ತಾಯಿಯ ಕಷ್ಟ ನೋಡಲಾರದೆ ಮಗ ಮಾ ಡಿದ್ದೇನು ಗೊ.ತ್ತಾ

 | 
Vh

ನನ್ನ ಕೈ ಅಲ್ಲಿ ಏನೂ ಆಗದು ಬದುಕು ಬೇಸರ ಮೂಡಿಸಿದೆ ಎನ್ನುವವರರೊಮ್ಮೆ ಇದನ್ನು ಓದಲೇ ಬೇಕು. ಎಕೆಂದರೆ ಕಾಳುಗಳಿಲ್ಲದ ವ್ಯಕ್ತಿಯೊಬ್ಬ ತನ್ನ ಬದುಕನ್ನು ಕಟ್ಟಿ ಕೊಂಡ ಬಗೆ ಇದೆಯಲ್ಲ ಇದು ನಿಜಕ್ಕೂ ಹಲವರಿಗೆ ಆದರ್ಶ ಪ್ರಾಯ. ಹೌದು ಅವರ ಹೆಸರು ದೊರೆಸ್ವಾಮಿ ಎಂದು. ಅವರು ಮೂಲತಃ ಮೈಸೂರಿನ ಹುಣಸೂರಿನವರು.

ಊರಿನಲ್ಲಿ ಚಂದದ ಕುಟುಂಬ ಹೊಂದಿದ್ದ ಇವರು ಒಂದಿಷ್ಟು ಭೂಮಿಯನ್ನು ಸಹ ಹೊಂದಿದ್ದರು. ಅಲ್ಲಿ ವ್ಯವಸಾಯ ಮಾಡಿಕೊಂಡು ಸಂತೋಷದಿಂದ ಬದುಕುತ್ತಿದ್ದ ಇವರ ಬಾಳಲ್ಲಿ ಅದೊಂದು ದಿನ ತೆಂಗಿನ ಮರ ಏರಿದ್ದ ದೊರೆಸ್ವಾಮಿ ಅವರ ದುರದೃಷ್ಟಕ್ಕೆ ಅದೇ ಮರದಲ್ಲಿದ್ದ ಜೇನು ಹುಳು ಕಚ್ಚಿ ಮರದಿಂದ ಕೆಳಗೆ ಬಿದ್ದಾಗ ಬೆನ್ನಿನಲ್ಲಿರುವ ಮೂಳೆಯೆ ಮುರಿದು ಅದರೊಳಗಿದ್ದ ನರಗಳು ಕಟ್ ಆಗಿ ಹಾಸಿಗೆ ಹಿಡಿಯುವಂತಾಯಿತು.

ಅಲ್ಲಿಂದ ಆರು ತಿಂಗಳ ಆಸ್ಪತ್ರೆಯಲ್ಲೆ ಮಲಗಿಯೇ ಇದ್ದ ದೊರೆಸ್ವಾಮಿ ಅವರು ನಂತರದ 6 ವರ್ಷಗಳನ್ನೂ ಕೂಡ ಮನೆಯಲ್ಲಿ ಹಾಸಿಗೆ ಮೇಲೆ ಮಲಗಿ ಕಾಲ ಕಳೆಯುವಂತಾಗಿತ್ತು. ದುಡಿದು ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ. ತುತ್ತು ಅನ್ನಕ್ಕಾಗಿ ಜೀವನದಲ್ಲಿ ಒದ್ದಾಡುವ ಪರಿಸ್ಥಿತಿ ಎದುರಾಗಿತ್ತು. ಬೆನ್ನಿನ ಕೆಳಗಿನ ಅಂಗಾಂಗಳು ಸ್ವಾಧೀನ ಇಲ್ಲದ ಕಾರಣ ಎದ್ದು ಒಡಾಡುವಂತೆಯು ಇರಲಿಲ್ಲ.

ಅದನ್ನು ನೋಡಿ ಅವರ ತಾಯಿ ಪ್ರತಿದಿನ ಮಾನಸಿಕವಾಗಿ ಕುಗ್ಗುತ್ತಿದ್ದ ಕಾರಣ ದೊರೆಸ್ವಾಮಿ ಅವರು ನಂತರದಲ್ಲಿ ಒಂದು ಆಶ್ರಮ ಸೇರಿ ಅಲ್ಲಿ ಕೆಲ ದಿನಗಳ ಕಾಲ ಉಳಿದು ಬೆಂಗಳೂರು ಮಹಾ ನಗರಕ್ಕೆ ಕಾಲಿಟ್ಟರು. ಬೆಂಗಳೂರಿನಲ್ಲಿ ಅವರ ಬದುಕಿಗೆ ಸುರೇಶ್ ಎನ್ನುವ ವ್ಯಕ್ತಿಯೊಬ್ಬ ದೇವರಂತೆ ಬಂದು ಅವರನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಅವರಿಗೆ ಊಟ ತಿಂಡಿ ನೀಡಿದ್ದಲ್ಲದೆ ಜೊಮೇಟೋ ಫುಡ್ ಡಿಲವರಿ ಮಾಡುವ ಕೆಲಸಕ್ಕೆ ಕೂಡ ಸೇರಿಸಿದರು. ನಂತರದಲ್ಲಿ ಒಂದು ಕಂಪನಿಯವರು ವ್ಹೀಲ್ ಚೇರ್ ಕೂಡ ನೀಡಿ ಇಂದು ದೊರೆಸ್ವಾಮಿ ಅವರ ಸ್ವಾವಲಂಬಿ ಬದುಕಿಗೆ ನೆರವಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.