ಮುದ್ದಾದ ಪತ್ನಿ ಮೇಲೆ ಕಿರುತೆರೆ ನಟ ದಾ ಳಿ; ಸಿ ಡಿದೆದ್ದ ಕನ್ನಡಿಗರು
ಬಣ್ಣದ ಲೋಕದಲ್ಲಿ ಪ್ರೀತಿ ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಇಂದು ಜೊತೆಯಾದವರು ನಾಳೆ ದೂರವಾಗ್ತಾರೆ. ನೀನೆ ಎಲ್ಲ ಅಂದವರು, ಆ ನಂತರ ವರಸೆ ಬದಲಿಸುತ್ತಾರೆ. ಲವ್ವು-ಬ್ರೇಕ್‌ಪ್-ಮದುವೆ-ವಿಚ್ಛೇದನ ಎಲ್ಲವೂ ತೀರಾ ಕಾಮನ್ನು ಎಂಬಂತ ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಎನ್ನುವಂತೆ ಕಿರುತೆರೆಯ ನಾಯಕ ಸನ್ನಿ ಮಹಿಪಾಲ್ ಮೇಲೆ ಲವ್, ಸೆಕ್ಸ್ ಧೋಖಾ ಆರೋಪ ಕೇಳಿ ಬಂದಿದೆ.
ಈ ಹಿಂದೆ ಕನ್ನಡದಲ್ಲಿ ನೇತ್ರಾವತಿ ಎಂಬ ಧಾರಾವಾಹಿಯೊಂದು ಪ್ರಸಾರವಾಗುತ್ತಿತ್ತು. ಆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದವರು ಸನ್ನಿ ಮಹಿಪಾಲ್. ಇಂಥಾ ಸನ್ನಿ ಮಹಿಪಾಲ್ ಅವರಿಗೆ ಧಾರಾವಾಹಿ ಪೂರ್ಣವಾದ ನಂತರ, ಸಾಮಾಜಿಕ ಜಾಲತಾಣದ ಮೂಲಕ ಯುವತಿಯ ಪರಿಚಯ ಆಗಿದೆ. ಹೀಗೆ ಶುರುವಾದ ಸ್ನೇಹ ಆ ನಂತರ ಪ್ರೇಮದ ಸ್ವರೂಪ ಪಡೆದು ದೈಹಿಕ ಸಂಪರ್ಕವೂ ಬೆಳೆದಿದೆ. ಇದಕ್ಕೆ ಪುರಾವೆ ಎಂಬಂತೆ ಸದ್ಯ ಆ ಮಹಿಳೆ ಎರಡು ತಿಂಗಳ ಗರ್ಭಿಣಿ.
ಇನ್ನು ಜೂನ್ 15ರಂದು ಸನ್ನಿ ಮಹಿಪಾಲ್ ಜೊತೆಗೆ ಯುವತಿ ದೇವಸ್ಥಾನದಲ್ಲಿ ಮದುವೆ ಕೂಡ ಆಗಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಮದುವೆಯಾದ ನಂತರ ಕೆಲವೇ ಕದಿನಗಳಲ್ಲಿ ಪೋಷಕರನ್ನ ಒಪ್ಪಿಸಿ ಬರುವೆ ಎಂದು ತೆರಳಿದ್ದ ಸನ್ನಿ ಮಹಿಪಾಲ್ , ಕೇವಲ ಸ್ನೇಹಿತೆಯ ರೀತಿ ಇರಬೇಕು ಎಂದು ಪತ್ನಿಗೆ ಷರತ್ತು ಹಾಕಿದ್ದರು. ಅದರಂತೆಯೇ ಆ ಯುವತಿ ನಡೆದುಕೊಂಡಿದ್ದಾರೆ ಕೂಡ.
ಆದರೆ.. ಇದರ ನಡುವೆ ಕೆಲ ದಿನದ ಹಿಂದೆ ಮಹಿಪಾಲ್ ಬೇರೆ ಹುಡುಗಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ತಿಳಿದ ಮಹಿಪಾಲ್ ಪತ್ನಿ ಜುಲೈ 22ರಂದು ರಾತ್ರಿ ವಿಜ್ಞಾನ ನಗರದಲ್ಲಿರುವ ಮಹಿಪಾಲ್ ಮನೆಗೆ ಹೋಗಿದ್ದರು. ಅಲ್ಲದೇ ಆತನ ನಡೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಗಲಾಟೆ ನಡೆದಿದ್ದು, ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಹೆಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಕೂಡ ಸನ್ನಿ ಮಹಿಪಾಲ್ ವಿರುದ್ಧ ಆರೋಪ ಮಾಡಿದ ಯುವತಿಯ ನೆರವಿಗೆ ಬಂದಿಲ್ಲ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಅತ್ತ ಹೆಚ್ಎಎಲ್ ಪೊಲೀಸ್ ಠಾಣೆಗೆ ತೆರಳಿ ಸನ್ನಿ ಮಹಿಪಾಲ್ ಮನೆಗೆ ಅತಿಕ್ರಮ ಪ್ರವೇಶ ಮಾಡಿರೋದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಅಲ್ಲದೆ ಬಲವಂತದಿಂದ ಮದುವೆಯಾಗಿರೋದಾಗಿ ಹೇಳಿಕೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.