20 ಲಕ್ಷ ರೂಪಾಯಿಯ ಕಾರು ಖರೀದಿ ಮಾಡಿದ ತುಕಾಲಿ ಸಂತು; ಬಿಗ್ ಬಾಸ್ ಕೊಟ್ಟ ಹಣ ಖಾಲಿ ಎಂದ ಪತ್ನಿ

 | 
Jio

ತುಕಾಲಿ ಸಂತೋಷ್ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಜನಪ್ರಿಯರಾಗಿದ್ದಾರೆ. ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ದೊಡ್ಡ ಮಟ್ಟದ ಜನಪ್ರಿಯತೆ ನೀಡಿತು. ತಮ್ಮ ಹಾಸ್ಯದ ಮೂಲಕ, ಕ್ರಿಮಿನಲ್ ಐಡಿಯಾಗಳ ಮೂಲಕ ಎಲ್ಲರ ಗಮನ ಸೆಳೆದರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ವಿಶೇಷ ಎಂದರೆ ಅವರು ಈಗ ಹೊಸ ಕಾರು ಖರೀದಿ ಮಾಡಿದ್ದಾರೆ. 

ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಹೇಳಿದ್ದಾರೆ.ಗಿಚ್ಚಿ ಗಿಲಿ ಗಿಲಿ ಸೀಸನ್ ಕಾಮಿಡಿ ಕಿಲಾಡಿಗಳು 3, ಜೋಡಿ ನಂಬರ್ 1 ಅಂಥ ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆಗಿದ್ದರು ತುಕಾಲಿ ಸಂತೋಷ್. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತ್ತು. ಇದಾದ ಬಳಿಕ ಅವರು ಬಿಗ್ ಬಾಸ್ ಕನ್ನಡ ಸೀಸನ್ 10ಗೆ ಕಾಲಿಟ್ಟರು.

https://www.instagram.com/reel/C4AuN2JyWYS/?igsh=NjFhOGMzYTE3ZQ==

ಈ ರಿಯಾಲಿಟಿ ಶೋನಿಂದ ಅವರಿಗೆ ಇದ್ದ ಖ್ಯಾತಿ ಹೆಚ್ಚಿತು. ಆರಂಭದಲ್ಲಿ ಎಲ್ಲರಿಗೂ ನೋವು ಮಾಡುತ್ತಿದ್ದ ಅವರು ನಂತರದ ದಿನಗಳಲ್ಲಿ ತಮ್ಮನ್ನು ತಾವು ಬದಲಾಯಿಸಿಕೊಂಡರು. ವರ್ತೂರು ಸಂತೋಷ್ ಜೊತೆಗಿನ ಫ್ರೆಂಡ್ಶಿಪ್ ಕಾರಣದಿಂದಲೂ ಅವರು ಸುದ್ದಿ ಆದರು. ಈಗ ಕಾರು ಖರೀದಿಸಿ ಸುದ್ದಿ ಆಗಿದ್ದಾರೆ. ಬಿಗ್ ಬಾಸ್ ಹಲವರ ಜೀವನ ಬದಲಾಯಿಸಿದೆ. ಅದೇ ರೀತಿ ತುಕಾಲಿ ಸಂತೋಷ್ ಅವರ ಜೀವನ ಕೂಡ ಚೇಂಜ್ ಆಗಿದೆ. 

‘ಬಿಗ್ ಬಾಸ್’ ಫಿನಾಲೆವರೆಗೆ ಇದ್ದ ಅವರು ನಾಲ್ಕನೇ ರನ್ನರ್ಅಪ್ ಆಗಿ ಹೊರ ಹೊಮ್ಮಿದರು. ಬಿಗ್ ಬಾಸ್ನಿಂದ ಬಂದ ಸಂಭಾವನೆಯಿಂದ ಅವರು ಕಾರು ಖರೀದಿ ಮಾಡಿದ್ದಾರೆ. ಕಿಯಾ ಕಂಪನಿಯ ಕಾರನ್ನು ಅವರು ಖರೀದಿ ಮಾಡಿದ್ದಾರೆ. ಅವರ ಪತ್ನಿ ಮಾನಸಾ ಕೂಡ ಪೋಸ್ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.