ತುಕಾಲಿ ಸಂತು ಮತ್ತೊಂದು ತುಕಾಲಿ ಕೆಲಸ, ರೊಚ್ಚಿಗೆದ್ದ ಕನ್ನಡದ ನಟ

 | 
Jgg

ಬಿಗ್​ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ತುಕಾಲಿ ಸಂತೋಷ್ ಹಲವು ಸ್ಪರ್ಧಿಗಳ ಬೇಸರಕ್ಕೆ ಕಾರಣವಾಗಿದ್ದಾರೆ. ಸುದೀಪ್ ಸಹ ತುಕಾಲಿಯ ವರ್ತನೆಯನ್ನು ಸೂಚ್ಯವಾಗಿ ಟೀಕಿಸಿದ್ದಾರೆ. ಇದರ ನಡುವೆ ನಿರ್ದೇಶಕರೊಬ್ಬರು ಅಶಿಸ್ತಿನಿಂದಾಗಿ ತುಕಾಲಿ ಸಂತೋಷ್ ಅನ್ನು ತಮ್ಮ ಸಿನಿಮಾದಿಂದ ತೆಗೆದಿದ್ದಾಗಿ ಹೇಳಿಕೊಂಡಿದ್ದಾರೆ.

ಹೌದು ಬಿಗ್​ಬಾಸ್ ಕನ್ನಡ ಸೀಸನ್ 10 ರ ಮೊದಲ ವಾರಾಂತ್ಯದ ಪಂಚಾಯಿತಿಯಲ್ಲಿ ನಟ ಸುದೀಪ್ ಹಾಗೂ ಮನೆಯ ಕೆಲ ಸ್ಪರ್ಧಿಗಳು ತುಕಾಲಿ ಸಂತೋಷ್ ವ್ಯಕ್ತಿತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್ ಹಾಗೂ ಇತರೆ ಕೆಲವರ ಬಗ್ಗೆ ಕೆಟ್ಟದಾಗಿ ವ್ಯಂಗ್ಯ ಮಾಡಿದ್ದನ್ನು ಸುದೀಪ್ ಸೂಚ್ಯವಾಗಿ ಟೀಕಿಸಿದರು. 

ಮನೆಯ ಕೆಲವು ಸದಸ್ಯರು ಸಹ ತುಕಾಲಿ ಸಂತೋಷ್​ರ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಬಿಗ್​ಬಾಸ್ ಮನೆಯ ಹೊರಗೆ ಸಿನಿಮಾ ನಿರ್ದೇಶಕ ಯತಿರಾಜ್ ಅವರು ತಾವು ತಮ್ಮ ಸಿನಿಮಾದಿಂದ ತುಕಾಲಿ ಸಂತೋಷ್ ಅನ್ನು ಹೊರಹಾಕಿದ್ದಾಗಿ ಹೇಳಿದ್ದಾರೆ. ತುಕಾಲಿ ಸಂತೋಶ್ ಬಹಳ ಅಶಿಸ್ತು ತೋರಿಸಿದ ಕಾರಣ ಅವರನ್ನು ಹೊರಗೆ ಹಾಕಿದ್ದಾಗಿ ಯತಿರಾಜ್ ಹೇಳಿದ್ದನ್ನು ಕೇಳಿ ಹಲವರ ಮನದಲ್ಲಿ ತುಕಾಲಿ ಸಂತೋಷ್ ಕುರಿತು ಅಸಮಾಧಾನ ಮೂಡಿದೆ.

ಸುದೀಪ್ ಅಷ್ಟು ಚಂದವಾಗಿ ಹೇಳಿದರೂ ಕೂಡ ಡ್ರೋನ್‌ ಪ್ರತಾಪ್‌ ಬಗ್ಗೆ ತುಕಾಲಿ ಸಂತು & ಗ್ಯಾಂಗ್ ಲೇವಡಿ ಮಾಡಿದ್ದರು. ಗೇಲಿ ಮಾಡಿಕೊಂಡು ನಕ್ಕಿದ್ದರು. ಹೀಗಾಗಿ, ತುಕಾಲಿ ಸಂತುಗೆ ಪಂಚಾಯತಿ ಸಂಚಿಕೆ ವೇಳೆ ಕಿಚ್ಚ ಸುದೀಪ್ ಸ್ಪೆಷಲ್ ಟ್ರೀಟ್‌ಮೆಂಟ್ ಕೊಟ್ಟಿದ್ದರು. ಅದಾದ್ಮೇಲೂ ತುಕಾಲಿ ಸಂತು ಮತ್ತು ವರ್ತೂರು ಸಂತೋಷ್‌ಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಡ್ರೋನ್ ಪ್ರತಾಪ್ ಬೆನ್ನ ಹಿಂದೆ ತುಕಾಲಿ ಸಂತು ಮತ್ತು ವರ್ತೂರು ಸಂತೋಷ್ ಮಾತನಾಡೋದನ್ನ ನಿಲ್ಲಿಸಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.