ಗೌತಮಿಗೆ ಕೈಕೊಟ್ಟು ಹೊಸ ಹುಡುಗಿ ಜೊತೆ ಕಾಣಿಸಿಕೊಂಡ ಉಗ್ರಂ ಮಂಜು, ಕನ್ನಡಿಗರು ಫಿದಾ

 | 
ಗಗಹ
ಉಗ್ರಂ ಮಂಜು ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಬಿಗ್‌ಬಾಸ್‌ ಮನೆಗೆ ಹೋದ ಬಳಿಕ ಸಾಕಷ್ಟು ಫೇಮಸ್ ಆದರು. ಹೀಗಾಗಿ ಉಗ್ರಂ ಮಂಜು ಅನ್ನೋದಕ್ಕಿಂತ ಬಿಗ್‌ಬಾಸ್‌ ಮಂಜು ಅನ್ನೋರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಬಿಟ್ಟರೆ ಗೌತಮಿ ಮಂಜು ಎಂದು ಕರೆಯುವುದುಂಟು. ಯಾಕೆಂದರೆ ಅವರಿಬ್ಬರ ನಡುವಿನ ಸ್ನೇಹ ಬಿಗ್‌ಬಾಸ್‌ ಮನೆಯಲ್ಲಿ ತುಂಬಾ ಚೆನ್ನಾಗಿತ್ತು. ಅಲ್ಲದೆ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕವೂ ಗೌತಮಿ ಹಾಗೂ ಉಗ್ರಂ ಮಂಜು ಇಬ್ಬರ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. 
ಹೌದು ಸಾಮಾಜಿಕ ಜಾಲತಾಣದಲ್ಲಿ ಉಗ್ರಂ ಮಂಜು ಅವರು ಒಂದು ಹುಡುಗಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇವರು ನನ್ನ ಜೀವನದ ಹೊಸ ಗೆಳತಿ ಎಂದು ಟ್ಯಾಗ್‌ ಲೈನ್ ಹಾಕಿದ್ದಾರೆ. ಉಗ್ರಂ ಮಂಜು ಅವರಿಗೆ ತುಂಬಾ ವಯಸ್ಸಾಗಿದ್ದರೂ ಕೂಡ ಇಲ್ಲಿವರೆಗೂ ಮದುವೆ ಆಗಿಲ್ಲ ಅನ್ನೋ ವಿಚಾರ ಹೆಚ್ಚಾಗಿ ಚರ್ಚೆಯಾಗುತ್ತಿತ್ತು. ಗೌತಮಿ ಅವರು ತಮ್ಮ ಗೆಳೆಯ ಉಗ್ರಂ ಮಂಜುಗೆ ಒಬ್ಬ ಹುಡುಗಿ ಹುಡುಕಬೇಕು, ಮದುವೆ ಮಾಡಿಸಬೇಕು ಎಂದು ಸಾಕಷ್ಟು ರೀತಿಯ ಪ್ರಯತ್ನ ಮಾಡುತ್ತಿದ್ದರು.
ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ ಹರಕೆ ಕೂಡ ಹೊತ್ತುಕೊಂಡಿದ್ದರು. ತಾವು ನಂಬುವ ವನದುರ್ಗೆಗೂ ಕೂಡ ಬೇಡಿಕೊಂಡಿದ್ದರು. ಇದೆಲ್ಲದರ ಮಧ್ಯೆ ಉಗ್ರಂ ಮಂಜು ಅವರಿಗೆ ಒಬ್ಬ ಹೊಸ ಗೆಳತಿ ಸಿಕ್ಕಿದ್ದಾಳೆ ಅನ್ನೋದನ್ನು ಸ್ವತ: ಉಗ್ರಂ ಮಂಜು ಅವರೇ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಆ ಗೆಳತಿ ಯಾರು? ಉಗ್ರಂ ಮಂಜು ಹಂಚಿಕೊಂಡಿರುವ ಆ ಫೋಟೋ ಯಾರದ್ದು? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿದೆ.
ಮ್ಯಾಂಗೋ ಪಚ್ಚ ಸಿನಿಮಾದಲ್ಲಿ ಕಾಂಜಲ್ ಕುಂದರ್ ಅವರು ನಟಿಸುತ್ತಿದ್ದಾರೆ. ನಟಿ ಕಾಂಜಲ್ ಕುಂದರ್ ಅವರೊಂದಿಗೆ ಮಂಜು ಅವರು ಒಂದೊಳ್ಳೆ ಸ್ನೇಹವನ್ನು ಬೆಳೆಸಿಕೊಂಡಿದ್ದಾರೆ. ಅವರೊಂದಿಗಿನ ಪೋಟೋಗಳನ್ನು ಮಂಜು ಶೇರ್ ಮಾಡಿದ್ದಾರೆ. ನನ್ನ ಜೀವನದ ಹೊಸ ಗೆಳತಿ ಎಂದು ಮಂಜು ಬರೆದುಕೊಂಡಿದ್ದಾರೆ. ಈ ಫೋಟೋಗೆ ನಾನಾ ರೀತಿಯ ಕಾಮೆಂಟ್‌ಗಳು ಬರುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.