ವರ್ತೂರು ಸಂತು ಎರಡನೇ ಮದುವೆ; 'ಬೆಂಕಿಯಿಂದ ಬದಲಾದ ಜೀವನ'

 | 
Uu

ಈ ವರ್ಷ ಮುಕ್ತಾಯವಾದ ಬಿಗ್ ಬಾಸ್ ಮನೆಯಲ್ಲಿ, ವ್ಯೆಯಕ್ತಿಕ ವಿಚಾರಗಳಿಂದ ಚರ್ಚೆಗೀಡಾದ ವ್ಯಕ್ತಿ ವರ್ತೂರು ಸಂತೋಷ್. ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಮೇಲೆ ಮೊದಲು ಹುಲಿ ಉಗುರು ಪೆಂಡೆಂಟ್ ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿದ್ದ ವರ್ತೂರು ಸಂತೋಷ್ ಆ ನಂತರ ಸುದ್ದಿಯಾಗಿದ್ದು ಮದುವೆ ವಿಚಾರದಿಂದ.

ಮದುವೆಯಾಗಿದ್ದರು ಮದುವೆಯಾಗಿಲ್ಲವೆಂದು ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದೇ ತಡ, ಇದ್ದಕ್ಕಿದ್ದಂತೆ ರೊಚ್ಚಿಗೆದ್ದಿದ್ದ ಸೋಮನಾಥ್, ಅಳಿಯ ವರ್ತೂರು ಸಂತೋಷ್‌ ಮೇಲೆ ಗಂಭೀರ ಆರೋಪಗಳನ್ನ ಮಾಡಿದ್ದರು. ಆ ಎಲ್ಲ ಆರೋಪಗಳಿಗೆ ಉತ್ತರವನ್ನ ಕೇಳುವ ಪ್ರಯತ್ನವನ್ನ ಇಂದು ಮಾಡಲಾಯಿತು.

ವ್ಯೆಯಕ್ತಿಕ ವಿಚಾರವಾದರೂ ಆರೋಪಗಳಿಗೆ, ಸ್ಪಷ್ಟೀಕರಣವನ್ನಾದರೂ ನೀಡಿಯೆಂಬ ಪ್ರಶ್ನೆಯನ್ನ ವರ್ತೂರ್ ಸಂತೋಷ್ ಅವರಿಗೆ ಕೇಳಲಾಯಿತು. ಆದರೆ.. ವರ್ತೂರ್ ಸಂತೋಷ್ ಇದಕ್ಕೆ ಉತ್ತರವನ್ನ ನೀಡಲಿಲ್ಲ. ಬದಲಿಗೆ ಉರಿದು ಬಿದ್ದರು. 

ವ್ಯೆಯಕ್ತಿಕ ವಿಚಾರಗಳನ್ನ ಸಾರ್ವಜನಿಕವಾಗಿ ಹೇಳುವಂತಹ ಮುಠ್ಠಾಳ ನಾನಲ್ಲವೆಂದಿರುವ ವರ್ತೂರ್ ಸಂತೋಷ್, ಮುಠ್ಠಾಳರು ಮುಠ್ಠಾಳತನದ ಕೆಲಸ ಮಾಡಿದ್ದಾರೆ ಅಂದರೆ ನಾನು ಅವರ ಮಟ್ಟಕ್ಕೆ ಇಳಿಯಲು ಸಾಧ್ಯ ಇಲ್ಲವೆಂದು ಕೆಂಡ ಕಾರಿದರು. ಇನ್ನು ತನಿಶಾ ಅವರನ್ನು ಎರಡನೇ ಮದುವೆ ಆಗಲು ವರ್ತೂರ್ ಸಂತೋಷ್ ತಾಯಿ ಒಪ್ಪಿದ್ದಾರೆ ಎನ್ನಲಾಗುತ್ತಿದೆ ಆದರೆ ಈ ಬಗ್ಗೆ ಆಸಕ್ತಿಯಿಲ್ಲ ಎಂದು ವರ್ತೂರ್ ಸಂತೋಷ್ ನಿರಾಕರಿಸಿದ್ದಾರೆ.