಕಾರ್ತಿಕ್. ಅವರ ವಿಭಿನ್ನ ಮ್ಯಾನರಿಸಂ ಕಾಮಿಡಿ ಕಿಕ್ ಕೊಡುತ್ತೆ. ಸ್ಪಾಟ್‌ಲ್ಲೇ ಹೊಡೆಯೋ ಪಂಚ್ ಡೈಲಾಗ್ ವೀಕ್ಷಕರಿಗೆ ಕಚಗುಳಿ ಇಡುತ್ತೆ. ಹುಲಿ ಇದ್ರೆ ಮಜಾನೇ ಬೇರೆ ಅನ್ನೋ ಮಟ್ಟಿಗೆ ಆವರಿಸಿಕೊಂಡಿರುತ್ತದೆ.
ಗಿಚ್ಚಿಗಿಲಿ ಗಿಲಿ ಮೂರು ಆವೃತ್ತಿಗಳಲ್ಲಿ ಹುಲಿ ಮೋದಿ ಇತ್ತು. ಅಲ್ಲಿಂದ ಫ್ಯಾಮಿಲಿ ಗ್ಯಾಂಗ್‌ಸ್ಟರ್ಸ್ ನಲ್ಲೂ ಭಾಗವಹಿಸಿದ್ರು. ಸದ್ಯ ಭರ್ಜರಿ ಬ್ಯಾಚುಲರ್ಸ್ ಶೋ ಮೂಲಕ ಸೌಂಡ್ ಮಾಡ್ತಿದ್ದಾರೆ. ಬ್ಯಾಚುಲರ್ ಅಂದ್ಮೇಲೆ ಲವ್ ಕಹಾನಿಗಳು ಹುಲಿ ಕಾರ್ತಿಕ್ ಸುತ್ತಾ ಗಿರಿಕಿ ಹೊಡಿತಾನೇ ಇರ್ತಾವೆ. ಮೊನ್ನೆ ರಚಿತಾ ರಾಮ್ ಶೋನಲ್ಲಿ ಹೇಳಿದ ಮಾತು ಗುಸು ಗುಸು ಚರ್ಚೆಗೆ ಕಾರಣವಾಗಿದೆ.
ಹೌದು, ಮಜಾ ಭಾರತ ಸಮಯದಿಂದಲೂ ರಚಿತಾ ರಾಮ್ ಅವರ ಜೊತೆ ಹುಲಿ ಕಾರ್ತಿಕ್‌ಗೆ ಒಳ್ಳೆ ಒಡನಾಟವಿದೆ. ನಮ್ಮ ಹುಡುಗ ಅಂತ ರಚ್ಚು ಹೆಮ್ಮೆಯಿಂದ ಹೇಳ್ತಿರ್ತಾರೆ. ಭರ್ಜರಿ ವೇದಿಕೆಯಲ್ಲಿ ಅವರ ಬಾಂಡಿಂಗ್ ನೋಡಿರ್ತಾರೆ. ಇದೇ ಸಲಕ್ಕೆ ಬ್ರೇಕ್ ಅಪ್ ವಿಷ್ಯ ಬಾಯಿಬಿಟ್ಟಿದ್ದಾರೆ ರಚಿತಾ ರಾಮ್.
ಸುನೀಲ್ ಹಾಗೂ ಅಮೃತಾ ಡ್ರೀಮ್ ಗರ್ಲ್ ಬಗ್ಗೆ ಮಾತು ಕತೆ ನಡೀತಿರುತ್ತೆ. ಗೊಂಡು ಗೊಂಡಾಗಿರೋ ಗೊಂಬೆ ತೋರಿಸಿದ ಸುನೀಲ, ಇದೇ ಥೇಟ್ ರಚ್ಚು ಮ್ಯಾಮ್ ಥರನೇ ಇದೆ ಅಂತಾರೆ. ಇದಕ್ಕೆ ಪಂಚ್ ಕೊಟ್ಟ ಹುಲಿ ಕಾರ್ತಿಕ್ ಹಂಡೆ ತರಹ ಇರೋ ಗೊಂಬೆಗೆ ರಚ್ಚು ಅಂತಿಯಾ ಅಂತಾನೆ. ಅಲ್ಲಿಗೆ ರಚ್ಚು ರೊಚ್ಚಿಗೆದ್ದು ಮಗನೇ ಹಂಡೆ ಅಂತೀಯಾ? ಬ್ರೇಕ್ ಅಪ್ ಆಗಿ ಕೂತಿದ್ಯಾ ಎಲ್ಲಾ ಹೇಳ್ಬೀಡ್ತೀನಿ ಅಂತ ಬಿಡ್ತಾರೆ.
ಅಲ್ಲಿಗೆ ಹುಲಿ ಕಾರ್ತಿಕ್ ಕೈ ಮುಗಿದು ವಿಷಯ ಅರ್ಧಕ್ಕೆ ಮೊಟಕು ಗೊಳಿಸ್ತಾರೆ. ಆ ಹುಡುಗಿ ಯಾರು ಅನ್ನೋದನ್ನ ಹೇಳಲ್ಲ. ಒಂದಿಷ್ಟು ಜನರು ಅವ್ರಾ? ಇವ್ರಾ ಅಂತ ಗೆಸ್ ಮಾಡ್ತಿದ್ದಾರೆ. ಹಾಗಿದ್ರೆ ಹುಲಿ ಕಾರ್ತಿಕ್ ಗೆ ಬ್ರೇಕ್ ಆಗೋದು ನಿಜ ಎಂಬ ರೀತಿಯಲ್ಲಿ ಈ ಮಾತು ಪಿಸುಗುಟ್ಟುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.