ದಾನ ಶೂರ ಕಣ೯ ಸಿಎಂ ಸಿದ್ದರಾಮಯ್ಯ ಬಳಿ ವಿಶೇಷ ಮನವಿ ಮಾಡಿದ ವತೂ೯ರ್ ಸಂತೋಷ್, ಅದೇನು ಗೊತ್ತಾ

 | 
ಕೀ

ಜಗಳವಾಡುವುದಕ್ಕಾಗಿ ಇಲ್ಲಿಗೆ ಬಂದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ ವರ್ತೂರು ಹಲವು ಬಾರಿ ತಾಳ್ಮೆ ಕಳೆದುಕೊಂಡುಮಾತಾಡಿದ್ದಿದೆ. ಆದರೆ ಯಾರ ವಿರುದ್ಧವೂ ಹದತಪ್ಪಿ ಮಾತಾಡಿಲ್ಲ. ಅವಹೇಳನ ಮಾಡಿಲ್ಲ. ತಮ್ಮ ಮುಗ್ಧತೆಯಿಂದಲೇ ಮನೆಯ ಸದಸ್ಯರ ಮೆಚ್ಚುಗೆಯನ್ನು ಪಡೆದುಕೊಂಡಿರುವ ಅವರು ಮನೆಯ ಹೊರಗೂ ಇದೇ ಕಾರಣಕ್ಕೆ ಜನರಿಂದ ಪ್ರೀತಿಯನ್ನು ಗಳಿಸಿಕೊಂಡಿದ್ದರು. 

ಮುಗ್ಧತೆ, ಬದ್ಧತೆ ಎರಡನ್ನೂ ಸೇರಿಸಿ ಎರಕ ಹೊಯ್ದಂತಿರುವ ವರ್ತೂರು ಸಂತೋಷ್ ಅವರು ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಸಾಕಷ್ಟು ನೆನಪುಗಳನ್ನು ಬಿಗ್‌ಬಾಸ್ ಮನೆಯೊಳಗಿಂದ ಹೊತ್ತು ಬಂದಿದ್ದಾರೆ. ಬಿಗ್‌ಬಾಸ್ ಮನೆಯ ಬೆಂಕಿ ಎಂದೇ ಖ್ಯಾತರಾಗಿದ್ದ ತನಿಷಾ ಜೊತೆಗಿನ ವರ್ತೂರು ಒಡನಾಟ ಹಲವು ರಸಪ್ರಸಂಗಗಳನ್ನು ಸೃಷ್ಟಿಸಿತ್ತು. ತನಿಷಾ, ವರ್ತೂರು ಅವರ ಕಾಲಿಗೆ ಮಸಾಜ್ ಮಾಡುವುದೇನು, ವರ್ತೂರು, ತನಿಷಾ ಅವರ ಮಡಿಲಲ್ಲಿ ಮಲಗುವುದೇನು…. ಪರಸ್ಪರ ಮಾತುಗಳನ್ನು ಹಂಚಿಕೊಳ್ಳುವುದೇನು… ಇದೊಂದು ತಮಾಷೆಯ ಟ್ರ್ಯಾಕ್ ಆಗಿ ಸಖತ್ ಹಿಟ್ ಆಗಿತ್ತು.

ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಇಬ್ಬರ ಜೋಡಿ ಸಂತು-ಪಂತು ಜೋಡಿ ಎಂದೇ ಮನೆಯೊಳಗೆ ಜನಪ್ರಿಯವಾಗಿತ್ತು. ಅವರಿಬ್ಬರೂ ಸೇರಿ ಬಿನ್‌ ಬ್ಯಾಗ್‌ನಲ್ಲಿ ಕೂತು ಆಡಿದ ಮಾತುಗಳಿಗೆ ಲೆಕ್ಕವಿಲ್ಲ. ಮಾಡಿದ ತಂತ್ರಗಳಿಗೆ ಮೇರೆಯೇ ಇಲ್ಲ. ಬರೀ ತಂತ್ರಗಾರಿಕೆ, ಉಳಿದವರ ಬಗ್ಗೆ ಚಾಡಿಯಷ್ಟೇ ಅಲ್ಲ, ತಮ್ಮಕಷ್ಟಸುಖಗಳನ್ನೂ ಹಂಚಿಕೊಂಡಿದ್ದಾರೆ. ಸಂತೈಸಿಕೊಂಡಿದ್ದಾರೆ. ಅವರಿಬ್ಬರ ಸ್ನೇಹಬಂಧನ ಗಟ್ಟಿಗೊಂಡಿದ್ದೇ ಬಾಲ್ಕನಿ ಮೇಲಿನ ಬಿನ್‌ಬ್ಯಾಗ್‌ನಲ್ಲಿ.

ಒಬ್ಬರಿಗೊಬ್ಬರು ಯಾವ ಸಂದರ್ಭದಲ್ಲಿಯೂ ಬಿಟ್ಟುಕೊಡದ ಅವರ ಸ್ನೇಹದ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ‘ಅಪರೂಪದ ನಿಷ್ಕಳಂಕ ಸ್ನೇಹ ವಿದು’ ಎಂದು ಉದ್ಘರಿಸಿದ್ದಿದೆ. 
ಇನ್ನು ವರ್ತೂರ್ ಸಂತೋಷ್ ಅವರು ಹಳ್ಳಿಕಾರ್ ತಳಿಯ ಹಸುಗಳನ್ನು ಸಾಕಿದ್ದಾರೆ ಎನ್ನೋದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಅವರು ಸರ್ಕಾರದ ಮುಂದೆ ಇನ್ನುಮುಂದೆ ಡೈರಿಗಳ ಮುಂದೆ ಕೇವಲ ಹಸುಗಳ ಚಿತ್ರ ಮಾತ್ರವಲ್ಲ ಹಳ್ಳಿಕಾರ್ ತಳಿಯ ಚಿತ್ರಗಳನ್ನು ಹಾಕಿ ನಮ್ಮ ಕೀರ್ತಿ ಹೆಚ್ಚುತ್ತದೆ ಎಂದು ಮನವಿ ಮಾಡಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.