ಸೀರಿಯಲ್ ನಲ್ಲಿ ವೈಷ್ಣವ್ ತಾಯಿ, ನಿಜ ಜೀವನದಲ್ಲಿ ಸಕ್ಕತ್ ಹಾಟ್ ಸುಂದರಿ

 | 
Nd
ಪ್ರೀತಿಸಿದ ಹುಡುಗಿ ನಿರಾಕರಿಸಿದ ಕಾರಣಕ್ಕೆ ಹಿರಿಯರು ನೋಡಿದ ಲಕ್ಷ್ಮಿಯನ್ನು ಮದುವೆ ಆಗುವ ವೈಷ್ಣವ್‌, ಪ್ರೀತಿ ವಿಚಾರ ಗೊತ್ತಿದ್ದರೂ ಅಕ್ಕನಿಗಾಗಿ ಆಕೆ ನೋಡಿದ ಹುಡುಗನನ್ನು ಮದುವೆ ಆಗುವ ಲಕ್ಷ್ಮಿ ಸೇರಿದಂತೆ ಬಹುತೇಕ ಎಲ್ಲಾ ಪಾತ್ರಗಳು ವೀಕ್ಷಕರಿಗೆ ಇಷ್ಟವಾಗಿದೆ.ಮುಗ್ಧ ಸೊಸೆ ಮೇಲೆ ಹಾರಾಟ, ಮಗ ಎಂದರೆ ಎಲ್ಲಿಲ್ಲದ ಪ್ರೀತಿ, ಮಗ ತನ್ನಿಂದ ದೂರವಾಗಬಾರದು ಎಂಬ ಸ್ವಾರ್ಥ, ಅತ್ತೆಯ ಶಾಪದ ಭಯ, ಒಟ್ಟಿನಲ್ಲಿ ಕಾವೇರಿ ಬಾಯಿ ಬೊಂಬಾಯಿ ಅಂತ ವೀಕ್ಷಕರು ಕಾವೇರಿ ಅತ್ತೆಯ ಮೇಲೆ ಸದಾ ಕಿಡಿ ಕಾರುತ್ತಾರೆ. 
ಇತ್ತೀಚಿಗಷ್ಟೇ ಮುಗಿದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಪಾತ್ರ ಮಾಡಿರುವ ನಟಿಯ ನಿಜವಾದ ಹೆಸರು ಸುಷ್ಮಾ ನಾಣಯ್ಯ. ಕೊಡಗು ಕುಟುಂಬಕ್ಕೆ ಸೇರಿದ ಸುಷ್ಮಾ ಹುಟ್ಟಿ ಬೆಳೆದದ್ದ ಮೈಸೂರಿನಲ್ಲಿ. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಸುಷ್ಮಾ ಅವರದ್ದು ವಯಸ್ಸಿಗೆ ಮೀರಿದ ಪಾತ್ರ. ಆದರೆ ಪಾತ್ರ ಚೆನ್ನಾಗಿದ್ದರಿಂದ ಸುಷ್ಮಾ ನಟಿಸಲು ಒಪ್ಪಿದ್ದಾರೆ. ಸುಷ್ಮಾ ನಾಣಯ್ಯ ರಂಗಭೂಮಿ ಕಲಾವಿದೆ. ಕಾಲೇಜಿನಲ್ಲಿರುವಾಗಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಈ ಕೊಡಗು ಚೆಲುವೆ ಸದ್ಯಕ್ಕೆ ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 
ಮೈಸೂರು ಯೂನಿವರ್ಸಿಟಿಯಲ್ಲಿ ಮೈಕ್ರೋ ಬಯೋಲಜಿ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಸುಷ್ಮಾಗೆ ನಟನೆಯಲ್ಲಿ ಆಸಕ್ತಿ ಇದ್ದಿದ್ದರಿಂದ ಆಡಿಷನ್‌ಗಳಲ್ಲಿ ಭಾಗವಹಿಸಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಗಳಿಸಿದರು. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಟಿಸುವ ಮುನ್ನ ಸುಷ್ಮಾ ಅಶ್ವಿನಿ ನಕ್ಷತ್ರ, ಭಾಗ್ಯವತಿ, ರಥಸಪ್ತಮಿ, ಮಹಾಭಾರತ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ವೈಯಕ್ತಿಕ ಕಾರಣಗಳಿಂದ ನಟನೆಯಿಂದ ದೂರವಿದ್ದ ಸುಷ್ಮಾ ಸುಮಾರು 6 ವರ್ಷಗಳ ಬಳಿಕ ಮತ್ತೆ ಕಂ ಬ್ಯಾಕ್‌ ಮಾಡಿದ್ದಾರೆ.
ಇನ್ನೇನು ಧಾರವಾಹಿ ಮುಗಿದ ಬೆನ್ನಲ್ಲೇ ನಟಿ ಸುಷ್ಮಾ ನಾಣಯ್ಯ ಅವರು ಹೊಚ್ಚ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಹುಂಡೈ ವರ್ನಾ 1.5 ವಿಟಿವಿಟಿ ಎಸ್‌ಎಕ್ಸ್ ಕಾರನ್ನು ಖರೀದಿ ಮಾಡಿದ ಖುಷಿಯಲ್ಲಿದ್ದಾರೆ. ಇನ್ನೂ, ನಟಿ ಖರೀದಿ ಮಾಡಿದ ಕಾರು ₹15.9 ಲಕ್ಷ ರೂಪಾಯಿದ್ದಾಗಿದೆ ಎಂದು ಅಂದಾಜಿಸಲಾಗಿದೆ. ನಟಿ ಸುಷ್ಮಾ ನಾಣಯ್ಯ, ಪತಿ ಹಾಗೂ ಮಗಳು ಹೊಸ ಕಾರಿನ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅದೇ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಸುಷ್ಮಾ ನಾಣಯ್ಯ ಅವರಿಗೆ ನಾಲ್ಕು ವರ್ಷದ ಮಗಳಿದ್ದಾಳೆ. ಸದ್ಯ ಸೀರಿಯಲ್​ ಮುಕ್ತಾಯದ ಬೆನ್ನಲ್ಲೇ ನಟಿ ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.