ಜನ್ಮ ಕೊಟ್ಟ ಹಿಂದೂ ಧಮ೯ವನ್ನು ಬಿಟ್ಟು ಕ್ರೈಸ್ತ ಧಮ೯ಕ್ಕೆ ಮತಾಂತರ ಆಗಿದ್ದು ಯಾಕೆ, ಹಿರಿಯ ನಟಿ ಮಹಾಲಕ್ಷ್ಮಿ ರೋಚಕ ಕಥೆ ಇಲ್ಲಿದೆ

ಕನ್ನಡ ಚಿತ್ರರಂಗದಲ್ಲಿ ಮಿಂಚಿರುವ ಹೆಸರಾಂತ ನಾಯಕಿ ಮಹಾಲಕ್ಷ್ಮಿ 30 ವರ್ಷಗಳ ನಂತರ ಮತ್ತೆ ಕಿರುತೆರೆ ಮತ್ತು ಬೆಳ್ಳಿ ತೆರೆಗೆ ಕಾಲಿಡುತ್ತಿದ್ದಾರೆ. ಈ ನಡುವೆ ಮಾಧ್ಯಮಗಳ ಜೊತೆ ಮಾತನಾಡಿ ತಾವು ಕನ್ವರ್ಟ್ ಆಗಿರುವುದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಗಾಳಿ ಮಾತುಗಳಿಗೆ ನಾನು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ರೂಮರ್ ಎಂದು ಹೇಳುವುದು ಯಾಕೆ? ಅದು ಸತ್ಯ ಅಥವಾ ಸುಳ್ಳು ಎರಡೂ ಆಗಿರಬಹುದು. ಖಂಡಿತವಾಗಿಯೂ ನಾನು ಗಾಸಿಪ್‌ಗಳಿಗೆ ತಲೆ ಕೊಡುವುದಿಲ್ಲ ನಿರ್ಲಕ್ಷ್ಯ ಮಾಡುತ್ತೀನಿ. ನಾನು ಕ್ರಿಶ್ಚಿಯನ್.
ಕನ್ವರ್ಟೆಡ್ ಕ್ರಿಶ್ಚಿಯನ್ ಅನ್ನೋ ವಿಚಾರವನ್ನು ಧೈರ್ಯವಾಗಿ ಹೇಳುತ್ತೀನಿ. ನನ್ನ ಬಗ್ಗೆ ಬಂದಿರುವ ಸುದ್ದಿಗಳು ಎಲ್ಲಾ ಗಾಸಿಪ್‌ಗಳು ಎಂದು ಈಗಾಗಲೆ ಹಲವು ಮಾಧ್ಯಮಗಳ ಮೂಲಕ ಸ್ಪಷ್ಟನೆ ಕೊಟ್ಟಿದ್ದೀನಿ. ನಾನು Nun ಆಗಿರುವುದು ಶುದ್ಧ ಸುಳ್ಳು ಹಾಗೆ ಸಾಧ್ಯವೂ ಇಲ್ಲ ಏಕೆಂದರೆ ನಾನು ಪಕ್ಕಾ ಫ್ಯಾಮಿಲಿ ಮಹಿಳೆ ಎಂದು ಮಹಾಲಕ್ಷ್ಮಿ ಮಾತನಾಡಿದ್ದಾರೆ.
ಅಮರ್ ಸಿನಿಮಾದಲ್ಲಿ ನನ್ನ ಜೀವನದ ಕಥೆ ಹಿಡಿದುಕೊಂಡು ಸಿನಿಮಾ ಮಾಡಿರುವುದು ಎನ್ನುತ್ತಾರೆ ಆದರೆ ಸಿನಿಮಾ ಅನ್ನೋದು ನಿರ್ದೇಶಕರ ಇಮ್ಯಾಜಿನೇಷಕ್ ಅದರ ಬಗ್ಗೆ ನಾನು ಏನೂ ಹೇಳುವುದಕ್ಕೆ ಆಗಲ್ಲ. ಸಿನಿಮಾ ರಿಲೀಸ್ ಆದ ಮೇಲೆ ಜನರು ಮಾತನಾಡಿದ್ದರು. ಚಿತ್ರತಂಡದವರನ್ನು ಸಂಪರ್ಕಿಸಿ ಈ ವಿಚಾರದ ಬಗ್ಗೆ ಕೇಳುವ ಪ್ರಯತ್ನ ಕೂಡ ಮಾಡಲಿಲ್ಲ ಅದೆಲ್ಲಾ ಸಮಯ ವ್ಯರ್ಥ ಮಾಡುತ್ತದೆ ಎಂದು ಮಹಾಲಕ್ಷ್ಮಿ ಹೇಳಿದ್ದಾರೆ.
ನನ್ನ ಜೀವನ ಚೆನ್ನಾಗಿದೆ. ನನ್ನ ಫ್ಯಾಮಿಲಿಯನ್ನು ಕ್ಯಾಮೆರಾ ಮುಂದೆ ತರುವುದಿಲ್ಲ ನನಗೆ ಇಷ್ಟವಿಲ್ಲ ವೈಯಕ್ತಿಕ ಮತ್ತು ವೃತ್ತಿ ಜೀವನ ಬೇರೆ ಬೇರೆ. ಗಾಸಿಪ್‌ಗಳು ಸಾಕಷ್ಟು ಇರುತ್ತದೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಮರ್ ಸಿನಿಮಾದಲ್ಲಿ ನನ್ನ ಕಥೆ ಹಾಗೆ ಹೀಗೆ ಎಂದು ಮಾಡುತ್ತಿದ್ದರು ಅದು ಸುಳ್ಳು ನಾನು ಪಾದ್ರಿಯಾಗಿಲ್ಲ ನನಗೆ ಫ್ಯಾಮಿಲಿ ಇದೆ ಖುಷಿಯಾಗಿದ್ದೀನಿ ಹೀಗಿರುವಾಗ ನಾನು ಯಾಕೆ ತಲೆ ಕೆಡಿಸಿಕೊಂಡು ವಿಚಾರಿಸಬೇಕು ಎಂದು ಕಿಡಿಕಾರಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