ಉಪೇಂದ್ರ ಬಾಲ್ಯದ ದಿನಗಳು ತುಂಬಾ ಕಷ್ಟಕರ; ಒಂದು ಹೊತ್ತು ಊಟಕ್ಕೂ ಗತಿ ಇರಲಿಲ್ಲ

 | 
Hdhdh

ಹಸಿವು ಬಡತನದಲ್ಲಿ ಅರಳಿದ ಹೂವು ಇವರು. ಉಳಿಯೇಟು ತಿಂದ ಶಿಲೆ ಅದ್ಭುತ ಕಲಾಕೃತಿಯಾಗುತ್ತೆ ಹಾಗೆಯೇ ಜೀವನದ ಕಹಿ ಅನುಭವಗಳನ್ನು ವೃತ್ತಿಯಾಗಿಸಿಕೊಂಡು ಸಾಧನೆಯ ಶಿಖರವನ್ನೇರಿದ ಒಬ್ಬ ಸಾಮಾನ್ಯ ಅಡುಗೆ ಭಟ್ಟರ ಮಗ ಇಡೀ ಕರ್ನಾಟಕಕ್ಕೆ ರುಚಿರುಚಿಯಾದ ಸಿನಿಮಾವನ್ನು ಉಣಬಡಿಸಿದವರು. ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಕಷ್ಟ ಪಡುತ್ತಿದ್ದ ಇವರು ಇವತ್ತು ಕರ್ನಾಟಕದ ಬುದ್ಧಿವಂತ, ಸಾಮಾನ್ಯರಿಗೆ ಇವರನ್ನು ಅರ್ಥಮಾಡಿಕೊಳ್ಳಲು ಕಷ್ಟವಾದರೂ ಅರ್ಥ ಆದವರಿಗೆ ಇವರ ಶಕ್ತಿ ಏನು ಎಂಬುದು ಚೆನ್ನಾಗಿಯೇ ಗೊತ್ತಿರುತ್ತದೆ ಅವರೇ ನಟ ಉಪೇಂದ್ರ.

ನಟ ಉಪೇಂದ್ರ ಅವರನ್ನು ಸಾಮಾನ್ಯ ಪದಗಳಿಂದ ವರ್ಣನೆ ಮಾಡಲು ಅಸಾಧ್ಯ ಏಕೆಂದರೆ ಉಪೇಂದ್ರ ಅವರ ಕೆಲಸಗಳೇ ಆಗಿರುತ್ತದೆ, ಚಿತ್ರ ವಿಚಿತ್ರವಾಗಿದ್ದರು ಅದರಲ್ಲೊಂದು ಮಾದರಿ ಖಂಡಿತವಾಗಿಯೂ ಅಡಕವಾಗಿರುತ್ತದೆ. ಹೀಗೆ ತಮ್ಮ ಅದ್ಭುತ ಬುದ್ಧಿವಂತಿಕೆಯ ಶೈಲಿಯಿಂದಲೇ ಕನ್ನಡದ ಬುದ್ಧಿವಂತ ಎಂಬ ಪ್ರಖ್ಯಾತಿ ಪಡೆದಿರುವ ಉಪ್ಪಿ ಕಡು ಬಡತನದ ಕುಟುಂಬದಲ್ಲಿ ಬೆಳೆದಂತಹ ನಟ. ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಯಾವ ನಟರು ಉಪೇಂದ್ರ ಅವರಿಗೆ ಸರಿಸಮಾರಾಗಲಾರರು.

