ಕನ್ನಡಿಗರ ಮೈಯಲ್ಲಿ ಬೆವರು ಬರುವಂತೆ ಬೆಳ್ಳಿಡ್ಯಾನ್ಸ್ ಮಾಡಿದ ವೈಷ್ಣವಿ ಗೌಡ
ಅಗ್ನಿಸಾಕ್ಷಿ, ದೇವಿ ಮೊದಲಾದ ಧಾರವಾಹಿಗಳಲ್ಲಿ ಅಭಿನಯಿಸಿ ಮನೆಮಗಳಂತಾದ ವೈಷ್ಣವಿ ಗೌಡ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಕೆಲ ದಿನಗಳ ಹಿಂದಷ್ಟೇ ಸೀತಾರಾಮ ಕಲ್ಯಾಣ ಭರ್ಜರಿಯಾಗಿ ನಡೆದಿದೆ. ಮದುವೆ ನಿರ್ವಿಘ್ನವಾಗಿ ಮುಗಿದಿದೆ. ಹಲವು ಅಡೆತಡೆಗಳನ್ನು ಮೀರಿ ಮದುವೆ ಯಶಸ್ವಿಯಾಗಿ ನೆರವೇರಿದೆ.
ಇವರಿಬ್ಬರ ಮದುವೆಗೆ ಯಾವ ಆತಂಕಗಳೂ ಬರದಿರಲಪ್ಪ ಎಂದುಕೊಂಡವರು ನಿರುಮ್ಮಳಾಗಿದ್ದಾಳೆ. ಮದುವೆ ಮುಗಿಯುವವರೆಗೆ ಇದ್ದ ಆತಂಕವೂ ದೂರವಾಗಿದೆ. ಇಲ್ಲಿಯವರೆಗೂ ಈ ಮದುವೆ ಆಗದಂತೆ ಚಿಕ್ಕಿ ಭಾರ್ಗವಿ ಶತ ಪ್ರಯತ್ನ ಮಾಡುತ್ತಲೇ ಬಂದಿದ್ದಾಳೆ. ಆದರೆ ಎಲ್ಲವೂ ಠುಸ್ ಆಗುತ್ತಲೇ ಇದೆ. ಕೊನೆಯ ಘಳಿಗೆಯಲ್ಲಿ ಸೀತಾಳ ಹೈಡ್ರಾಮಾದಿಂದಾಗಿ ಮದುವೆಯ ಬಗ್ಗೆ ಅನುಮಾನ ಕಾಡಿತ್ತು.
ದೇಸಾಯಿಯವರು ಒಂದು ವರ್ಷದಲ್ಲಿ ಮಗುವನ್ನು ಹೆತ್ತು ಕೊಡುತ್ತಾಳೆ ಎಂದು ಸಂಬಂಧಿಕರ ಎದುರು ಹೇಳಿದಾಗ, ಸಿಹಿ ಬಿಟ್ಟು ಬೇರೆ ಮಗು ನನ್ನ ಜೀವನದಲ್ಲಿ ಬರಬಾರದು ಎಂದುಕೊಂಡಿರೋ ಸೀತಾಳಿಗೆ ಆಘಾತವಾಗಿ ಮದುವೆಯೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಳು. ಈಗ ಎಲ್ಲವೂ ಬಗೆಹರಿದು ಮದುವೆ ನಡೆದಿದೆ. ಅವರಿಬ್ಬರಿಂದ ಸಿಹಿಯನ್ನು ದೂರ ಮಾಡಲು ಭಾರ್ಗವಿ ಪ್ಲ್ಯಾನ್ ಮಾಡುತ್ತಲೇ ಇದ್ದಾಳೆ.
ಗಂಡ-ಹೆಂಡತಿ ಕೋಣೆಯಲ್ಲಿ ಸಿಹಿ ಮಲಗಬಾರದು ಎಂದಿದ್ದಾಳೆ. ಆದರೆ ರಾಮ್ ಸಿಹಿಯನ್ನು ತನ್ನದೇ ಕೋಣೆಯಲ್ಲಿ ಮಲಗಿಸಿಕೊಂಡಿದ್ದಾನೆ. ಹೀಗೆ ಸೀತಾ-ರಾಮ ಪಯಣ ಮುಂದುವರೆದಿದೆ. ಇನ್ನು ಇವೆಲ್ಲದರ ನಡುವೆ ನಡುವೆಯೇ, ಸೀತಾ ಮದುವೆಯಾದ ಖುಷಿಯಲ್ಲಿ ಭರ್ಜರಿ ರೀಲ್ಸ್ ಒಂದನ್ನು ಮಾಡಿದ್ದಾರೆ. ಅಂದಹಾಗೆ ಸೀತಾ ಪಾತ್ರಧಾರಿಯ ಹೆಸರು ವೈಷ್ಣವಿ ಗೌಡ.
https://www.instagram.com/reel/C9ezK8eNgOR/?igsh=YXNmNnJ3anQycTRx
ಬೆಲ್ಲಿ ಡ್ಯಾನ್ಸ್ನಲ್ಲಿಯೂ ಎಕ್ಸ್ಪರ್ಟ್ ಆಗಿರುವ ವೈಷ್ಣವಿ ಅದರದ್ದೇ ರೀಲ್ಸ್ ಮಾಡಿದ್ದಾರೆ. ಸೀತಾರಾಮ ಶೂಟಿಂಗ್ನ ಬಿಡುವಿನ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳನ್ನು ಶೇರ್ ಮಾಡುವ ವೈಷ್ಣವಿ ಇದೀಗ ರೀಲ್ಸ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿಯೂ ವೈಷ್ಣವಿ ಸಕತ್ ಆ್ಯಕ್ಟೀವ್. ಯೂಟ್ಯೂಟ್, ಇನ್ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ಇವರದ್ದೇ ಹವಾ. ಮೇಲಿಂದ ಮೇಲೆ ರೀಲ್ಸ್ಗಳನ್ನು ಮಾಡುತ್ತಲೇ ಇರುತ್ತಾರೆ.
ಕೆಲವೊಮ್ಮೆ ಸೀತಾರಾಮ ಟೀಂ ಜೊತೆ, ಇನ್ನು ಕೆಲವು ಸಲ ಸೀತಾರಾಮ ಸೀರಿಯಲ್ ಮಗಳು ಸಿಹಿ ಜೊತೆ ಹಾಗೂ ಹಲವು ಬಾರಿ ಸಿಂಗಲ್ ಆಗಿ ರೀಲ್ಸ್ ಮಾಡುತ್ತಾರೆ. ಸೀತಾರಾಮ ಸೀರಿಯಲ್ನಲ್ಲಿ ಮದುವೆಯ ಸಂಭ್ರಮದ ನಡುವೆಯೇ ಇದೀಗ ರೀಲ್ಸ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.