6 ವರ್ಷ ಪ್ರೀತಿಸಿದ ಮುದ್ದಿನ ಸುಂದರಿಯ ಕೈಹಿಡಿಯಲಿರುವ ಬ್ರೋ ಗೌಡ, ಲಕ್ಷ್ಮೀ ಹಾಗೂ ಕೀರ್ತಿಗೆ ಕೈಕೊಟ್ಟ ವೈಷ್ಣವ್

 | 
Bjjj
ಬಿಗ್ ಬಾಸ್ ಸೀಸನ್ 8 ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಕನ್ನಡದ ರ್ಯಾಪರ್ ಆಗಿದ್ದ ಬ್ರೋ ಗೌಡ ಆಲಿಯಾಸ್ ಶಮಂತ್ ಗೌಡ, ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ತಾಯಿಯ ತಾಳಕ್ಕೆ ತಕ್ಕಂತೆ ನಡೆಯುವ ವೈಷ್ಣವ್, ಅಮ್ಮನ ಮಾತು ಕೇಳಿ ಪ್ರೀತಿಸಿದ ಹುಡುಗಿಯನ್ನು ಬಿಟ್ಟು, ಅಮ್ಮ ಹೇಳಿದ ಹುಡುಗಿಯನ್ನು ಮದುವೆಯಾಗಿದ್ದ.
ಇದಿಷ್ಟು ಸೀರಿಯಲ್ ಗೆ ಸಂಬಂಧಿಸಿದ ವಿಷ್ಯ ಆಗಿದ್ರೆ ನಿಜ ಜೀವನದ್ದಲ್ಲೂ ಬ್ರೋ ಗೌಡ ಮದುವೆಯಾಗೋದಕ್ಕೆ ರೆಡಿಯಾಗಿದ್ದಾರೆ. ಇದನ್ನು ಸ್ವತಃ ಶಮಂತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ತಾವು ಹೊಸ ಜೀವನಕ್ಕೆ ಕಾಲಿಡುವ ಬಗ್ಗೆ ತಿಳಿಸಿದ್ದಾರೆ. ಫೆಬ್ರುವರಿ 14 ರ ವ್ಯಾಲೆಂಟೈನ್ಸ್ ಡೇ ಸಂಭ್ರಮದಂದು ಬ್ರೋ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ New Chapter Unlocked Of #brogram ಎಂದು ಬರೆದುಕೊಂಡು ಒಂದು ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ. 
ಇನ್ನು ಬ್ರೋ ಗೌಡ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮೇಘನಾ. ಇವರು ಮೇಕಪ್ ಆರ್ಟಿಸ್ಟ್ ಆಗಿದ್ದು,  ಇವರಿಬ್ಬರ ಪ್ರೀತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶಮಂತ್ ಗೌಡ, ಬ್ಲಾಕ್ ಅಂಡ್ ವೈಟ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ರೆ, ಮೇಘನಾ ವೈಟ್ ಡ್ರೆಸ್ಸಲ್ಲಿ ಕಾಣಿಸಿಕೊಂಡಿದ್ದಾರೆ.  ಮೇಘನಾ ಮತ್ತು ಬ್ರೋ ಗೌಡ ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಈ ಜೋಡಿ , ಜೊತೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಸಹ ಮಾಡುತ್ತಿದ್ದರು. 
ಇದೀಗ ಅದೇ ಹುಡುಗಿಯನ್ನು ಪ್ರೀತಿಸಿ, ಹೊಸ ಜೀವನಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ. ಈ ಜೋಡಿಗೆ ಸೋಶಿಯಲ್ ಮಿಡಿಯಾದಾದ್ಯಂತ ಅಭಿಮಾನಿಗಳು ಹಾಗೂ ಕಲಾವಿದರು, ಶುಭ ಕೋರಿದ್ದಾರೆ. ಇಬ್ಬರ ಮದುವೆ ಯಾವಾಗ ಅನ್ನೋದನ್ನು ಶಮಂತ್ ಇನ್ನೂ ರಿವೀಲ್ ಮಾಡಿಲ್ಲ. ಮೇಘನಾ ಗ್ರಾಮ್ ಅವರ ಕಾಲೇಜಿನ್ ಇವೆಂಟ್ ವೊಂದರಲ್ಲಿ ಶಮಂತ್ ಬ್ರೊ ಗೌಡ ಆಗಮಿಸಿದ್ದರು. ಆ ವೇಳೆ ಶಮಂತ್ ಬ್ರೊ ಗೌಡ, ಮೇಘನಾಗೆ ಪರಿಚಯ ಆಗಿತ್ತಂತೆ. ಆಮೇಲೆ ಆ ಪರಿಚಯ ಸ್ನೇಹವಾಗಿದೆ. ಬಳಿಕ ಸ್ನೇಹ, ಪ್ರೀತಿಗೆ ತಿರುಗಿತ್ತು. ಇಬ್ಬರ ಪ್ರೀತಿಗೆ ಶಮಂತ್ ಗೌಡ ಕುಟುಂಬಸ್ಥರು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ. ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub