ಡ್ರೋನ್ ಪ್ರತಾಪ್ ಮೇಲೆ ಕೈ ಮಾಡಲು ಬಂದ ತುಕಾಲಿ ಸಂತು, ರೊಚ್ಚಿಗೆದ್ದ ಪ್ರತಾ.ಪ್

 | 
ರಪು

ಬಿಗ್​ ಬಾಸ್​ ಸೀಸನ್​ 10 ಆರಂಭಗೊಂಡು 4 ವಾರಗಳೇ ಕಳೆದವು. ದೊಡ್ಮನೆಯಿಂದ ಈಗಾಗಲೇ ಸ್ನೇಕ್​ ಶ್ಯಾಮ್​ ಮತ್ತು ಗೌರೀಶ್​ ಅಕ್ಕಿ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಒಂದಾದ ಮೇಲೊಂದು ಮನೆಯಲ್ಲಿ ಅಚ್ಚರಿಗಳು ನಡೆಯುತ್ತಲೇ ಇವೆ.

ಹುಲಿ ಉಗುರು ಬಳಕೆಯ ಪ್ರಕರಣದಲ್ಲಿ ವರ್ತೂರು ಸಂತೋಷ್​ ಅವರು ಜೈಲಿನಲ್ಲಿ ಬಂಧನವಾಗಿ ಹೊರ ಹೋಗಿ ಬಂದಿದ್ದಾರೆ ಈ ವಾರದ ನಂತರ ಇರ್ತಾರಾ ಇಲ್ಲವಾ ಎಂದು ಕಾದು ನೋಡಬೇಕಾಗಿದೆ ಅಷ್ಟೆ.
ಎಲ್ಲರ ಮೊಗದಲ್ಲಿ ಸಂತಸ ಕಾಣುತ್ತಿತ್ತು. ಈ ಮಧ್ಯೆ ಡ್ರೋನ್​​ ಪ್ರತಾಪ್ ಅವರು ತುಕಾಲಿ ಸಂತೋಷ್​ ಅವರನ್ನು ಹೊಡೆದಿದ್ದಾರೆ. 

ಆದರೆ ಇದು ಕೇವಲ ಫನ್‌ ಆಕ್ಟಿವಿಟಿಗೆ ಮಾತ್ರ. ಮನೆಯವರೆಲ್ಲಾ ಸೂಪರ್​ ಆಗಿ ನಟಿ ತಾರಾ ಮುಂದೆ ಡ್ಯಾನ್ಸ್​ ಮಾಡಿದರು. ಈ ವೇಳೆ ತಮಾಷೆಗಾಗಿ ಡ್ರೋನ್​​ ಪ್ರತಾಪ್​ ತುಕಾಲಿ ಸಂತೋಷ್‌ ಅವರನ್ನು ಹೊಡೆದು ಹೊಡೆದು ನಗುತ್ತಾ ಡ್ಯಾನ್ಸ್​ ಮಾಡಿದ್ದಾರೆ. ಬಿಗ್‌ಬಾಸ್‌ ಶೋನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದ ಡ್ರೋನ್ ಪ್ರತಾಪ್ ಹಾಗೂ ತುಕಾಲಿ ಸಂತೋಷ್ ಅವರಿಗೆ ಸ್ಪೆಷಲ್ ಸಾಂಗ್ ಒಂದನ್ನ ಪ್ಲೇ ಮಾಡಲಾಗಿದೆ. 

ಬಂಡಲ್ ಬಡಾಯಿ ಮಾದೇವ ಹಾಡಿಗೆ ಡ್ರೋನ್ ಪ್ರತಾಪ್ ಅವರು ತುಕಾಲಿ ಸಂತೋಷ್‌ಗೆ ಡ್ಯಾನ್ಸ್‌ ಮಾಡುವಾಗ ತನ್ನ ಹಳೆ ಕೋಪವನ್ನೆಲ್ಲಾ ತೀರಿಸಿಕೊಂಡಿದ್ದಾರೆ. ಸ್ಟೇಜ್‌ ಮೇಲೆ ಡಿಶುಂ, ಡಿಶುಂ ಮಾಡುತ್ತಾ ಸಿಕ್ಕ, ಸಿಕ್ಕ ಹಾಗೆ ಗುದ್ದಿದ್ದಾರೆ. ಈ ಫೈಟಿಂಗ್ ಅನ್ನು ಗಮನಿಸಿದ ತಾರಾ ಅವರು ಇವನಿಗೆ ಎಷ್ಟು ದಿನದಿಂದ ಕಾಯ್ತಾ ಇದ್ದೆ ಇವನಿಗೆ ಹೀಗೆ ಹೊಡೆಯೋಕೆ ಅಂತಾ ಕಾಲು ಎಳೆದಿದ್ದಾರೆ. ಇವರಿಬ್ಬರ ಗುದ್ದಾಟ ನೋಡಿದ ಬಿಗ್‌ಬಾಸ್ ಸ್ಪರ್ಧಿಗಳ ಖುಷಿಯಲ್ಲಿ ತೇಲಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.