ಹಿರಿಯ ನಟಿ ಮಾಧವಿ ಮನೆಯಲ್ಲಿ ಐಶಾರಾಮಿ ಕ್ರಿಸ್ಮಸ್ ಹಬ್ಬ ಆಚರಣೆ
ನಟಿ ಮಾಧವಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.ಭಾರತೀಯ ಸಿನಿಮಾರಂಗದ ಒಂದು ಕಾಲದ ಸ್ಟಾರ್ ನಟಿ ಮಾಧವಿ, ಸದ್ಯ ಸಿನಿಮಾ ಅಂಗಳದಿಂದ ದೂರವೇ ಉಳಿದಿದ್ದಾರೆ. ವಿದೇಶದಲ್ಲಿ ಗಂಡ, ಮೂವರು ಹೆಣ್ಣು ಮಕ್ಕಳ ಜತೆಗೆ ಅಲ್ಲಿಯೇ ನೆಲೆಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಿರುವ 61 ವರ್ಷದ ಈ ಹಿರಿಯ ನಟಿ, ಇದೀಗ ಕುಟುಂಬದ ಜತೆಗೆ ಕ್ರಿಸ್‌ಮಸ್ ಆಚರಿಸಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗವನ್ನಾಳಿದ ಬಹುಭಾಷಾ ನಟಿ ಮಾಧವಿ, ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕನ್ನಡದಲ್ಲಿ ಡಾ. ರಾಜ್‌ಕುಮಾರ್, ಅಂಬರೀಶ್, ವಿಷ್ಣುವರ್ಧನ್, ತಮಿಳಿನ ರಜಿನಿಕಾಂತ್, ತೆಲುಗಿನಲ್ಲಿ ಚಿರಂಜೀವಿ ಸೇರಿ ಹತ್ತಾರು ಸ್ಟಾರ್ ನಟರ ಜತೆಗೆ ತೆರೆಹಂಚಿಕೊಂಡಿದ್ದಾರೆ ಮಾಧವಿ.
ಸೌತ್‌ನ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ನಟಿ.ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ 1996ರಲ್ಲಿ ಉದ್ಯಮಿ ರಾಲ್ಫ್ ಶರ್ಮಾ ಜತೆಗೆ ಮಾಧವಿ ಬಾಳ ಬಂಧನಕ್ಕೆ ಕಾಲಿರಿಸಿದರು. ಮದುವೆ ಆದ ಬಳಿಕ ಸಿನಿಮಾದಿಂದಲೂ ಅವರು ದೂರ ಸರಿದರು.
ಉದ್ಯಮದ ಹಿನ್ನೆಲೆಯಲ್ಲಿ ಪತಿ ರಾಲ್ಫ್ ಜತೆಯಲ್ಲಿ ಅಮೆರಿಕಾದ ನ್ಯೂಜೆರ್ಸಿಯಲ್ಲಿಯೇ ಮಾಧವಿ ನೆಲೆಸಿದ್ದಾರೆ. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಈ ನಟಿ, ತಮ್ಮ ಮೂವರು ಪುತ್ರಿಯರ ಜತೆಗಿರುವ ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.