ಲವರ್ ಆಸೆ ಪಟ್ಟಿದ್ದಕ್ಕೆ ಲಾಡ್ಜ್ ಗೆ ಹೋದ ಯು ವತಿ, ಮಧ್ಯರಾತ್ರಿ ಈಕೆಯ ಪರಿಸ್ಥಿತಿ ನೋಡಿ ಅಧಿಕಾರಿಗಳು ಶಾ.ಕ್

 | 
೬ಗಹ೪
ಮೇಕಪ್​ ಆರ್ಟಿಸ್ಟ್​ ಒಬ್ಬಳು ಪ್ರಿಯಕರನಿಂದಲೇ ಬರ್ಬರ ಹತ್ಯೆಯಾಗಿರುವ ಘಟನೆ ಕೇರಳದ ಕಾಸರಗೋಡಿನ ಕನ್ಹಂಗಾಡ್​ನಲ್ಲಿರುವ ಲಾಡ್ಜ್​ ಒಂದರಲ್ಲಿ ನಡೆದಿದೆ.ಹೌದು ಕೊಲೆಯಾದ ಮಹಿಳೆಯನ್ನು ಉದ್ಮಾ ಪಂಚಾಯಿತಿಯ ಮುಕ್ಕುನೋಥ್​ ನಿವಾಸಿ ಪಿ.ಬಿ. ದೇವಿಕಾ ಎಂದು ಗುರುತಿಸಲಾಗಿದೆ. 

ಇನ್ನು ಹತ್ಯೆ ಮಾಡಿದ ಬಳಿಕ ಪ್ರಿಯಕರ ಸತೀಶ್​ ಲಾಡ್ಜ್​ ರೂಮ್​ ಅನ್ನು ಲಾಕ್​ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಲಾಡ್ಜ್​ ರೂಮ್​ ಅನ್ನು ತೆರೆದಾಗ ದೇವಿಕಾ ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. 

ಇನ್ನು ಇದೊಂದು ಸುಖಾಂತ್ಯ ಕಾಣದ ಪ್ರೇಮ ಪ್ರಕರಣವಾಗಿದ್ದು ಸತೀಶ್ ಮುಲ್ಲಿಯಾರ್​ ಗ್ರಾಮ ಪಂಚಾಯಿತಿಯ​ ಬೊವಿಕನಮ್​ ಮೂಲದ ನಿವಾಸಿ ಆಗಿರುತ್ತಾನೆ. ಈತ ಕನ್ಹಂಗಾಡ್​ ಪಟ್ಟಣದಲ್ಲಿ ಖಾಸಗಿ ಸೆಕ್ಯುರಿಟಿ ಏಜೆನ್ಸಿಯನ್ನು ನಡೆಸುತ್ತಿದ್ದಾನೆ. ಈಗಾಗಲೇ ಈತನಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ದೇವಿಕಾಗೂ ಮದುವೆ ಆಗಿತ್ತು. 

ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಗೆ ಡಿವೋರ್ಸ್​ ನೀಡಿ ತನ್ನೊಂದಿಗೆ ಇರುವಂತೆ ದೇವಿಕಾ ಒತ್ತಾಯ ಮಾಡುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ಸತೀಶ್​ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಕಳೆದ ಎರಡು ತಿಂಗಳಿನಿಂದ ಸತೀಶ್​ ಲಾಡ್ಜ್​ನಲ್ಲಿ ವಾಸವಿದ್ದನು. ಕನ್ಹಂಗಾಡ್​ನಿಂದ 20 ಕಿಮೀ ದೂರದಲ್ಲಿರುವ ತನ್ನ ಊರಿನಿಂದ ದೇವಿಕಾ ಲಾಡ್ಜ್​ಗೆ ಬಂದಿದ್ದಳು. 

CITU ಗೆ ಸಂಯೋಜಿತವಾಗಿರುವ ಕೇರಳ ಸ್ಟೇಟ್ ಬಾರ್ಬರ್-ಬ್ಯೂಟಿಷಿಯನ್ ವರ್ಕರ್ಸ್ ಯೂನಿಯನ್‌ನ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಲು ಕನ್ಹಂಗಾಡ್​ಗೆ ಬಂದಿದ್ದಳು. ಸಮಾವೇಶ ಬಳಿಕ ಸತೀಶ್​ನನ್ನು ಭೇಟಿ ಮಾಡಿ, ಆತನೊಂದಿಗೆ ಲಾಡ್ಜ್​ಗೆ ತೆರಳಿದ್ದಳು. ಈ ವೇಳೆ ಆಕೆಯನ್ನು ಕೊಂದಿರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಪ್ರೇಮದ ಅಮಲಿನಲ್ಲಿ ದೇವಿಕಾ ಈಗ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.