ಸೀರಿಯಲ್ ಬೆಡಗಿ ಜ್ಯೋತಿ ರೈ ಹೊಸ ಲುಕ್ ನೋಡಿ ಫಿದಾ ಆಗ ಕನ್ನಡಿಗರು, ಭೂಲೋಕದ ಅಪ್ಸರೆ

 | 
ಎದ್ vhh

ಚಂದನವನದ ಕಿರುತೆರೆ ನಟಿ ಜ್ಯೋತಿ ರೈ ಸದ್ಯ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇಷ್ಟು ದಿನ ತಾಯಿ ಪಾತ್ರದಲ್ಲಿ ಗೌರಮ್ಮನಂತಿದ್ದ ನಟಿ ಇದೀಗ ಏಕಾಏಕಿ ತುಂಡು ಬಟ್ಟೆ ತೊಟ್ಟು ಹಾಟ್‌ ಅವತಾರ ತಾಳಿ ಫ್ಯಾನ್ಸ್‌ಗೆ ಶಾಕ್‌ ಕೊಟ್ಟಿದ್ದಾರೆ. ಜ್ಯೋತಿ ರೈ ಮೂಲತಃ ಕನ್ನಡಿಗರಾದರೂ ತೆಲುಗಿನಲ್ಲಿಯೇ ಹೆಚ್ಚು ಗುರುತಿಸಿಕೊಂಡಿರುವ ಕಿರುತೆರೆ ನಟಿ ಜ್ಯೋತಿ ರೈ, ತಮ್ಮ ಬಣ್ಣದ ಲೋಕದ ಕೆಲಸಕ್ಕಿಂತ ಹೆಚ್ಚಾಗಿ, ವೈಯಕ್ತಿಕ ವಿಚಾರಗಳಿಂದಲೇ ಸುದ್ದಿಯಲ್ಲಿದ್ದಾರೆ.

ಮದುವೆ ಆಗಿ ಎದೆಯತ್ತರದ ಮಗನಿದ್ದರೂ, ಆಗಾಗ, ಬಾಯ್‌ಫ್ರೆಂಡ್‌, ಮದುವೆ, ಬೋಲ್ಡ್‌ ಫೋಟೋ ವಿಚಾರಕ್ಕೂ ಮುನ್ನೆಲೆಗೆ ಬರುತ್ತಿರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಈ ಸುಂದರಿ ಆಗಾಗ ಹಾಟ್‌ ಫೋಟೋಸ್‌ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. 

ಇದೀಗ ಜ್ಯೋತಿ ರೈ ಸೋಷಿಯಲ್‌ ಮೀಡಿಯಾದಲ್ಲಿ ಮತ್ತಷ್ಟು ಮಗದಷ್ಟು ಬೋಲ್ಡ್‌ ಎನಿಸುವ ಫೋಟೋಗಳನ್ನು ಹಂಚಿಕೊಂಡು ಕಿಚ್ಚು ಹಚ್ಚಿದ್ದಾರೆ. ಅವರ ಫೋಟೋಸ್ ನೋಡಿದ ನೆಟ್ಟಿಗನೊಬ್ಬ ಮೇಡಂ ದಯವಿಟ್ಟು ಬಿಕಿನಿಯಲ್ಲಿ ಕಾಣಿಸಿಕೊಳ್ಳಿ ಎಂದು ತೆಲುಗಿನಲ್ಲಿ ಕಾಮೆಂಟ್ ಮಾಡಿದ್ದಾನೆ. 

ಜ್ಯೋತಿ ರೈ ಸೀರೆಯಲ್ಲಿರುವ ಫೋಟೋಗಳನ್ನು ಸಹ  ಹಂಚಿಕೊಂಡಿದ್ದು, ರವಿವರ್ಮನ ಚಿತ್ರಕಲೆಗೆ ಹೇಳಿ ಮಾಡಿಸಿದ ಚೆಲುವು ನಿಮ್ಮದು ಮುದ್ದಾಗಿದ್ದೀರ ಹಾಗೂ ವರ್ಣನೆಗೆ ನಿಲುಕದ ಮೃಸೂರ ದಸರಾ ಗೂಂಬೆಯ ಸೊಗಸು ನೀನು ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಜ್ಯೋತಿ ರೈ 1987 ರ ಜುಲೈ 4 ರಂದು ಕರ್ನಾಟಕದಲ್ಲಿ ಜನಿಸಿದರು. ಅವರು ತಮ್ಮ ಸಂಪೂರ್ಣ ಶಿಕ್ಷಣವನ್ನು ಪುತ್ತೂರಿನಲ್ಲಿ ಮುಗಿಸಿದರು. ಕನ್ನಡದಲ್ಲಿ ಜೋಗುಳ, ಜೋಕಾಲಿ, ಕಿನ್ನರಿ ಸೀರಿಯಲ್ ಮೂಲಕ ಜ್ಯೋತಿ ರೈ ಮನೆ ಮಾತಾಗಿದ್ದರು.ಜ್ಯೋತಿ ತಮ್ಮ 20ನೇ ವಯಸ್ಸಿನಲ್ಲಿ ಪದ್ಮನಾಭ ಎಂಬುವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗನೂ ಇದ್ದಾನೆ.  ಪತಿಯಿಂದ ವಿಚ್ಛೇದನ ಪಡೆದಿರುವ ಜ್ಯೋತಿ ಸದ್ಯ ತೆಲುಗು ಯುವ ನಿರ್ದೇಶಕ ಪೂರ್ವಜ್ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿಗಳಿವೆ.  

ನಟಿ ಜ್ಯೋತಿ ರೈ ಕನ್ನಡದ 'ಬಂದೇ ಬರುತಾವ ಕಾಲ' ಸೀರಿಯಲ್ ಮೂಲಕ ನಟನಾವೃತ್ತಿ ಪ್ರಾರಂಭಿಸಿ, ಬಳಿಕ ಕನ್ನಡ, ತಮಿಳು, ತೆಲುಗು ಹಾಗೂ ತುಳು ಭಾಷೆಗಳಲ್ಲಿ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ತೆಲುಗಿನ ಗುಪ್ಪೆದಂಥ ಮನಸು ಸೀರಿಯಲ್‌ನಲ್ಲಿ ನಟಿಸುತ್ತಿರುವ ನಟಿ ಜ್ಯೋತಿ ರೈ, ವೆಬ್‌ ಸೀರೀಸ್‌ನಲ್ಲೂ ನಟಿಸುತ್ತಿದ್ದಾರೆ.ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಜ್ಯೋತಿ ರೈ ಆಗಾಗ ಬೋಲ್ಡ್ ಫೋಟೋ ಶೂಟ್‌ ಮಾಡಿಸುತ್ತಿರುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.