ದುಡ್ಡಿನ ಹಿಂದೆ ಬಿದ್ದ ವೈಷ್ಣವಿ ಗೌಡ, ಅಭಿಮಾನಿಗಳಿಗೆ ಯಾಮಾರಿಸಲು ಹೊಸ ಪ್ರಯತ್ನ

 | 
ಕದ
ಈಗಾಗಲೇ ʼದೇವಿʼ, ʼಶುಭ ವಿವಾಹʼ, ʼಅಗ್ನಿಸಾಕ್ಷಿʼ ‘ಸೀತಾರಾಮ’ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ವೈಷ್ಣವಿ ಗೌಡಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಹೀಗಿದ್ದಾಗ್ಯೂ ಎಲ್ಲರ ಕಣ್ಣು ಕೆಂಪಗಾಗಿಸುವ ವೀಡಿಯೋ ಒಂದು ಮಾಡಿದ್ದಾರೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ವಿಚಾರವೊಂದನ್ನು ಹಂಚಿಕೊಂಡಿದ್ದಲ್ಲದೆ ಉದ್ದೇಶಪೂರ್ವಕವಾಗಿ ಕಾಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ್ದಾರೆ.
ಹೌದು, ಜಂಗ್ಲಿ ರಮ್ಮಿ ಗೇಮ್‌ ಆಡುವ ವಿಚಾರದ ಬಗ್ಗೆ ವೈಷ್ಣವಿ ಗೌಡ ಅವರು ವಿಡಿಯೋ ಶೇರ್‌ ಮಾಡಿದ್ದಾರೆ. ಜಂಗ್ಲಿ ರಮ್ಮ ಪ್ರಚಾರ ಮಾಡುವ ವಿಡಿಯೋ ಇದಾಗಿದೆ. ಇನ್ನು ಈ ವಿಡಿಯೋಕ್ಕೆ ಮಾತ್ರ ವೈಷ್ಣವಿ ಗೌಡ ಅವರು ಕಾಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ್ದಾರೆ. ನೆಗೆಟಿವ್‌ ಪ್ರತಿಕ್ರಿಯೆ ಬರುತ್ತದೆ ಎಂದು ಗೊತ್ತಿದ್ದಕ್ಕೆ ವೈಷ್ಣವಿ ಗೌಡ ಅವರು 
ಕಾಮೆಂಟ್‌ ಸೆಕ್ಷನ್‌ ಆಪ್‌ ಮಾಡಿದ್ದಾರೆ. 
https://www.instagram.com/reel/DF4_NctyB2c/?igsh=aWtiYmJjdzVxYnA4
ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸ್ಟಾರ್‌ ನಟರು ಕೂಡ ರಮ್ಮಿ ಆಪ್‌ಗಳನ್ನು ಪ್ರಚಾರ ಮಾಡಿ, ಜನರಿಂದ ನಿಂದನೆಗೊಳಗಾದ ಮೇಲೆ ಅದರಿಂದ ದೂರ ಆಗಿದ್ದುಂಟು, ಕ್ಷಮೆ ಕೇಳಿದ್ದೂ ಇದೆ. ಅಂತದ್ರಲ್ಲಿ ಒಳ್ಳೆಯ ನಟಿ ಅನ್ನಿಸಿಕೊಂಡ ಇವರಿಗೆ ಇದೆಲ್ಲಾ ಬೇಕಿತ್ತಾ ಅನ್ನೋ ಮಾತು ಕೇಳಿಬರುತ್ತಿರೋದಂತೂ ಸತ್ಯ.