ಗೌಡ ಜಾತಿಗೆ ಎಳ್ಳು ನೀರು ಬಿಟ್ಟು, ಹಿಂದಿವಾಲನ ಜೊತೆ ಮದುವೆ ಆಗೋಕೆ‌ ಮುಂದಾದ ವೈಷ್ಣವಿ ಗೌಡ

 | 
ರರಗಗ
ಅಗ್ನಿಸಾಕ್ಷಿ ಧಾರಾವಾಹಿ ನಾಯಕಿ ಸನ್ನಿಧಿ ಖ್ಯಾತಿಯ ವೈಷ್ಣವಿ ಗೌಡ ನವಪಯಣ ಆರಂಭಿಸಲು ಸಜ್ಜಾಗಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಜನಪ್ರಿಯತೆ ಹೊಂದಿರುವ ನಟಿ ಮದುವೆಯ ಮೊದಲ ಹೆಜ್ಜೆ ಎನ್ನುವಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಏಪ್ರಿಲ್​​ 14 ಸೋಮವಾರ ರಾತ್ರಿ ಕಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸಮಾರಂಭ ಜರುಗಿದ್ದು, ಫೋಟೋ ವಿಡಿಯೋಗಳು ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​​ಗಳಲ್ಲಿ ವೈರಲ್​ ಆಗುತ್ತಿವೆ. ಅಭಿಮಾನಿಗಳು ಅಭಿನಂದನೆಗಳ ಮಳೆ ಹರಿಸಿದ್ದಾರೆ.
ಸೆಲೆಬ್ರಿಟಿಗಳೆಂದ ಮೇಲೆ ಮಾಧ್ಯಮ, ಪಾಪರಾಜಿ, ಸೋಷಿಯಲ್​ ಮೀಡಿಯಾಗಳ ಗಮನ ಸಹಜವಾಗೇ ಅವರ ಮೇಲಿರುತ್ತದೆ. ಅಭಿಮಾನಿಗಳು ಮತ್ತು ನೆಟ್ಟಿಗರೂ ಕೂಡಾ ಅವರ ವೃತ್ತಿಜೀವನದ ಜೊತೆ ಜೊತೆಗೆ ವೈಯಕ್ತಿಕ ಜವನದ ಬಗ್ಗೆ ತಿಳಿದುಕೊಳ್ಳಲು ಆಸಕ್ತರಾಗಿರುತ್ತಾರೆ. ಪ್ರೀತಿ ಪ್ರೇಮ, ಮದುವೆ ವಿಷಯಗಳ ಆರಂಭ, ಪಾರ್ಟಿ, ಫ್ರೆಂಡ್ಸ್​ ಹೀಗೆ ಅವರಿಗೆ ಸಂಬಂಧಪಟ್ಟ ಬಹುತೇಕ ವಿಷಯಗಳು ಸೋಷಿಯಲ್​ ಮೀಡಿಯಾಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್​​ ಆಗುತ್ತವೆ. ಅಂಥದರಲ್ಲಿ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಸಮಾರಂಭ ಎಲ್ಲರಿಗೂ ಸರ್ಪೈಸ್​​​ ಆಗಿದೆ.
ನಟಿ ಎಂಗೇಜ್​ಮೆಂಟ್​ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಸಣ್ಣ ಸುಳಿವೂ ಇರಲಿಲ್ಲ. ಮದುವೆ ಬಗ್ಗೆ ಯಾವುದೇ ಅಂತೆಕಂತೆಗಳಿರಲಿಲ್ಲ. ಲವ್, ರಿಲೇಶನ್​ಶಿಪ್​, ಡೇಟಿಂಗ್​ ರೂಮರ್ಸ್​ ಇಲ್ವೇ ಇಲ್ಲ. ಇದ್ದಕ್ಕಿದ್ದಂತೆ ಆನ್​ಲೈನ್​​ನಲ್ಲಿ ಫೋಟೋ ವಿಡಿಯೋಗಳು ವೈರಲ್​​ ಆಗಿವೆ. ಇದನ್ನು ಕಂಡ ಅಭಿಮಾನಿಗಳು ಸಂತಸದ ಜೊತೆ ಸರ್ಪೈಸ್​​​ ಆಗಿದ್ದಾರೆ.ವೈಷ್ಣವಿ ಹಾಗೂ ಅಮೂಲ್ಯ ಬಹಳ ಸಮಯದಿಂದ ಆಪ್ತ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಗೆಳತಿಯ ವಿಶೇಷ ದಿನಕ್ಕೆ ಅಮೂಲ್ಯ ಕುಟುಂಬ ಸಾಕ್ಷಿಯಾಗಿದೆ.
ಕಳೆದ ಸಂಜೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಅಕಾಯ್​​ ಎಂಬ ಉದ್ಯಮಿ ಜೊತೆ ಎಂಗೇಜ್​​ಮೆಂಟ್​ ಮಾಡಿಕೊಂಡಿದ್ದಾರೆ. ಇದು ಆಪ್ತರಿಗಷ್ಟೇ ಸೀಮಿತವಾಗಿದ್ದ ಸಮಾರಂಭ ಎಂಬಂತೆ ತೋರಿದೆ. ನಟಿ ಮಿನುಗುವ ಗೌನ್​​ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಉಂಗುರ ಬದಲಾಯಿಸಿಕೊಂಡ ಕ್ಷಣ ಜೋಡಿಯ ಮೊಗ ಬಹಳ ಪ್ರೀತಿ, ಖುಷಿಯಿಂದ ಕಂಗೊಳಿಸಿದೆ. 
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್​ ಸೀಸನ್​​ 8ಕ್ಕೆ ಎಂಟ್ರಿ ಕೊಟ್ಟಿದ್ದರು. ಅವರ ವಿನಮ್ರ ವ್ಯಕ್ತಿತ್ವ ಬಹುತೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೋವಿಡ್​ ಹಿನ್ನೆಲೆ, ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಒಂದಿಷ್ಟು ಗ್ಯಾಪ್​​​ ಬಳಿಕ ಶೋ ಪುನರಾರಂಭಗೊಂಡಾಗ ನಿರೂಪಕ ಕಿಚ್ಚ ಸುದೀಪ್​ ಮದುವೆ ವಿಚಾರವನ್ನೆತ್ತಿದ್ದರು. ಈ ಗ್ಯಾಪ್​ನಲ್ಲಿ ಬಂದ ಪ್ರಪೋಸಲ್​ ಎಷ್ಟು ಎಂದು ಸುದೀಪ್​ ಕೇಳಿದ್ದ ಪ್ರಶ್ನೆಗೆ ಅಂದಾಜು 300 ಇರಬಹುದು ಎಂದು ಉತ್ತರಿಸಿದ್ದರು. 
ಜೊತೆಗೆ, ನಾನು ನನ್ನ ಮನದ ಮಾತು ಕೇಳುವವಳು. ಯಾವುದೂ ಕನೆಕ್ಟ್​ ಆಗಲಿಲ್ಲ ಎಂದು ಉತ್ತರಿಸಿದ್ದರು. ಇದೀಗ ಅಕಾಯ್​ ಜೊತೆ ದಾಂಪತ್ಯ ಜೀವನ ಆರಂಭಿಸಲು ಸಜ್ಜಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.