ಒಂದೇ ವರ್ಷಕ್ಕೆ ಮತ್ತೊಂದು ಹೊಸ ಕಾರು ಖರೀದಿ ಮಾಡಿದ ತುಕಾಲಿ ಸಂತು ದಂಪತಿ
Feb 17, 2025, 13:34 IST
|

ಬಿಗ್ ಬಾಸ್ ಕನ್ನಡ 10 ಶೋ ಮುಗಿಯುತ್ತಿದ್ದಂತೆ ಹೊಸ ಕಾರ್ ಖರೀದಿ ಮಾಡಬೇಕು ಅಂತ ಸಂತು ಆಸೆ ಪಟ್ಟಿದ್ದರು. ಆ ನಂತರ ಅವರು ಹೊಸ ಕಾರ್ ಖರೀದಿಸಿದ್ದರು. ಆಮೇಲೆ ಗಿಚ್ಚಿ ಗಿಲಿಗಿಲಿ ತಂಡದವರಿಗೆ ಸಣ್ಣ ಸ್ವೀಟ್ ಕೊಟ್ಟರು ಅಂತ ಅಲ್ಲಿದ್ದವರೆಲ್ಲ ಕಾಮಿಡಿ ಮಾಡಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಅದಾಗಿ ಕೆಲವೇ ದಿನಗಳಿಗೆ ಆಟೋ ರಿಕ್ಷಾ, ತುಕಾಲಿ ಕಾರ್ ಆಕ್ಸಿಡೆಂಟ್ ಆಗಿತ್ತು. ತುಕಾಲಿ ಸಂತು ಕಾರ್‌ಗೆ ಡ್ಯಾಮೇಜ್ ಆಗಿತ್ತು ಎನ್ನಲಾಗಿತ್ತು.
ಈಗ ಸಂತು, ಮಾನಸಾ ಹೊಸ ಕಾರ್ ಖರೀದಿ ಮಾಡಿದ್ದಾರೆ. ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಕಾಮೆಂಟ್‌ಗಳಿಗೆ ಮಾನಸಾ ಅವರು ಉತ್ತರ ನೀಡಿದ್ದು, ಹಳೆಯ ಕಿಯಾ ಕಾರ್ ಇದೆ, ಇದು ಯೆಲ್ಲೋ ಬೋರ್ಡ್ ಕಾರ್ ಎಂದಿದ್ದಾರೆ.
ಇನ್ನು ಈ ಗಾಡಿಯನ್ನಾದರೂ ಪ್ರೀತಿಸಿ, ಆಕ್ಸಿಡೆಂಟ್ ಮಾಡಬೇಡಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ, ಅದಕ್ಕೆ ಮಾನಸಾ ಅವರು ಆಕ್ಸಿಡೆಂಟ್ ಮಾಡೋಕೆ ಖುಷಿನಾ? ಎಲ್ಲ ನಮ್ಮ ಗ್ರಹಚಾರ ಎಂದಿದ್ದಾರೆ. ಇನ್ನೋರ್ವರು ಒಬ್ಬ ಒಳ್ಳೆಯ ಗಂಡನ ಯಶಸ್ಸು ಹಿಂದೆ ಹೆಣ್ಣು ಇರ್ತಾಳೆ ಅನ್ನೋದಕ್ಕೆ ಮಾನಸಾ ಅಕ್ಕನೇ ಉದಾಹರಣೆ ಎಂದು ಕೂಡ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಮಾತಿಗೆ ಮಾನಸಾ ಖುಷಿ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025