ಹುಲಿ ಕಾತಿ೯ಕ್ ಮದ್ವೆ ಫಿಕ್ಸ್, ಕೈಹಿಡಿಯಲು ಮುಂದಾದ ಚೆಲುವೆ ಇವರೇ ನೋಡಿ

 | 
ಹಾ
 ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸಲೀಸಾಗಿ ನಿಭಾಯಿಸಿ, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವ, ಅದ್ಭುತ ಕಾಮಿಡಿ ಟೈಮಿಂಗ್ ಹೊಂದಿರುವ ಕಲಾವಿದ ಹುಲಿ ಕಾರ್ತಿಕ್. ‘ಗಿಚ್ಚಿ ಗಿಲಿಗಿಲಿ 3’ ಕಾರ್ಯಕ್ರಮದಲ್ಲಿ ಹುಲಿ ಕಾರ್ತಿಕ್ ಗೆಲುವಿನ ನಗೆ ಬೀರಿದ್ದಾರೆ ಹೌದು ಕಾರ್ತಿಕ್ ಹುಲಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಾಸ್ಯ ಕಲಾವಿದ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಚಿಕ್ಕಳ್ಳಿಯವರು. ಬಡಕುಟುಂಬದಲ್ಲಿ ಬೆಳೆದ ಕಾರ್ತಿಕ್ ಅವರಿಗೆ ತಾಯಿಯೇ ಪ್ರಪಂಚ. 
ಎಸ್‌ಎಸ್‌ಎಲ್‌ಸಿಯಲ್ಲಿ ಪರೀಕ್ಷೆಯಲ್ಲಿ ಫೇಲಾದ ಕಾರ್ತಿಕ್, ಹೊಟ್ಟೆಪಾಡಿಗಾಗಿ ಮಾಡದ ಕೆಲಸಗಳೇ ಇಲ್ಲ. ಗಾರೆ ಕೆಲಸ, ಪಂಚರ್ ಶಾಪ್, ವೆಲ್ಡಿಂಗ್ ಶಾಪ್ ಹಾಗೂ ಐಸ್‌ಕ್ರೀಮ್ ಪಾರ್ಲರ್‌ನಲ್ಲೂ ಕೆಲಸ ಮಾಡಿದ್ದಾರೆ. ಆನಂತರ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಾಗ ಪಬ್ಲಿಕ್ ಟಾಯ್ಲೆಟ್ ಸಹ ಕ್ಲೀನ್ ಮಾಡಿದ್ದಾರೆ. ಹೊಟೇಲ್‌ನಲ್ಲಿ ಟೇಬಲ್ ಕ್ಲೀನ್ ಮಾಡಿ, ಪಾತ್ರಯನ್ನು ತೊಳೆದಿದ್ದಾರೆ.
ನಾಟಕ, ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಹುಲಿ ಕಾರ್ತಿಕ್ 'ಮಜಾಭಾರತ' ಕಾಮಿಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಇದರಲ್ಲಿ ಯಾವುದೇ ಪಾತ್ರ ಕೊಟ್ಟರೂ ಸಲೀಸಾಗಿ ಮಾಡಿ, ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಇವರು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ಆನಂತರ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಹುಲಿ ಕಾರ್ತಿಕ್, ಇದರಲ್ಲಿ ವಿನ್ನರ್ ಆದರು.
ಬೆಂಕಿ, ದೂರದರ್ಶನ, ದರ್ಬಾರ್, ಹಿರಣ್ಯ, ಲಂಗೋಟಿ ಮ್ಯಾನ್, ಟಗರು ಪಲ್ಯ, ತ್ರಿವಿಕ್ರಮ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಈಗಾಗಲೇ ಒಮ್ಮೆ ಪ್ರೀತಿಸಿ ಮೊಸಹೋಗಿರುವ ಕಾರ್ತಿಕ್ ಮದುವೆ ಎಂದರೆ ದೂರ ಓಡುತ್ತಾರೆ. ಊರಲ್ಲೊಂದು ಮನೆ ಕಟ್ಟಿ ನಂತರ ಮದುವೆ ಯೊಚನೆ ಮಾಡೋ ಕುರಿತು ಮಾತಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.