ಹಿಂದೂಗಳ ಪುಣ್ಯಕ್ಷೇತ್ರವಾದ ಕುಂಭಮೇಳದಲ್ಲಿ ಯುಟಿ ಖದರ್ ಏಕಾಏಕಿ ಪ್ರತ್ಯಕ್ಷ, ಸನಾತನ ಧರ್ಮದ ಶಕ್ತಿಗೆ ಫಿದಾ ಆದ ಸ್ಪೀಕರ್
Jan 26, 2025, 09:12 IST
|

ಕರಾವಳಿ ಭಾಗದಲ್ಲಿನ ಹಿಂದೂಗಳ ಬ್ರಹ್ಮಕಲಶ, ಕೋಲ, ನಾಗಮಂಡಲವಿರಲಿ, ಮುಸ್ಲಿಮರ ಈದ್ ಪ್ರಾರ್ಥನೆ ಇರಲಿ, ಕ್ರಿಶ್ಚಿಯನ್ನರ ಕ್ರಿಸ್ಮಸ್ ಪ್ರೇಯರ್ ಇರಲಿ, ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಸ್ಪೀಕರ್ ಯು.ಟಿ.ಖಾದರ್ ಭಾಗಿಯಾಗುತ್ತಾರೆ.ಸತತವಾಗಿ ಮಂಗಳೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬರುತ್ತಿರುವ ಖಾದರ್, ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಸ್ಪೀಕರ್ ಕಚೇರಿಯ ಆಹ್ವಾನದ ಮೇರೆಗೆ ಖಾದರ್ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ.
ಉತ್ತರ ಪ್ರದೇಶದ ಸ್ಪೀಕರ್ ಸತೀಶ್ ಮಹಾನಾ ಅವರ ಆಹ್ವಾನದ ಮೆರೆಗೆ ಉತ್ತರ ಪ್ರದೇಶದಲ್ಲಿ ಅದ್ಧೂರಿಯಾಗಿ ಪ್ರಯಾಗ್ ರಾಜ್ ನಲ್ಲಿ ನಡೆಯುವ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಭೇಟಿ ನೀಡಿದ್ದೇನೆ. ಅಲ್ಲಿನ ಸಹಾಯಕ ಆಯುಕ್ತ ದಶರಥ್ ಕುಮಾರ್ ರವರು ಆತ್ಮೀಯವಾಗಿ ಸ್ವಾಗತಿಸಿದರು ಎಂದು ಖಾದರ್, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ರಯಾಗ್ ರಾಜ್ ಮಹಾ ಕುಂಭ ಮೇಳ ಭೇಟಿಯ ಬಳಿಕ ಅಲಹಾಬಾದ್‌ನಲ್ಲಿರುವ ಹಜರತ್ ಮಖ್ದೂಮ್ ಸಾದತ್ ಚೌಧೋನ್ ಪೀರೋ (ರ.ಅ)ದರ್ಗಾ ಶರೀಫ್‌ಗೆ ಭೇಟಿ ನೀಡಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಂದರ್ಭ" ಎಂದೂ ಯು.ಟಿ.ಖಾದರ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.ಖಾದರ್ ಅವರ ಪೋಸ್ಟಿಗೆ, ಸಾಮಾಜಿಕ ತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸುಮಾರು 1.4 ಸಾವಿರ ಜನರು ಲೈಕ್ ಮಾಡಿದ್ದು, ನೂರಾರು ಕಾಮೆಂಟುಗಳು ಇದಕ್ಕೆ ಬಂದಿವೆ. ’.ಆದಷ್ಟು ಧಾರ್ಮಿಕ ಪ್ರವಾಸ ಕಡಿಮೆ ಮಾಡಿ ಎಂದಿನಂತೆ ಬಡವರ ದೀನದಲಿತರ ರೋಗಿಗಳ ಮನೆಯ ಭೇಟಿ ಮುಂದುವರಿಸಿ’ ಎನ್ನುವ ಪ್ರತಿಕ್ರಿಯೆ ಇದಕ್ಕೆ ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,14 Mar 2025
ಸ್ವಂತ ತಂದೆಯಿಂದಲೇ ಮಗಳ ಅ ತ್ಯಾಚಾರ, ಮುದ್ದಿನ ಮಗಳ ಜೀವನ ನುಂಗಿದ ಕಾ ಮುಕ
Thu,13 Mar 2025