ಏಕಾಏಕಿ ಬಿಗ್ ಬಾಸ್ ಧನರಾಜ್ ಮನೆಗೆ ಭೇಟಿ ಕೊಟ್ಟ ತ್ರಿವಿಕ್ರಮ್ ಹಾಗೂ ಭವ್ಯ ಗೌಡ

 | 
Js
ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್, ಟಾಪ್ 3 ಕಾಂಟೆಸ್ಟಂಟ್‌ ಧನರಾಜ್ ಆಚಾರ್ ಮನೆಗೆ ದಿಧೀರ್‌ ಭೇಟಿ ಕೊಟ್ಟು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಮಂಗಳೂರಿಗೆ ತೆರಳಿದ್ದ ತ್ರಿವಿಕ್ರಮ್ ಅವರು ಪುತ್ತೂರಿನಲ್ಲಿರುವ ಧನರಾಜ್ ಅವರ ಮನೆಗೆ ಭೇಟಿ ನೀಡಿ ವಿಶೇಷವಾದ ಆತಿಥ್ಯ ಸ್ವೀಕರಿಸಿದರು.
ಧನರಾಜ್ ಆಚಾರ್ ಅವರದ್ದು ಬಹಳ ದೊಡ್ಡ ಕುಟುಂಬ. ಕಮಲಜ್ಜಿ ಕುಟುಂಬದ ಎಲ್ಲಾ ಸದಸ್ಯರ ಜೊತೆ ಕಾಲ ಕಳೆದ ತ್ರಿವಿಕ್ರಮ್ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ತ್ರಿವಿಕ್ರಮ್ ಕಂಡು ಕಮಲಜ್ಜಿ ಕುಟುಂಬದ ಸದಸ್ಯರು ಸಂತೋಷವಾಗಿದ್ದು, ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಫೋಟೋಗೆ ಸಖತ್ ಪೋಸ್ ಕೊಟ್ಟಿದ್ದಾರೆ.
ತ್ರಿವಿಕ್ರಮ್ ಆಗಮನದ ಬಗ್ಗೆ ಖುಷಿ ಹಂಚಿಕೊಂಡ ಧನರಾಜ್ ಅವರು ನಮ್ಮ ಮನೆಯಲ್ಲಿ ಮಾಸ್ಟರ್ ತ್ರಿವಿಕ್ರಮ್. ಲವ್ ಯು ಮಾಸ್ಟರ್ ನೀವು ಬಂದಿದ್ದು ಖುಷಿ, ಖುಷಿ, ಖುಷಿ ಅಷ್ಟೇ. ಕಮಲಜ್ಜಿ ಕುಟುಂಬ ಮತ್ತು ವಿಕ್ಕಿ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ತ್ರಿವಿಕ್ರಮ್ ಹೊಸ ಧಾರವಾಹಿ ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಧನರಾಜ್ ಆಚಾರ್ ಪ್ರೀತಿಗೆ ಮಾರು ಹೋದ ತ್ರಿವಿಕ್ರಮ್ ಅವರು ಕೂಡ ಕಮಲಜ್ಜಿ ಕುಟುಂಬದ ಬಗ್ಗೆ ಮಧುರವಾದ ಮಾತುಗಳನ್ನಾಡಿದ್ದಾರೆ. ಮನೆಯೇ ಮಂತ್ರಾಲಯ ಅಂತಾರೆ. ಆದರೆ ಈ ಮಂತ್ರಾಲಯದಲ್ಲಿ ಹಲವು ಮುಗ್ಧ ಮನಸಿನ ದೈವವನ್ನು ಕಂಡೆ. ಥ್ಯಾಂಕ್ಯು ಮಂಗಳೂರು ಹುಲಿ ಎಂದು ಧನರಾಜ್ ಆಚಾರ್‌ಗೆ ಧನ್ಯವಾದಗಳನ್ನು ಪ್ರಕಟಿಸಿದರು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.