ವರ್ತೂರ್ ಸಂತು ಸಂಸಾರ ಬೀದಿಪಾಲು, ಮಡೆನೂರು ಮನುಗೆ ವಾ ರ್ನಿಂಗ್ ಕೊಟ್ಟಿದ್ದ ವರ್ತೂರ್ ಸಂತು
Jul 2, 2025, 15:22 IST
|

ಇನ್ನು ಚಿತ್ರರಂಗದಿಂದ ಮನು ಅವರನ್ನ ಬಹುತೇಕ ಬ್ಯಾನ್ ಮಾಡಿರುವ ಸ್ಥಿತಿ ಇದೆ. ಇದೀಗ ಮಡೆನೂರು ಮನುಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಗ್‌ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ಮನು ವಿರುದ್ಧ ತೊಡೆತಟ್ಟಿದ್ದಾರೆ. ಇಷ್ಟಕ್ಕೂ ಮನು ಹಾಗೂ ವರ್ತೂರು ಸಂತೋಷ್ ನಡುವಿನ ಕಿರಿಕ್ ಏನು ಗೊತ್ತಾ?ಮಡೆನೂರು ಮನು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ವಿನ್ನರ್. ತಮ್ಮ ಹಾಸ್ಯದಿಂದ ಎಲ್ಲರನ್ನೂ ನಕ್ಕು ನಲಿಸಿದ್ದರು. ಇದೇ ಹುರುಪಿನಲ್ಲಿ ಅವರು ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಮಿಂಚಬೇಕು ಎಂಬ ಕನಸು ಕಂಡಿದ್ದರು. ಆ ಕನಸು ಕೂಡ ಈಡೇರಿದೆ. ಆದರೆ ಇದೇ ಹೊತ್ತಲ್ಲಿ ಅವರ ಮೇಲೆ ಸಾಲು ಸಾಲು ಆರೋಪಗಳು ಕೇಳಿಬಂದಿದ್ದಲ್ಲದೆ, ತನ್ನ ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲು ಸೇರಿದ್ದರು.
ಕಿರುತೆರೆ ನಟಿಯೊಬ್ಬರು ಮನು ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಬಳಿಕ ಜೈಲು ಸೇರಿದ ಮೇಲೆ ಮನು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಚಲನ ಸೃಷ್ಟಿಸಿತ್ತು. ಇದರಲ್ಲಿ ಶಿವಣ್ಣ ಹಾಗೂ ದರ್ಶನ್ ಸಾಯ್ತಾರೆ ಎಂದೆಲ್ಲ ಹೇಳಲಾಗಿತ್ತು. ಈ ಹಿನ್ನೆಲೆ ಮನು ಅವರನ್ನ ಬ್ಯಾನ್ ಮಾಡುವುದಾಗಿ ಫಿಲ್ಮ್ ಚೇಂಬರ್ ಹೇಳಿತ್ತು.ಸದ್ಯ ಕೇಸ್‌ನಿಂದ ಜಾಮೀನು ಸಿಕ್ಕಿ ರಿಲೀಫ್ ಆಗುವ ಹೊತ್ತಿಗೆ ಮಡೆನೂರು ಮನುಗೆ ದೊಡ್ಡ ಆಘಾತವೇ ಎದುರಾಗಿದೆ. ಆ ಆಡಿಯೋ ವೈರಲ್ ಆಗಿರುವುದಕ್ಕೆ ಸ್ಪಷ್ಟನೆ ನೀಡುತ್ತಾ ನಟರ ಬಳಿ ಕ್ಷಮೆ ಕೇಳಲು ಮನು ತನ್ನ ಕುಟುಂಬದೊಂದಿಗೆ ಅಲೆದಾಡುತ್ತಿದ್ದಾರೆ.
ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ಹಳ್ಳಿಕಾರ್ ಒಡೆಯ ಖ್ಯಾತಿಯ ವರ್ತೂರು ಸಂತೋಷ್ ಕೂಡ ಮನು ವಿರುದ್ಧ ಗುಡುಗಿದ್ದಾರೆ. ವರ್ತೂರು ಸಂತೋಷ್ ಅವರು ನೋವಿನಿಂದ ಹೇಳಿದ್ದ ಮಾತುಗಳನ್ನು ಮನು ಈ ಹಿಂದೆ ಮಿಮಿಕ್ರಿ ಮಾಡಿದ್ದರು. ಇದರಿಂದ ಸಂತೋಷ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬರ ನೋವನ್ನು ಆ ರೀತಿ ಅನುಕರಣೆ ಮಾಡುವುದು ಸರಿಯೇ ಎಂದು ಮನುಗೆ ಪ್ರಶ್ನೆ ಮಾಡಿದ್ದಾರೆ
ಕಲೆಗೆ ಬೆಲೆ ಕೊಟ್ಟವನು ಕಲಾವಿದ. ನಾನು ಎಷ್ಟೋ ಒಳ್ಳೆಯ ಮಾತುಗಳನ್ನ ಹೇಳಿದ್ದೀನಿ, ಅದನ್ನ ಮನು ಇಮಿಟೇಟ್ ಮಾಡಿಲ್ಲ. ಆದರೆ ಒಬ್ಬ ವ್ಯಕ್ತಿ ದುಃಖದಲ್ಲಿ ಹೇಳಿದ ಮಾತುಗಳು ನಿನಗೆ ಅಷ್ಟೊಂದು ಜೋಕ್ ಅನಿಸಿತಾ? ಎಂದು ಕೇಳಿದ್ದಾರೆ. ಯಾರೇ ಆಗಲಿ ನೈತಿಕತೆ ಅನ್ನೋದು ಇರಬೇಕು. ಇಂತಹ ಅವಿವೇಕಿ ಹೀಗೆ ಮಾಡುವಾಗ ದೂರವಾದ್ರೂ ಸರಿಯಬೇಕಿತ್ತು. ನನ್ನ ಮಿಮಿಕ್ರಿ ಮಾಡಿರುವ ವಿಡಿಯೋ ನೋಡಿ ಮನಸ್ಸಿಗೆ ಬೇಜಾರಾಯ್ತು, ಅದು ಒಬ್ಬರನ್ನ ಕೆಳಗೆ ಹಾಕುವಂತಿತ್ತು ಎಂದು ವರ್ತೂರು ಹರಿಹಾಯ್ದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,17 Jul 2025