ತಮ್ಮ ಡಿಫ್ರೆಂಟ್ ಐಡಿಯಾಗದಿಂದ ಇಡೀ ಭಾರತ ಚಿತ್ರರಂಗವನ್ನು ಕನ್ನಡ ಸಿನಿಮಾ ರಂಗದತ್ತ ತಿರುಗಿ ನೋಡುವಂತೆ ಮಾಡಿದ ಅದ್ಭುತ ಕಲಾವಿದ. ನಟನಿಗೂ ಸೈ ನಿರ್ದೇಶನಕ್ಕೂ ಸೈ ಇನ್ನು ಅಂತಿದ್ದ ಉಪೇಂದ್ರ ಅವರು A ಎಂಬ ಸಿನಿಮಾದ ಮೂಲಕ ತಮ್ಮ ನಟನ ವೃತ್ತಿಯನ್ನು ಪ್ರಾರಂಭ ಮಾಡಿದರು ಉಪೇಂದ್ರ ಅವರು ನಟನೆಗಿಳಿಯುವ ಮುನ್ನ ನಿರ್ದೇಶನಕ್ಕೆ ಕೈ ಹಾಕಿ ಬಹುದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುತ್ತಾರೆ. 

ಹೌದು ತರ್ಲೆ ನನ್ ಮಗ, ಓಂ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಾ ಪ್ರಖ್ಯಾತಿ ಪಡೆದಿದ್ದ ಉಪ್ಪಿ ತಾನು ನಟನಾಗಬೇಕೆಂಬ ಆಸೆ ಬಂದ ನಂತರ ಎರಡನೇ ಎನ್ನಿಂಗ್ಸ್ ಪ್ರಾರಂಭಿಸಿದರು ಹೀಗೆ ಡೈರೆಕ್ಷನ್ ಹಾಗೂ ನಟನೆ ಎರಡರಲ್ಲಿಯೂ ಬಹುದೊಡ್ಡ ಮಟ್ಟದ ಯಶಸ್ಸನ್ನು ಕಂಡಂತಹ ಉಪೇಂದ್ರ ಅವರ ಕಷ್ಟಗಳಿಗೆ ಯಶಸ್ಸಿನ ಸುರಿಮಳೆಗೆ ದೊರಕಿತ್ತು. ಅತಿ ಚಿಕ್ಕ ವಯಸ್ಸಿನಲ್ಲಿ ಬಂದಂತಹ ಕಷ್ಟಗಳಿಗೆ ಎದೆಗುಂದದೆ ತಮ್ಮ ಕರ್ಚನ್ನು ತಾವೇ ನೋಡಿಕೊಳ್ಳಬೇಕೆಂಬ ಮನವರಿಕೆಯಾದಾಗ ಕಾಲೇಜಿಗೆ ಹೋಗುತ್ತಿದ್ದಂತಹ ಸಮಯದಲ್ಲಿ ಪೇಪರ್ ಕವರನ್ನು, ಅಗರಬತ್ತಿಯನ್ನು ಮಾಡುತ್ತಾ ಹಣ ಸಂಪಾದನೆ ಮಾಡಿದವರು. 

ಖರ್ಚಿಗೆ ಸ್ವಲ್ಪ ಹಣವನ್ನು ಇಟ್ಟುಕೊಂಡು ಉಳಿದದ್ದನ್ನೆಲ್ಲ ತಮ್ಮ ತಂದೆ ತಾಯಿಗೆ ನೀಡಿ ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದಂತಹ ಮನೆ ಮಗ. ಕಾಶಿನಾಥ್ ಅವರ ಪರಿಚಯದಿಂದ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಉಪೇಂದ್ರ, ಡೈರೆಕ್ಟರ್ ಆಗಿ ಬಡ್ತಿ ಪಡೆದು ತರ್ಲೆ ನನ್ ಮಗ ಸಿನಿಮಾವನ್ನು ನಿರ್ದೇಶನ ಮಾಡಿ ಗೆದ್ದರು. ಅಲ್ಲಿಂದ ಶುರುವಾದ ಉಪೇಂದ್ರ ಅವರ ಪರ್ವ ಇಂದಿಗೂ ನೆಲಕಚ್ಚಿಲ್ಲ ಯಶಸ್ವಿ ಚಿತ್ರಗಳ ಮೂಲಕ ಇಂದಿಗೂ ಪ್ರೇಕ್ಷಕರನ್ನು ರಂಜಿಸುತ್ತಿರುವ ಉಪ್ಪಿ ಬದುಕಿನ ಕಥೆಯಿದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.