ಕೊನೆಗೂ ತಮ್ಮ ಮುದ್ದಿನ ಮಗುವಿನ ಮುಖ ದರ್ಶನ ಮಾಡಿದ ವಸಿಷ್ಠ ಹಾಗೂ ಹರಿಪ್ರಿಯಾ
Mar 1, 2025, 09:34 IST
|

ಮಕ್ಕಳೆಂದರೆ ಮನೆ ಮಂದಿಗೆಲ್ಲ ಪ್ರಾಣ. ಹೌದು ಸ್ಯಾಂಡಲ್ವುಡ್ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದೀಪಾವಳಿ ಹಬ್ಬದ ದಿನವೇ ಅಭಿಮಾನಿಗಳ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದರು.
ಹೌದು, ಚಂದನವನದ ಈ ಮುದ್ದಾದ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಹಿಂದೆ ಫ್ಯಾನ್ಸ್ ಗೇಸ್ ಮಾಡಿದ್ದರು. ನಟಿ ಹರಿಪ್ರಿಯಾ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಗರ್ಭಿಣಿ ಹಾಗೇ ಕಾಣಿಸಿಕೊಂಡಿದ್ದರು.
ವಿಶೇಷ ಏನೆಂದರೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಮದುವೆ ಆದ ದಿನಾಂಕದಲ್ಲೇ ಗಂಡು ಮಗು ಜನಿಸಿದೆ.ಈ ಜೋಡಿಯ ಮದುವೆ ನೆರವೇರಿದ್ದು 2023ರ ಜನವರಿ 26ರಂದು. ಸರಿಯಾಗಿ 2 ವರ್ಷದ ಬಳಿಕ, ಅಂದರೆ 2025ರ ಜನವರಿ 26ರಂದು ಪುತ್ರನ ಆಗಮನ ಆಗಿದೆ. ‘ನಮ್ಮ ಮದುವೆ ದಿನವೇ ಅವನು ಬಂದಿದ್ದಾನೆ ಎಂದು ವಸಿಷ್ಠ ಸಿಂಹ ಅವರು ಪೋಸ್ಟ್ ಮಾಡಿದ್ದರು.
ಈಗ ಈ ಸ್ಟಾರ್ ದಂಪತಿ ತಮ್ಮ ಮುದ್ದಾದ ಮಗುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ವಿಶೇಷವಾದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶೇಷ ಎಂದರೆ ಮಹಾ ಶಿವರಾತ್ರಿ ದಿನವೇ ಮುದ್ದಾದ ಮಗನನ್ನು ಮನೆಗೆ ವೆಲ್ಕಮ್ ಹೇಳಿದ್ದಾರೆ. ಶಿವನ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಹರಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.