ತುಕಾಲಿ ಮಾನಸ ಬದುಕು ನಿಜಕ್ಕೂ ರೋಚಕ, ಬಿಟ್ಟೋದಾ ಹುಡುಗಿಯನ್ನೇ ಮತ್ತೆ ಮದುವೆ ಆಗಿದ್ಯಾಕೆ
Sep 23, 2024, 17:13 IST
|
ಕಳೆದ ಬಿಗ್ ಬಾಸ್ ಸೀಸನ್ 10ರಲ್ಲಿ ಫೈನಲಿಸ್ಟ್ ಆಗಿದ್ದ ಕಾಮಿಡಿಯನ್ ತುಕಾಲಿ ಸಂತೋಷ್ ಅವರೂ, ಅವರ ಪತ್ನಿ ಮಾನಸ ಕೆಲವು ಬಾರಿ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡು ಭಾರಿ ಮುನ್ನೆಲೆಗೆ ಬಂದಿದ್ದರು. ಇದರ ಬೆನ್ನಲ್ಲಿಯೇ ಗಿಚ್ಚಿ ಗಿಲಿಗಿಲಿ ಸೀಸನ್-3ರ ನಾನ್ ಕಾಮೆಡಿಯನ್ ವಿಭಾಗದಲ್ಲಿ ತುಕಾಲಿ ಮಾನಸ ಅವರು ರನ್ನರ್ ಅಪ್ ಆಗಿದ್ದಾರೆ. ಇಲ್ಲಿ ಗಂಡನೇ ಗುರುವಾಗಿ ಕಾಮಿಡಿ ವೇದಿಕೆಯಲ್ಲಿ ಕಲಿಸಿದ ಪಾಠ ಯಶಸ್ವಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಗಿಚ್ಚಿ ಗಿಲಿಗಿಲಿ ಸೀಸನ್ 3ರಲ್ಲಿ ಹಲವು ಘಟನಾನುಘಟಿ ಕಾಮೆಡಿಯನ್‌ಗಳು ಸ್ಪರ್ಧಿಸಿದ್ದರು. ಅದರಲ್ಲಿ ಪಾವಗಡ ಮಂಜು, ಹುಲಿ ಕಾರ್ತಿಕ್, ಚಂದ್ರಪ್ರಭ ಮತ್ತು ತುಕಾಲಿ ಸಂತೋಷ್, ವಿನೋದ್ ಗಬ್ರಗಾಲ, ರಾಘವೇಂದ್ರ ಸೇರಿ ಹಲವರಿದ್ದರು. ಆದರೆ, ಇದರಲ್ಲಿ ಹುಲಿ ಕಾರ್ತಿಕ್ ವಿನ್ನರ್ ಆಗಿದ್ದಾರೆ. ಹುಲಿ ಕಾರ್ತಿಕ್‌ಗೆ ಬರೋಬ್ಬರಿ 10 ಲಕ್ಷ ರೂ, ಮೌಲ್ಯದ ಚಿನ್ನದ ಬೆಲ್ಟ್ ಅನ್ನು ಕೊಡಲಾಗಿದೆ. ಇನ್ನು ಈ ಸೀಸನ್‌ನಲ್ಲಿ ನಾನ್ ಕಾಮೆಡಿಯನ್ ಆಗಿ ಬಂದಿದ್ದ ಹಲವರ ಪೈಕಿ ತುಕಾಲಿ ಸಂತು ಅವರ ಪತ್ನಿ ತುಕಾಲಿ ಮಾನಸ ರನ್ನರ್ ಅಪ್ ಪ್ರಶಸ್ತಿ ಗೆದ್ದಿದ್ದಾಳೆ.
ಈ ಮೂಲಕ 3 ಲಕ್ಷ ರೂ. ಮೌಲದ್ಯ ಬೆಳ್ಳಿಯ ಬೆಲ್ಟ್ ಅನ್ನು ತನ್ನದಾಗಿಸಿಕೊಂಡಿದ್ದಾಳೆ. ನಿಜಕ್ಕೂ ತುಕಾಲಿ ಮಾನಸ ಅವರ ನಟನೆಯಲ್ಲಾದ ಬದಲಾವಣೆ ನೋಡಿದರೆ ನಿಜಕ್ಕೂ ಈ ಪ್ರಶಸ್ತಿಗೆ ಅರ್ಹಳೆಂದು ಕಾಣುತ್ತಿದೆ. ಹೌದು ಬಡತನದಲ್ಲಿ ಬೆಳೆದು ಬಂದ ಇವರನ್ನು ಅನೇಕರು ಮದುವೆಗೆ ಹೆಣ್ಣು ನೋಡಿ ಬೇಡ ಎಂದಿದ್ದರಂತೆ. ಆದರೆ ಸಂತೋಷ್ ನನಗೆ ಅಂದ ಚಂದ ಮುಖ್ಯವಲ್ಲ ಜೀವನ ನಡೆಸಿದರೆ ಸಾಕು ಎಂದು ಮದುವೆ ಆಗಿದ್ದಾರಂತೆ.
ಈದೀಗ ತಾಯಿಯೇ ಮೊದಲ ಗುರು ಎಂದು ಗಾದೆ ಮಾತು ಹೇಳುತ್ತೇವೆ. ಅದೇ ರೀತಿ ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಆದರೆ, ತುಕಾಲಿ ಮಾನಸ ಅವರ ವಿಚಾರದಲ್ಲಿ ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷ ಇದ್ದಾನೆ ಎಂದು ಹೇಳಬಹುದು. ತುಕಾಲಿ ಮಾನಸ ಅವರ ಹಾಸ್ಯ ನಟನೆಯ ಕಲಿಕೆ, ಪ್ರದರ್ಶನ ಹಾಗೂ ಇತರೆ ಕಾರ್ಯಗಳ ಹಿಂದೆ ನಿಜವಾಗಿಯೂ ತುಕಾಲಿ ಸಂತೋಷ್ ಶ್ರಮ ಸಾಕಷ್ಟಿದೆ. ತಾನೂ ಕೂಡ ಒಬ್ಬ ಕಂಟೆಸ್ಟೆಂಟ್ ಆಗಿ ಪ್ರಾಕ್ಟೀಸ್ ಮಾಡುತ್ತಾ ತನ್ನ ಹೆಂಡತಿ ಮಾನಸಗೂ ಪ್ರತಿನಿತ್ಯ ನಟನೆಯ ಪಾತ್ರವನ್ನು ಹೇಳಿಕೊಡುವ ಗುರುವಾಗಿ ಆಕೆಯ ಗಂಡನಾಗಿ ತುಕಾಲಿ ಸಂತೋಷ್ ಪಾತ್ರ ನಿರ್ವಹಣೆ ಮಾಡಿದ್ದಾನೆ. ಇದರ ಫಲವೇ ಗಿಚ್ಚಿ ಗಿಲಿಗಿಲಿ ರನ್ನರ್ ಅಪ್ ಆಗಲು ಕಾರಣವಾಗಿದೆ ಎಂದು ಹೇಳಬಹುದು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.