ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ, ರಾಜ್ಯಕ್ಕೆ ಆಯ್ತಾ ಮೋಸ

 | 
ಕಿ

ಕೇಂದ್ರದ ಹಣವೆಲ್ಲ ಉತ್ತರ ಪ್ರದೇಶಕ್ಕೆ ಹರಿದು ಹೋಗುತ್ತಿರುವಾಗ ಕರ್ನಾಟಕಕ್ಕೆ ಹೇಗೆ ನೀಡುತ್ತಾರೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶೈಲಿಯ ಭಾಷಣದ ಮಾತಿನಲ್ಲೇ ಹೇಳುವುದಾದರೆ, ”ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಯ ವಿಧಾನದಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿಗಳನ್ನು ಪ್ರದರ್ಶಿಸುವ ಮಾತೇ ಇಲ್ಲ. ಸ್ವಾರ್ಥ ಹಿತಾಸಕ್ತಿಗಳು ಅಂತಹ ಆರೋಪವನ್ನು ಹೊರಿಸಿದ್ದಾರೆ.

 ಆ ಬಗ್ಗೆ ನಿರ್ಧರಿಸುವ ಸ್ವಾತಂತ್ರ್ಯ ನನಗಿಲ್ಲ. ಹಣಕಾಸು ಆಯೋಗ ಅದಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಖ್ಯಾತೆ ತೆಗೆಯುತ್ತಿದೆ. ದರ ನಿರ್ಧಾರದಲ್ಲಿ ಭಾರತ ಸರ್ಕಾರದ ಪಾತ್ರವಿಲ್ಲ. ಹಣಕಾಸು ಆಯೋಗ ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಮಾತನಾಡಿ ವರದಿ ಸಲ್ಲಿಸುತ್ತದೆ. ಹಣಕಾಸು ಆಯೋಗದ ಶಿಫಾರಸುಗಳನ್ನು ಆಧರಿಸಿ ತಾರತಮ್ಯದ ಭಯವಿಲ್ಲದೆ ಹಂಚಿಕೆಯಾಗಬೇಕು.

 ಹಂಚಿಕೆಯಲ್ಲಿ ಅನ್ಯಾಯವಾಗಿರುವುದು ರಾಜಕೀಯ ಹಿತಾಸಕ್ತಿಯ ದೋಷಾರೋಪಣೆ. ಹಣಕಾಸು ಸಚಿವರು ರಾಜ್ಯದ ಅನುದಾನ ಹಂಚಿಕೆಯಲ್ಲಿ ಮಧ್ಯಪ್ರವೇಶಿಸುವ ಪ್ರಶ್ನೆಯೇ ಇಲ್ಲ. ಇದೀಗ ನಿಮ್ಮ ದುಬಾರಿ ಬಜೆಟ್‌ಗೆ ಹಣದ ಕೊರತೆಯಾಗಿದೆಯೆ? ಹಾಗಿದ್ದರೆ ಹಣ ವ್ಯಯಿಸಬೇಡಿ. ಬಜೆಟ್‌ನಲ್ಲಿ ಸಾಧ್ಯವಾಗದ ವೆಚ್ಚವನ್ನು ಮಾಡಲು ಹೋಗಬೇಡಿ. ಅಂತಹ ಪ್ರಯತ್ನಗಳಿಗೆ ಕೇಂದ್ರವನ್ನು ದೂಷಿಸಬೇಡಿ, ಅದಕ್ಕೆ ನಾನು ಉತ್ತರಿಸಬೇಕಾಗಿಲ್ಲ. ಹಣಕಾಸು ಆಯೋಗದ ಜೊತೆಗೆ ನಿಮ್ಮ ಸ್ಥಿತಿ ವಿವರಿಸಿ ಅಗತ್ಯ ಪೂರೈಸಿಕೊಳ್ಳಿ ಎಂದು ಬಿಡುಬೀಸಾಗಿ ಉತ್ತರಿಸಿದ್ದಾರೆ.


ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ಕರ್ನಾಟಕದಿಂದಲೇ ಬಿಜೆಪಿಯ ಅಭ್ಯರ್ಥಿಯಾಗಿ ಆಯ್ಕೆಯಾದವರು. ಹಾಗಿರುವಾಗ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೆ ಹಣಕಾಸು ಆಯೋಗವನ್ನು ಪ್ರಶ್ನಿಸಿ ಎಂದು ಅಹಂಕಾರದ ಉತ್ತರವನ್ನು ಸಂಸತ್ತಿನಲ್ಲಿ ನೀಡಿದ್ದಾರೆ. ಹಾಗಿದ್ದರೆ, ಅನುದಾನ ಹಂಚಿಕೆಯ ನಿರ್ಧಾರ ಸಂಪೂರ್ಣವಾಗಿ ಹಣಕಾಸು ಆಯೋಗವೇ ಮಾಡುತ್ತದೆಯೆ? ಭಾರತ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲವೆ? ಒಟ್ಟಿನಲ್ಲಿ ಕರ್ನಾಟಕಕ್ಕೆ ಮೋಸ ಎಂದು ನುಡಿದಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.