40ನೇ ವಯಸ್ಸಿನಲ್ಲಿ ಮದುವೆ ಆಗಬೇಕು ಎಂದು ಪಟ್ಟು ಹಿಡಿದ ತ್ರಿಷಾ; ಹುಡುಗ ಮಾತ್ರ ಉದ್ದವಾಗಿರಬೇಕಂತೆ
ಬಹುಭಾಷಾ ನಟಿ ತ್ರಿಷಾ ಕನ್ನಡ ಸಿನಿಮಾದಲ್ಲೂ ಬಣ್ಣ ಹಚ್ಚಿ ಮೋಡಿ ಮಾಡಿದ್ದಾರೆ. ಪದೇ ಪದೆ ಈ ಚೆನ್ನೈ ಚೆಲುವೆಯ ಮ್ಯಾರೇಜ್ ವಿಚಾರ ಚರ್ಚೆ ಆಗುತ್ತಿರುತ್ತದೆ. ಈ ಹಿಂದೆ ಒಮ್ಮೆ ಎಂಗೇಜ್‌ಮೆಂಟ್ ಆಗಿ ಆಕೆಯ ಮದುವೆ ನಿಂತು ಹೋಗಿತ್ತು. ವಯಸ್ಸು 40 ಗಡಿಯಲ್ಲಿದ್ದು ಇನ್ನು ತಡ ಮಾಡೋದು ಬೇಡ ಎಂದು ಆಕೆ ನಿರ್ಧರಿಸಿದಂತಿದೆ.
ಆರಂಭದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ತ್ರಿಷಾಗೆ ಬ್ರೇಕ್ ಸಿಕ್ಕಿರಲಿಲ್ಲ. ತೆಲುಗಿನ ವರ್ಷಂ ಸಿನಿಮಾ ಮೂಲಕ ಆಕೆಯ ಹವಾ ಶುರುವಾಯಿತು. ಅಲ್ಲಿಂದ ಮುಂದೆ ತೆಲುಗು, ತಮಿಳು ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು ಮೋಡಿ ಮಾಡಿದ್ದರು. ಇತ್ತೀಚೆಗೆ ಬಂದ ಪೊನ್ನಿಯಿನ್ ಸೆಲ್ವನ್ ಸರಣಿಯಲ್ಲಿ ಕುಂದವೈ ಆಗಿ ತ್ರಿಷಾ ಗಮನ ಸೆಳೆದರು.
ಇತ್ತೀಚಿಗಷ್ಟೇ ಹೊಸ ಮನೆಯನ್ನು ಖರೀದಿಸಿರುವ ತ್ರಿಶಾ ಈದೀಗ ಮದುವೆಯ ಕುರಿತು ಆಲೋಚನೆ ಮಾಡ್ತೇನೆ ಎಂದಿದ್ದಾರೆ.ಹೊಸ ನಟಿಯರ ಹಾವಳಿ ನಡುವೆ ತ್ರಿಷಾ ಕೊಂಚ ಮಂಕಾಗಿದ್ದರು. ಆದರೆ ಈಗ ಮತ್ತೆ ಆಕೆಯ ಕಾರುಬಾರು ಶುರುವಾಗಿದೆ. ಸದ್ಯ ದಳಪತಿ ವಿಜಯ್ ನಟನೆಯ ಲಿಯೋ ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿದ್ದಾರೆ. ಮಲಯಾಳಂನ 2 ಹಾಗೂ ತಮಿಳಿನ ಮತ್ತೆರಡು ಸಿನಿಮಾಗಳು ಆಕೆಯ ಕೈಯಲ್ಲಿವೆ. ಇದೆಲ್ಲದರ ನಡುವೆ ಆಕೆಯ ಮದುವೆ ಸುದ್ದಿ ಮತ್ತೊಮ್ಮೆ ವೈರಲ್ ಆಗುತ್ತಿದೆ.
ವಯಸ್ಸು ನಲವತ್ತಾದರೂ ತ್ರಿಷಾ ಯಾಕೆ ಇನ್ನು ಮದುವೆ ಆಗಿಲ್ಲ ಎಂದು ಅಭಿಮಾನಿಗಳು ಕೇಳುತ್ತಿರುತ್ತಾರೆ. ಆದರೆ ಈ ಆಕೆ ಹಸೆಮಣೆ ಏರುವ ಬಗ್ಗೆ ಚರ್ಚೆ ಶುರುವಾಗಿದೆ. ಶೀಘ್ರದಲ್ಲೇ ಆಕೆ ಮದುವೆ ವಿಚಾರ ಘೋಷಿಸುವ ಸುಳಿವು ಸಿಗುತ್ತಿದೆ. ಮಲಯಾಳಂನ ಪ್ರಮುಖ ನಿರ್ಮಾಪಕರೊಬ್ಬರ ಜೊತೆ ತ್ರಿಷಾ ಹೊಸ ಬಾಳಿಗೆ ಕಾಲಿಡುತ್ತಾರೆ ಎನ್ನಲಾಗ್ತಿದೆ. ಆದರೆ ಆತನ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನು ಆಕೆ ಬಿಟ್ಟುಕೊಟ್ಟಿಲ್ಲ. ಆತ ಮಲಯಾಳಂ ಸಿನಿಮಾ ನಿರ್ಮಾಪಕ, ಫೈನಾನ್ಶಿಯರ್ ಅನ್ನೋದು ಮಾತ್ರ ಗೊತ್ತಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.